ಕನ್ನಡ ಕಾವ್ಯ ಪರಂಪರೆಯಲ್ಲಿ ಪ್ರೀತಿಯ ನೆಲೆಗಳು

Author : ವಿಜಯಾ ಸುಬ್ಬರಾಜ್

Pages 132

₹ 65.00




Year of Publication: 2007
Published by: ಎಲ್.ಎನ್. ಜಿ. ಪಬ್ಲಿಕೇಷನ್ಸ್
Address: 2, ಮುನೇಶ್ವರ ಬ್ಲಾಕಿನ ಎರಡನೆಯ ಕ್ರಾಸ್, ರಾಜಮಹಲ್ ಗುಟ್ಟಹಳ್ಳಿ, ಬೆಂಗಳೂರು- 560003

Synopsys

‘ಕನ್ನಡ ಕಾವ್ಯ ಪರಂಪರೆಯಲ್ಲಿ ಪ್ರೀತಿಯ ನೆಲೆಗಳು’ ಡಾ. ವಿಜಯಾ ಸುಬ್ಬರಾಜ್ ಅವರ ವಿಶೇಷ ಕೃತಿ. ಕನ್ನಡ ಸಾಹಿತ್ಯ ಲೋಕದ ಮಹತ್ವದ ಕೃತಿ ಎನ್ನಬಹುದು. ಪಂಪನ ಆದಿ ಪುರಾಣದ ‘ಲಲಿತಾಂಗ-ಸ್ವಯಂಪ್ರಭ’ ಪ್ರಸಂಗ, ಅದೇ ಆದಿ ಪುರಾಣದ ವಜ್ರ ಜಂಘ-ಶ್ರೀಮತಿ ಪ್ರಸಂಗ, ನಾಗವರ್ಮನ ಕರ್ಣಾಟಕ ಕಾದಂಬರಿಯ ಮಹಾಶ್ವೇತೆ-ಪುಂಡರೀಕ ಪ್ರಸಂಗ, ನಾಗ ಚಂದ್ರನ ರಾಮಚಂದ್ರ ಚರಿತ ಪುರಾಣದಲ್ಲಿಯ ಸೀತಾಪಹರಣ ಪ್ರಸಂಗ, ಹಾಗೂ ಉಪರಂಭೆ-ರಾವಣ ಪ್ರಸಂಗ, ಜನ್ನನ ಯಶೋಧರ ಚರಿತೆಯಲ್ಲಿನ ಅಮೃತಮತಿ-ಅಷ್ಟಾವಕ್ರ ಪ್ರಸಂಗ, ಹರಿಹರನ ಮಲುಹಣ ರಗಳೆಯಲ್ಲಿಯ ಮಲುಹಣ-ಮಲುಹಣಿ-ಪ್ರಸಂಗ, ರಾಘವಾಂಕನ ಸತ್ಯಹರಿಶ್ಚಂದ್ರ ಕಾವ್ಯ ಹರಿಶ್ಚಂದ್ರ ಪ್ರಸಂಗ, ಕುಮಾರವ್ಯಾಸನ ಕರ್ಣಾಟಕ ಭಾರತ ಕಥಾಮಂಜರಿಯಲ್ಲಿಯ ಪಾಂಡು-ಮಾದ್ರಿ ಪ್ರಸಂಗ, ಅದೇ ಕರ್ಣಾಟ, ಭಾರತ ಕಥಾ ಮಂಜರಿಯಲ್ಲಿಯ ಶಂತನು-ಸತ್ಯಾವತಿ ಪ್ರಸಂಗ ಸೇರಿದಂತೆ ಹಲವು ಕಾವ್ಯಗಳ ವಿಶ್ಲೇಷಣೆ ಇಲ್ಲಿದೆ.

About the Author

ವಿಜಯಾ ಸುಬ್ಬರಾಜ್
(20 April 1947)

ವಿಜಯಾ ಸುಬ್ಬರಾಜ್ ಅವರು ಬೆಂಗಳೂರಿನಲ್ಲಿ 1947 ಏಪ್ರಿಲ್‌ 20ರಂದು ಜನಿಸಿದರು. ತಾಯಿ ಲಕ್ಷ್ಮಿ, ತಂದೆ ಸೀತಾರಾಂ. ಇಂಗ್ಲಿಷ್‌ ಮತ್ತು ಕನ್ನಡ ಭಾಷೆಯಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ.  ಕನ್ನಡ ಸಾಹಿತ್ಯ ಕ್ಷೇತ್ರದ ಕೃಷಿಯಲ್ಲಿ ತೊಡಗಿಕೊಂಡಿರುವ ಇವರು ಬಿಯುಸಿಟಿಎ ನ ಉಪಾಧ್ಯಕ್ಷೆ, ಕನ್ನಡ ನುಡಿ ನಿಯತಕಾಲಿಕೆಯ ಸಂಪಾದಕಿ, ನಂಜನಗೂಡು ತಿರುಮಲಾಂಬ ಪ್ರಶಸ್ತಿ ಆಯ್ಕೆ ಸಮಿತಿಯ ಸದಸ್ಯರಾಗಿದ್ದಾರೆ. ಕರ್ನಾಟಕ ಲೇಖಕಿಯರ ಸಂಘದ ಉಪಾಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.  ವಿಜಯಾ ಅವರಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಪುರಸ್ಕಾರ, ಕನ್ನಡ ಸಾಹಿತ್ಯ ಪರಿಷತ್ತಿನ ನೀಲಗಂಗಾ ಪ್ರಶಸ್ತಿ, ಅತ್ತಿಮಬ್ಬೆ ಪ್ರಶಸ್ತಿ, ...

READ MORE

Related Books