ಶ್ರೀ ಕುವೆಂಪು ಬದುಕು ಮತ್ತು ಸಾಹಿತ್ಯ

Author : ಗುರುಪಾದ ಮರಿಗುದ್ದಿ

Pages 244

₹ 200.00




Year of Publication: 2015
Published by: ಶ್ರೀ ಶಕ್ತಿ ಪ್ರಿಂಟರ್ಸ್‌ ಆಂಡ್‌ ಪಬ್ಲಿಷರ್ಸ
Address: ನಂ: 277, 5 ನೇ ಅಡ್ಡರಸ್ತೆ, ವಿಧಾನಸೌಧ ಲೇ ಔಟ್‌,ಲಗ್ಗೆರೆ ಬೆಂಗಳೂರು-560058

Synopsys

ಆಧುನಿಕ ಕನ್ನಡ ಸಾಹಿತ್ಯವನ್ನು ಗಾಢವಾಗಿ ಪ್ರಭಾವಿಸಿರುವ ಕುವೆಂಪು ಸಾಹಿತ್ಯದ ವಿಸ್ತಾರ, ವೈವಿಧ್ಯ, ಸಮೃದ್ಧಿಗಳು ಚಕಿತಗೊಳಿಸುತ್ತವೆ. ಸಾಹಿತ್ಯದ ಸರ್ವ ಪ್ರಕಾರಗಳಲ್ಲಿ ಅನನ್ಯ ಕೃತಿಗಳನ್ನು ನೀಡಿರುವ ಆ ಮಹಾಪ್ರತಿಭೆ, ಶ್ರೀಸಾಮಾನ್ಯನನ್ನುವಿಶ್ವಮಾನವನನ್ನಾಗಿಸುವ ಆಶಯದಲ್ಲಿ ಸಾಹಿತ್ಯ ಜಗತ್ತನ್ನು ಕಟ್ಟಿಕೊಡುತ್ತದೆ. ಬದುಕಿನ ಶಾಶ್ಚತ ಮೌಲ್ಯಗಳ ಶೋಧದಲ್ಲಿ, ಸತ್ಯದ ಹುಡುಕಾಟದಲ್ಲಿ, ಮನುಷ್ಯ ಘನತೆಯ ತಡಕಾಟದಲ್ಲಿ ಕಲಾ ಸುಂದರಿಯನ್ನು ವಾಸ್ತವಿಕ ಜೀವಪರ ನೆಲೆಯಲ್ಲಿ ಚಿತ್ರಿಸಿದ್ದು ಕುವೆಂಪು ಹೆಗ್ಗಳಿಕೆ. ಅವರ ಗದ್ಯದಲ್ಲಿ, ಪದ್ಯದಲ್ಲಿ, ಕಥನದಲ್ಲಿ ಬಣ್ಣನೆಯಲ್ಲಿ ಉತ್ಸಾಹವಿದೆ, ಸಂದೇಶವಿದೆ, ದರ್ಶನವಿದೆ. ಕುವೆಂಪು ಸಾಹಿತ್ಯವನ್ನು ಕಳೆದ ಮೂರು ದಶಕಗಳಿಂದಲೂ ಸತತವಾಗಿ ಅನುಸಂಧಾನ ಮಾಡುತ್ತಾ ಬಂದಿರುವ ಡಾ. ಗುರುಪಾದ ಮರಿಗುದ್ದಿ ಅವರು ಅಪರೂಪದ ವಿದ್ವಾಂಸರಾಗಿದ್ದಾರೆ. ಅವರು ಕುವೆಂಪು ಸಾಹಿತ್ಯ ಮತ್ತು ತತ್ವಗಳನ್ನು ಆತ್ಮಸಾಥ್‌ ಮಾಡಿಕೊಂಡಿರುವುದರಿ೦ದ. ಅವರ ವಿಮರ್ಶೆಯಲ್ಲಿ ಗುಣಾತ್ಮಕ ಗ್ರಹಿಕೆ, ಸಮತೂಕಗಳು ಸಾಧ್ಯವಾಗಿವೆ. ಕುವೆಂಪು ಕಾದಂಬರಿಗಳ ಬಗೆಗೆ ಪ್ರೌಢ ಸಂಶೋಧನಾ ಪ್ರಬಂಧ ರಚಿಸಿರುವ ಅವರು ಕುವೆಂಪು ಸಾಹಿತ್ಯದ ಬಗ್ಗೆ ಎಂಟು ವಿಮರ್ಶಾ ಕೃತಿಗಳನ್ನು ಹೊರ ತಂದಿದ್ದಾರೆ. ಉತ್ತರ ಕರ್ನಾಟಕದ ಗಡಿಭಾಗದಲ್ಲಿರುವ ಈ ವಿದ್ವಾಂಸರು ಕುವೆಂಪು ಅವರ ಜೊತೆಗೆ, ಕುವೆಂಪು ನೇರ ಶಿಷ್ಯರ ಜೊತೆಗೆ ಒಡನಾಟ ಹೊಂದಿದ್ದರು. ಪ್ರಸ್ತುತ “ಕುವೆಂಪು - ಬದುಕು ಮತ್ತು ಸಾಹಿತ್ಯ' ಎಲ್ಲ ವರ್ಗದ ಓದುಗರಿಗಾಗಿ ತುಂಬ ವಿವೇಚನೆಯಿಂದ, ತತ್ಪರತೆಯಿಂದ ರಚಿಸಿರುವ ಕೃತಿ. ಈವರೆಗೆ ಬಂದಿರುವ ಕೃತಿಗಳಿಗಿಂತ ಇದು ಭಿನ್ನವಾಗಿದೆ. ಮೊದಲ ಭಾಗದಲ್ಲಿ ಕುವೆಂಪು ಬದುಕನ್ನು ನಿಖರವಾಗಿ ಚಿತ್ರಿಸಲಾಗಿದೆ. ಎರಡನೆಯ ಭಾಗದಲ್ಲಿ ಕುವೆಂಪು ಸಾಹಿತ್ಯದ ಪರಿಚಯ ಪ್ರಾಸಾದಿಕವಾಗಿ ಬಂದಿದೆ.

