ನೆಲೆಗಟ್ಟು

Author : ಶ್ಯಾಮಸುಂದರ ಬಿದರಕುಂದಿ

Pages 108

₹ 100.00




Year of Publication: 2012
Published by: ಕನ್ನಡ ನಾಡು ಲೇಖಕರ ಮತ್ತು ಓದುಗರ ಸಹಕಾರಿ ಸಂಘ  ನಿ.
Address: #ಜಿ. 2-ವಿ.ವಿ, ಹಾಸ್ಟೆಲ್ ಕಾಂಪ್ಲೆಕ್ಸ್, ಸೇಡಂ ರಸ್ತೆ, ಗುಲಬರ್ಗಾ -585105

Synopsys

‘ನೆಲೆಗಟ್ಟು’ ಕೃತಿಯು ಶ್ಯಾಮಸುಂದರ ಬಿದರಕುಂದಿ ಅವರ ವಿಮರ್ಶಾ ಪ್ರಬಂಧಗಳ ಸಂಕಲನವಾಗಿದೆ. ಈ ಕೃತಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ; ‘ಅರಿವಿಗೆ ಬಂದುದನ್ನು ಒರೆದುದೇ ಹೆಚ್ಚು ನಾನು; ಬರೆದುದು ಅಲ್ಲ. ಬರೆದುದನಲ್ಲ ಮಸ್ತಕ ಆಗಿಸುವ ಹುರುಪು ಕ್ಷೀಣ ನನ್ನೊಳಗೆ ಆಡಿದ ಮಾತು ಕೆಲವರಿಗೆ ಯಾವುದೋ ಸೀಮಿತ ಅವಧಿಯಲ್ಲಿ ಮತ್ತು ಜಾಗದಲ್ಲಿ ಕೇಳಿಸುವುದಷ್ಟೆ. ಬರಹ ಹಾಗಲ್ಲ, ಕಾಗದದ ಮೇಲೆ ಅಚ್ಚಾಗಿ ಯಾವಾಗ ಬೇಕೋ ಆವಾಗ ಯಾರಿಗೆ ಬೇಕೋ ಅವರಿಗೆ ಓದಲು ಸಿಗುವ 'ಉಪಾಹಾರ' ಎನ್ನುವದೊಂದು ತಿಳಿವಳಿಕೆಯೂ ಇದೆ. ಕೇಳಿದ್ದು ಸ್ಮೃತಿ: ಇರುವಷ್ಟು ಹೊತ್ತು ಓದಿದ್ದು ಹಿಡಿಸಿದಷ್ಟು (ಗ್ರಹಿಸಿದಷ್ಟು) ಮಾತ್ರ ಇವೆರಡೂ ವಿರುದ್ಧ ದಿಕ್ಕಿನಲ್ಲಿರುವ ಸಂಗತಿಗಳೇನಲ್ಲ. ಈ ತಿಳಿವಳಿಕೆಯ ಪರಿಣಾಮವೇ ಪುಸ್ತಕೀಕರಣದ ಬಗ್ಗೆ ನನಗಿದ್ದ ಕ್ಷೀಣ ಒಲವು, ಇನ್ನೊಂದು ವೈಯಕ್ತಿಕ ನೆಪ: ಪರರ ಕೃತಿಗಳನ್ನು ಓದುತ್ತ ಹೋಗುವದರಲ್ಲಿ ಸಿಗುವ ಸುಖ ಅನಿರ್ವಚನೀಯ. ಈ ವಾಚನ ವಿಹಾರ ಅನುದಿನದ ವಾಯುವಿಹಾರಕ್ಕಿಂತ ಮಿಗಿಲಾದ ಆನಂದವನ್ನೂ ಆರಿವನ್ನೂ ಕೊಟ್ಟಿವೆ. ಓದಬೇಕೆಂದುಕೊಂಡು ಕೊಂಡು ತಂದ ಪುಸ್ತಕಗಳ ಸಾಲು ಕನ್ನಡಿ ಕಪಾಟಿನಲ್ಲಿಟ್ಟ ಮಿಠಾಯಿಯಂತೆ ನೋಡಿದಾಗೊಮ್ಮೆ ಬಾಯೊಳಗೆ ನೀರೂರಿಸುತ್ತದೆ. ದ್ರವ ಆರುವ ಮುನ್ನ ಸವಿಯಬೇಕಿದೆ. ಅದು 'ಅಮೃತವೇ ಆಗಿರಲಿ ಎಂಬ ಹಂಬಲ ದುರಾಸೆಯಲ್ಲವಲ್ಲ! ಹೀಗಿರುವಾಗ, ಕಲಬುರಗಿಯ ಹಿತೈಷಿಗಳಾದ ಸ್ವಾಮಿರಾವ ಕುಲಕರ್ಣಿ, ಅಪ್ಪಾರಾವ ಅಕ್ಕೋಣೆಯವರು ವಿಶ್ವಾಸದಿಂದ ನನ್ನೊಂದು ಪುಸ್ತಕ ಪ್ರಕಟಿಸುವ ಹುರುಪು ತೋರಿದ್ದಾರೆ. ಅಲ್ಲಲ್ಲಿ ಪ್ರಸಂಗೋಚಿತ ಮಾತಾಡಿ ಪ್ರಕಟಿಸಿದ ಕೆಲವನ್ನು ಆಯ್ದು 'ನೆಲೆಗಟ್ಟು' ಎಂದು ಹೆಸರಿಟ್ಟು ಸಂಕಲನ ರೂಪವನ್ನು ಅವರಿಗೆ ತಲುಪಿಸಿದ್ದೇನೆ. ಇವರಿಬ್ಬರ ವಿಶ್ವಾಸವನ್ನು ಧನ್ಯವಾದಗಳ ಸಮೇತ ನೆನಯಬೇಕು. ಪುಸ್ತಕಕ್ಕೆ 'ನೆಲೆಗಟ್ಟು' ತಲೆ ಬರಹ ಯಾಕಿಟ್ಟಿದ್ದೇನೆಂದು ಕೊನೆಯ ಪ್ರಬಂಧ ಸಮರ್ಥಿಸುವದೆಂದು ಭಾವಿಸಿದ್ದೇನೆ. ಸಾಹಿತ್ಯಲೋಕದ ಹಿರಿಯರು. ಗೆಳೆಯರು: ಶಿಕ್ಷಣಲೋಕದ ಗುರುಗಳು, ವಿದ್ಯಾರ್ಥಿಗಳು; ಸಂಸ್ಕೃತಿಲೋಕದ ಉತ್ಸಾಹಿಗಳು, ಕ್ರಿಯಾಶೀಲರು, ಹತ್ತಿರದವರು; ಹೊಂದಿದವರು ನನ್ನ ಮೇಲಿಟ್ಟ ಪ್ರೀತಿ, ವಿಶ್ವಾಸ, ಆದರ ಗೌರವ ಭಾವಗಳನ್ನು ಈ ಸಂದರ್ಭದಲ್ಲಿ ಹಾರ್ದಿಕವಾಗಿ ನೆನೆಯುತ್ತೇನೆ’ ಎಂದಿದ್ದಾರೆ ಲೇಖಕ ಶ್ಯಾಮಸುಂದರ ಬಿದರಕುಂದಿ.

