ಗ್ರಂಥ ಸಂಗಾತಿ

Author : ಜಿ.ಎಂ. ಹೆಗಡೆ

Pages 460

₹ 300.00




Year of Publication: 2004
Published by: ಶ್ರೀ ರಾಘವೇಂದ್ರ ಪ್ರಕಾಶನ
Address: ಅಂಬಾರಕೊಡ್ಲ, ಅಂಕೋಲಾ 581314

Synopsys

‘ಗ್ರಂಥ ಸಂಗಾತಿ’ ಜಿ. ಎಂ. ಹೆಗಡೆ ಅವರ ರಚನೆಯ ಅವಲೋಕನವಾಗಿದೆ. ಇದೀಗ ಹೊಸ ಅಪೂರ್ವ ಪ್ರಯೋಗವೆಂಬಂತೆ ರಾಘವೇಂದ್ರ ಪ್ರಕಾಶನದ ಎಲ್ಲ ಪುಸ್ತಕಗಳನ್ನೂ ನಾಡಿನ ವಿಮರ್ಶಕರಿಂದ ತುಲನೆ ಮಾಡಿಸಿ ಲೇಖನಗಳನ್ನು ಸಂಗ್ರಹಿಸಿ ಪ್ರಕಟಿಸಿದ ಸಾಹಿತ್ಯಾವಲೋಕನವೇ ಈ ಗ್ರಂಥವಾಗಿದೆ.

About the Author

ಜಿ.ಎಂ. ಹೆಗಡೆ
(12 December 1952)

ವಿಮರ್ಶಕ ಜಿ.ಎಂ. ಹೆಗಡೆ ಅವರು  ಧಾರವಾಡದ ಕಿಟೆಲ್‌ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ ಸದ್ಯ ನಿವೃತ್ತರು. ಧಾರವಾಡದಲ್ಲಿ ನೆಲೆಸಿದ್ದಾರೆ. ’ಮಾಸ್ತಿಯವರ ವಿಮರ್ಶೆ: ಒಂದು ಅಧ್ಯಯನ’ ಇವರ ಪಿಎಚ್ ಡಿ ಮಹಾಪ್ರಬಂಧ.  ಕೃತಿಗಳು:  ಸಾಹಿತ್ಯ ಸಹೃದಯತೆ, ಪುಸ್ತಕಲೋಕ, ಸಾಹಿತ್ಯ ಮತ್ತು ಸಂಸ್ಕೃತಿ ಸ್ಪಂದನ, ಕವಿ ಕಣವಿ, ಕಿಟೆಲ್ ಜೀವನ ಹಾಗು ಕೃತಿ ಸಮೀಕ್ಷೆ.    ...

READ MORE

Reviews

ಹೊಸತು - ಮಾರ್ಚ್ -2005

ಶ್ರೀ ರಾಘವೇಂದ್ರ ಪ್ರಕಾಶನವು ಶ್ರೀ ವಿಷ್ಣು ನಾಯ್ಕರ ಉತ್ಸಾಹ - ಸಾಹಸ ಮತ್ತು ಅವಿರತ ಶ್ರಮದ ಫಲವಾಗಿ ಎತ್ತರಕ್ಕೆ ಬೆಳೆದುನಿಂತ ಸಂಸ್ಥೆ ಮೂವತ್ತು ವರ್ಷಗಳ ಸುದೀರ್ಘ ಅವಧಿಯಲ್ಲಿ ಅದು ಪ್ರಕಟಿಸಿದ ಪುಸ್ತಕಗಳ ಸಂಖ್ಯೆ ನೂರೈವತ್ತರ ಗಡಿ ದಾಟಿದೆ. ಸಾಹಿತ್ಯಕ ವಾತಾವರಣದಲ್ಲಿ ಜನಪರ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ಹಮ್ಮಿಕೊಂಡು ಪ್ರಕಾಶಕ - ಲೇಖಕ - ಓದುಗರನ್ನು ಒಂದು ಸೂತ್ರದಲ್ಲಿ ಬಂಧಿಸುವ ಶ್ಲಾಘನೀಯ ಕೆಲಸ ಮಾಡಿದೆ. ಇದೀಗ ಹೊಸ ಅಪೂರ್ವ ಪ್ರಯೋಗವೆಂಬಂತೆ ರಾಘವೇಂದ್ರ ಪ್ರಕಾಶನದ ಎಲ್ಲ ಪುಸ್ತಕಗಳನ್ನೂ ನಾಡಿನ ವಿಮರ್ಶಕರಿಂದ ತುಲನೆ ಮಾಡಿಸಿ ಲೇಖನಗಳನ್ನು ಸಂಗ್ರಹಿಸಿ ಪ್ರಕಟಿಸಿದ ಸಾಹಿತ್ಯಾವಲೋಕನವೇ ಈ ಗ್ರಂಥವಾಗಿದೆ. ವೈವಿಧ್ಯಮಯ ಸಾಹಿತ್ಯವನ್ನು ಪ್ರಕಟಿಸಿ ಹೆಸರು ಮಾಡಿದ ಶ್ರೀ ವಿಷ್ಣು ನಾಯ್ಕರು ಈ ಸಂಸ್ಥೆಯ ಮೂವತ್ತನೇ ವಾರ್ಷಿಕೋತ್ಸವದ ಸವಿ ನೆನಪಿಗೆ ಈ ಸಮೀಕ್ಷಾ ಗ್ರಂಥವನ್ನು ನೀಡಿದ್ದಾರೆ.

Related Books