About the Author

ಗುರುಪಾದ ಮರಿಗುದ್ದಿ
(20 June 1956)

ಡಾ. ಗುರುಪಾದ ಮರಿಗುದ್ದಿ ಅವರು ಸೃಜನಶೀಲ ಹಾಗೂ ಸೃಜನೇತರ ಕ್ಷೇತ್ರಗಳೆರಡರಲ್ಲಿಯೂ ಕೃತಿ ರಚಿಸಿರುವ 'ಸವ್ಯಸಾಚಿ’.  ಕಾವ್ಯಲಹರಿಯಿಂದ ಆರಂಭವಾದ ಸಾಹಿತ್ಯ ಕೃಷಿಯು ಸಂಶೋಧನೆ, ವಿಮರ್ಶೆ ಹಾಗೂ ಕುವೆಂಪು ಸಾಹಿತ್ಯದ ಬಗ್ಗೆ ಆಳವಾದ ಅಧ್ಯಯನ, ಲೋಕಾನುಭವ ಸಾಹಿತ್ಯಗಳಲ್ಲಿ ಹರಡಿದೆ. ಅವರು ಕುವೆಂಪು ಸಾಹಿತ್ಯ ಕುರಿತಂತೆ ಬರೆದ ನಿರಂತರ ನಿಷ್ಠಾವಂತ ಕೃಷಿಕರು. ಕುವೆಂಪು ಸಾಹಿತ್ಯದ ಕುರಿತು ಉತ್ತರ ಕರ್ನಾಟಕದಲ್ಲಿ ಕುವೆಂಪು ಸಾಹಿತ್ಯದ ಪರಿಚಯ ಕೈಗೊಂಡಿದ್ದಾರೆ. ಗುರುಪಾದ ಮರಿಗುದ್ದಿ ಅವರು ಸ್ವಂತ ಪ್ರತಿಭೆ ಹಾಗೂ ಸತತ ಅಭ್ಯಾಸದಿಂದ ಸಾಹಿತ್ಯದ ಹಲವು ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ್ದಾರೆ. ವಿದ್ಯಾರ್ಥಿಗಳ ಪ್ರೀತಿ ಸಂಪಾದಿಸಿರುವ ಅವರು ವಾಗ್ಮಿಯಾಗಿಯೂ ಜನಪ್ರಿಯ. ಸರಳತೆ ಸಜ್ಜನಿಕೆಗೆ ಹೆಸರಾದ ಮರಿಗುದ್ದಿ ...

READ MORE

Related Books