ಅಭಿಗಮನ

Author : ಗಿರೀಶ್ ಮೂಗ್ತಿಹಳ್ಳಿ

Pages 160

₹ 130.00




Year of Publication: 2014
Published by: ಮಾಣಿ ಪ್ರಕಾಶನ
Address: #2, 2ನೇ ಕ್ರಾಸ್, 3ನೇ ಹಂತ, ರೂಮ್ ನಂ. 1, ನಾಗಪ್ಪ ಸ್ಟ್ರೀಟ್, ಪ್ಯಾಲೇಸ್ ಗುಟ್ಟಹಳ್ಳಿ, ಬೆಂಗಳೂರು-03.
Phone: 9686535465

Synopsys

‘ಅಭಿಗಮನ’ ಕೃತಿಯು ಗಿರೀಶ್ ಎಂ. ಬಿ (ಗಿರೀಶ್ ಮೂಗ್ತಿಹಳ್ಳಿ) ಅವರ ವಿಮರ್ಶಾ ಲೇಖನಗಳ ಸಂಕಲನವಾಗಿದೆ. 21 ಲೇಖನಗಳಿರುವ ಈ ಕೃತಿಯು, ಕುವೆಂಪು ಕಾವ್ಯದಲ್ಲಿ ಪ್ರತಿಭಟನೆಯ ನೆಲೆಗಳು, ಆಧುನಿಕ ಕನ್ನಡ ಕಾವ್ಯದಲ್ಲಿ ಬೇಂದ್ರೆಯವರ ಅನನ್ಯತೆ, ಭೂಮಿ ಮತ್ತು ನಾವು, ಅಲ್ಲಮಪ್ರಭುವಿನ ದೇವರು, ವೇಮನ ಸರ್ವಜ್ಞರ ದೃಷ್ಟಿಯಲ್ಲಿ ವಿದ್ಯೆ - ಒಂದು ತೌಲನಿಕ ನೋಟ, ‘ಶ್ರೀ ರಾಮಾಯಣ ದರ್ಶನಂ' ಸತಿ ಶಿರೋಮಣಿ ಊರ್ಮಿಳೆ, ಅರವಿಂದ ಮಾಲಗತ್ತಿ ಅವರ 'ಇಳಾಗಾನ', ಮರನಳ್ಳಿ ಪ್ರಕಾಶ್ ಅವರ 'ಬಯಲು ತಬ್ಬುವ ಪರಿ', ಕನ್ನಡ ನವ್ಯಕತೆಗಳನ್ನು ಪ್ರವೇಶಿಸುವ ಮುನ್ನ, ಪೂರ್ಣಚಂದ್ರ ತೇಜಸ್ವಿ ಅವರ ಕಥೆ 'ಅವನತಿ' ಒಂದು ವಿಶ್ಲೇಷಣೆ, ಬೆಸಗರಹಳ್ಳಿ ರಾಮಣ್ಣ ಅವರ ಕಥೆ 'ಪ್ರಜಾಪ್ರಭುತ್ವ ಮತ್ತು ಮೂರು ಮಂಗಗಳು', ಆಲ್ಬರ್ಟ್ ಕಾಮೂನ 'ಅನ್ಯ', ಪೂರ್ಣಚಂದ್ರ ತೇಜಸ್ವಿ ಅವರ 'ಕಾಡು ಮತ್ತು ಕೌರ್ಯ, ಗೌತಮ+ಅಹಲ್ಯೆ, ಗೌತಮ+ಅಹಲ್ಯೆ, 'ಮಕ್ಕಳು ಅಡಿಗೆ ಮನೆಗೆ ಹೊಕ್ಕರೆ', ನಾಟಕದ ತಾತ್ವಿಕತೆ, 'ಕರಾಳ ರಾತ್ರಿ' ನಾಟಕದಲ್ಲಿ ಬಸವ ಚಳವಳಿಯ ಫಲಿತಗಳು, ಅಪರೂಪದ ಪತ್ತೆದಾರಿ ನಾಟಕ 'ಚೆಕ್ ಮೇಟ್, ಸಮಾಜಕ್ಕೊಂದು ಚುಚ್ಚುಮದ್ದು ಕೊಡುವ ನಾಟಕ 'ದೇವ ವೃದ್ಧರು', ದಲಿತ ಚಳವಳಿ ಮತ್ತು ಬುದ್ಧ, ಬಸವ ಅಂಬೇಡ್ಕರ್, ಜಾತಿ ವಿನಾಶದ ಹಾದಿಯಲ್ಲಿ ಯುವ ಜನತೆಯ ಪಾತ್ರ, ಹಂದಿಗಳ ಮಧ್ಯೆ ಅರಳಿದ ಹೂ-ಬಾಣ ಇಲ್ಲಿರುವ ಲೇಖನ ಗುಚ್ಛಗಳು.