 

About the Author

ಶ್ಯಾಮಸುಂದರ ಬಿದರಕುಂದಿ
(18 May 1947)

ಕವಿ, ವಿಮರ್ಶಕ, ನಿವೃತ್ತ ಪ್ರಾಧ್ಯಾಪಕರಾಗಿರುವ ಡಾ. ಶ್ಯಾಮಸುಂದರ ಬಿದರಕುಂದಿ ಅವರು ಸದ್ಯ ಹುಬ್ಬಳ್ಳಿ  ನಿವಾಸಿಯಾಗಿದ್ದಾರೆ. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ., ಪಿಎಚ್‌.ಡಿ. ಪಡೆದಿರುವ ಅವರು ದ.ರಾ. ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌ನ ಅಧ್ಯಕ್ಷರಾಗಿದ್ದರು.  ಕೃತಿಗಳು: ಅಜ್ಜಗಾವಲು, ಅಲ್ಲಮ ಪ್ರಭುವಾದ, ಬರುವುದೇನುಂಟೊಮ್ಮೆ, ತಲೆ ಎತ್ತಿ ಶರಣು (ಕವನ ಸಂಕಲನ), ಕೃತಿ ನೋಟ, ಅಚ್ಚು ಕಟ್ಟು, ನೆಲೆಗಟ್ಟು, ಪ್ರಸಂಗೋಚಿತ (ವಿಮರ್ಶೆ), ನವ್ಯಮಾರ್ಗದ ಕಾದಂಬರಿಗಳು (ಪಿಎಚ್.ಡಿ. ಮಹಾಪ್ರಬಂಧ), ಗಂಧಕೊರಡು, ಪ್ರಬಂಧಪ್ರಪಂಚ, ಸ್ವಾತಂತ್ರ್ಯದ ಸವಿನೀರು, ಕರ್ಕಿಯವರ ಸಮಗ್ರ ಸಾಹಿತ್ಯ ( ಸಂಪಾದಿತ), ಗರೂಡ ಶ್ರೀಪಾದರಾವ; ಶಂಕರ ಮೊಕಾಶಿ ಪುಣೇಕರ; ಫ.ಶಿ. ಭಾಂಡಗೆ (ಇತರೆ) ...

READ MORE

Related Books