ಎಚ್ಚೆಸ್ವಿ ಕಾವ್ಯ ಸಾತತ್ಯ

Author : ಎಸ್. ಆರ್. ವಿಜಯಶಂಕರ್

Pages 164

₹ 100.00




Year of Publication: 2019
Published by: ಚಿಂತನ ಚಿತ್ತಾರ ಪ್ರಕಾಶನ
Address: # 2, ಮುದ ಕಾಂಪ್ಲೆಕ್ಸ್‌, ಒಂದನೇ ಬ್ಲಾಕ್‌, ರಾಮಕೃಷ್ಣ ನಗರ, ಮೈಸೂರು- 570022

Synopsys

ಲೇಖಕ-ವಿಮರ್ಶಕ ಎಸ್.‌ ಆರ್‌ ವಿಜಯಶಂಕರ ಅವರ ವಿಮರ್ಶಾ ಬರಹಗಳಿರುವ ಕೃತಿ-ಎಚ್ಚ್‌ಸ್ವಿ ಕಾವ್ಯ ಸಾತತ್ಯʼ ಡಾ. ಎಚ್.‌ ಎಸ್‌ ಮೂರ್ತಿಯವರ ಸಾಹಿತ್ಯದ ವಿಮರ್ಶೆ -ಒಳನೋಟಗಳನ್ನು ಒಳಗೊಂಡಿದೆ. ಖ್ಯಾತ ವಿಮರ್ಶಕ ಎಚ್.‌ ದಂಡಪ್ಪಅವರು ಕೃತಿಗೆ ಬೆನ್ನುಡಿ ಬರೆದು ‘ ಮೂರ್ತಿಯವರು ಹಲವು ಸಾಹಿತ್ಯ ಪ್ರಕಾರಗಳಲ್ಲಿ ಕೆಲಸ ಮಾಡಿದವರು. ಕನ್ನಡ ಜನಮಾನಸ ಅವರನ್ನು ಮೊದಲಿಗೆ ಕವಿ ಎಂದೇ ಗುರುತಿಸುತ್ತಾರೆ. ಕಳೆದ ಅರ್ಧ ಶತಮಾನಕ್ಕೂ ಹೆಚ್ಚು ಕಾಲ ಅವರು ಸತತವಾಗಿ ಕಾವ್ಯ ರಚನೆಯಲ್ಲಿ ತೊಡಗಿದ್ದಾರೆ. ವಿಮರ್ಶಕರು ಅವರ ಕಾವ್ಯಗಳ ಬಗ್ಗೆ ಬರೆದಿದ್ದಾರೆ. ಅವರ ಹಾಡುಗಳನ್ನು ಸುಗಮ ಸಂಗೀತಗಾರರೂ ಹಾಡುತ್ತಲೇ ಇದ್ದಾರೆ. ಕಳೆದ ಹಲವು ವರ್ಷಗಳಲ್ಲಿ ವಿಜಯಶಂಕರ ಅವರು ಎಚ್ಚೆಸ್ವಿ ಬಗ್ಗೆ ಬರೆದ ಬರಹಗಳಿಂದ ಅವರ ಕಾವ್ಯದ ಬಗೆಗೆ ಇರುವ ಲೇಖನಗಳನ್ನು ʼ ಎಚ್ಚೆಸ್ವಿ ಕಾವ್ಯ ಸಾತತ್ಯʼ ವಿಮರ್ಶಾ ಸಂಗ್ರಹದಲ್ಲಿ ನೀಡಲಾಗಿದ್ದು, ಹಾಗೆಯೇ ಈ ಸಂಕಲನಕ್ಕಾಗಿ ಬರೆದ ಲೇಖನಗಳೂ ಇಲ್ಲಿವೆ. ಕಾವ್ಯ ಪ್ರೀತಿಯ ವಿಮರ್ಶಕರೊಬ್ಬರು ನಮ್ಮ ಕಾಲದ ಮುಖ್ಯ ಕವಿಯೊಬ್ಬರ ಬಗೆಗೆ ಬರೆದ ಇಲ್ಲಿನ ಬರಹಗಳು ಕವಿ ಕಾವ್ಯಗಳ ಕುರಿತಾಗಿ ಹೊಸ ವಿಮರ್ಶೆ, ವಿಶ್ಲೇಷಣೆಗಳ ಬೆಳಕು ಚೆಲ್ಲುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ. 

About the Author

ಎಸ್. ಆರ್. ವಿಜಯಶಂಕರ್

ಎಸ್. ಆರ್. ವಿಜಯಶಂಕರ್ ಒಬ್ಬ ವಿಮರ್ಶಕರು. ಬೆಂಗಳೂರಿನಲ್ಲಿ ವಾಸವಿರುವ ಅವರು, ಸಾಹಿತ್ಯ , ಸಂಸ್ಕೃತಿ,  ವಿಮರ್ಶಾ ಬರಹಗಳಿಂದ ಕನ್ನಡ ಓದುಗರಿಗೆ ಪರಿಚಿತರಾಗಿದ್ದಾರೆ.  ಇಂಟೆಲ್ ಟೆಕ್ನಾಲಜಿ ಯಲ್ಲಿ ದಕ್ಷಿಣ ಏಷ್ಯಾದ  ಸಂವಹನ ವಿಭಾಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು, ಜನಪ್ರಿಯ ನಿಯತಕಾಲಿಕೆಗಳಲ್ಲಿ ಲೇಖನಗಳನ್ನೂ ಅಂಕಣಗಳನ್ನೂ ಬರೆಯುತ್ತಾ ಬಂದಿದ್ದಾರೆ. ಇತ್ತೀಚೆಗೆ ಅವರು ತಮ್ಮ ಹೆಚಿನ ಬರಹಗಳನ್ನು ಸಾಹಿತ್ಯಿಕ ಕಿರುಪತ್ರಿಕೆಯಲ್ಲಿ ಪ್ರಕಟಿಸುತ್ತಿದ್ದಾರೆ.  ಹಿಂದಿನ ಕೃತಿಗಳ ಮರು ಓದುಗರಿಗೆ ಗಮನ ಕೊಡುತ್ತಿರುವ ವಿಜಯ ಶಂಕರ್, ಕವಿ ಗೋಪಾಲಕೃಷ್ಣ ಅಡಿಗರ  ಮರು ಓದಿನ 'ಪ್ರತಿಮಾ ಲೋಕ', ಕೃತಿಯನ್ನು ಸಂಪಾದಿಸಿದ್ದಾರೆ. ...

READ MORE

Related Books