ಕೃತಿಗೆ ಬೆನ್ನುಡಿ ಬರೆದಿರುವ ಅರವಿಂದ ಮಾಲಗತ್ತಿ ಅವರು, ಇಲ್ಲಿ ಅಧ್ಯಯನದ ಪ್ರತ್ಯುತ್ಪನ್ನದ ಲೇಖನಗಳೇ ಅಧಿಕ. ವ್ಯಕ್ತಿನಿಷ್ಠ ಕೃತಿಕೇಂದ್ರಿತ ಬರೆಹಗಳು ಅಧಿಕವಾಗಿದ್ದಂತೆ ವಸ್ತುನಿಷ್ಠ ವಿಷಯದ ಲೇಖನಗಳು ಅನಂತರದ ಸ್ಥಾನವನ್ನು ಪಡೆದುಕೊಳ್ಳುತ್ತವೆ. ಲೇಖನದಲ್ಲಿ ಕಂಡುಬರುವಂತಹ ಮಹತ್ವದ ಸಂಗತಿ ಎಂದರೆ ಆರೋಗ್ಯಕರ ಸಾಮಾಜಿಕ ಚಿಂತೆನೆಯ ನಡೆಗೆ ಕಳಕಳಿಯ ಒತ್ತು ಬಿದ್ದಿದೆ. ಲೇಖನಗಳ ವಿಷಯ ಮತ್ತು ಅಧ್ಯಯನಕ್ಕೆ ಆಯ್ದುಕೊಂಡ ಕೃತಿಗಳ ಆಯ್ಕೆ ಗಿರೀಶ್ ಮೂಗ್ತಿಹಳ್ಳಿ ಅವರ ಅಭಿರುಚಿಯನ್ನು ಸ್ಪಷ್ಟಪಡಿಸುತ್ತದೆ ’ ಎನ್ನುತ್ತಾರೆ.

About the Author

ಗಿರೀಶ್ ಮೂಗ್ತಿಹಳ್ಳಿ

ಲೇಖಕ ಗಿರೀಶ್ ಮೂಗ್ತಿಹಳ್ಳಿ ಅವರು ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಮೂಗ್ತಿಹಳ್ಳಿಯವರು. ಎಂ.ಎ, ಪಿಜಿ ಡಿಪ್ಲೊಮಾ ಹಾಗೂ ಪಿಎಚ್.ಡಿ  ಪದವೀಧರರು. ಎನ್.ಇಟಿ ವಿದ್ ಜೆಆರ್.ಎಫ್ ಹಾಗೂ ಕೆಎಸ್.ಇಟಿ ಶೈಕ್ಷಣಿಕ ಅರ್ಹತಾ ಪರೀಕ್ಷೆಗಳನ್ನು ತೇರ್ಗಡೆಯಾಗಿರುತ್ತಾರೆ. ಲೇಖನ, ಪ್ರಬಂಧ ಮಂಡನೆ ಮತ್ತು ಕವನ ಸ್ಪರ್ಧೆಗಳಲ್ಲಿ ಪಾಲ್ಗೊಂಡಿದ್ದಾರೆ.  ಪ್ರಸ್ತುತ ಮೂಡಿಗೆರೆಯ ಶಾಸಕ ಎಂ.ಪಿ ಕುಮಾರಸ್ವಾಮಿ ಅವರ ಆಪ್ತ ಸಹಾಯಕರಾಗಿದ್ದಾರೆ. ಕೃತಿಗಳು : ಅಭಿಗಮನ (ವಿಮರ್ಶಾ ಲೇಖನ), ಬಸವ ಚಳುವಳಿಯ ಫಲಿತಗಳು (ಸಂಶೋಧನೆ), ಆಡಾಡ್ತ ಆಕಾಶ(ವಿಮರ್ಶಾ ಲೇಖನ), ಓಡಾಡುತ ಬಯಲು (ಸಂಶೋಧನೆ), ಅಕ್ಷರ ಮೈತ್ರಿ (ವಿಮರ್ಶಾ ಲೇಖನ), ಚುಕ್ಕಿಯಾಟ (ಕವನ ಸಂಕಲನ), ಬಸವ ಚಳುವಳಿಯ ಫಲಿತಾಂಶಗಳು (ವಚನ ಸಾಹಿತ್ಯ) ...

READ MORE

Related Books