ಜಾತಿ ಅಸ್ಪೃಶ್ಯತೆಯ ಸಂಘರ್ಷ

Author : ಎಂ. ವೆಂಕಟಸ್ವಾಮಿ

Pages 220

₹ 200.00

Buy Now


Year of Publication: 2018
Published by: ನವಕರ್ನಾಟಕ ಪ್ರಕಾಶನ
Address: 101, ಎಂಬಸಿ ಸೆಂಟರ್, ಕ್ರೂಸೆಂಟ್ ರಸ್ತೆ, ಕುಮಾರ್ ಪಾರ್ಕ್ ಈಸ್ಟ್, ಬೆಂಗಳೂರು - 560 001
Phone: 7353530805 / 080 - 20161913

Synopsys

ಅಸ್ಪೃಶ್ಯತೆ ಭಾರತಕ್ಕೇ ವಿಶಿಷ್ಟವಾದ ಸಾಮಾಜಿಕ ಪಿಡುಗು. ಈ ಅನಿಷ್ಟವನ್ನು ಹೋಗಲಾಡಿಸುವ ಕುರಿತು ವಿವಿಧ ಚಿಂತಕರು, ಸಮಾಜ ಸುಧಾರಕರು ನಡೆಸಿರುವ ಹೋರಾಟಗಳು ಅಪಾರ. ಆ ಹೋರಾಟಗಳ ಮೂಲಕ ಅಸ್ಪೃಶ್ಯತೆಯನ್ನು ಗ್ರಹಿಸುವ ಯತ್ನವೇ ’ಜಾತಿ ಅಸ್ಪೃಶ್ಯತೆಯ ಸಂಘರ್ಷ’ ಕೃತಿ. 

ಕೆಳಜಾತಿಯ ಜನರ ಬದುಕಿನ ಕುರಿತು ಆಳ ಅಧ್ಯಯನ ನಡೆಸಿರುವ ಲೇಖಕರು ಅಸ್ಪೃಶ್ಯತೆಯ ಸಂಘರ್ಷವನ್ನು ನಾಲ್ಕು ಭಾಗಗಳಲ್ಲಿ ಮಂಡಿಸಿದ್ದಾರೆ. ಜಾತಿ ಪದ್ದತಿ ಮತ್ತು ಅಸ್ಪೃಶ್ಯತೆಯ ನಿವಾರಣೆಗಾಗಿ ಅಂಬೇಡ್ಕರ್‌ ಅವರು ಹೋರಾಡಿದ ಬಗೆ, ಅಂಬೇಡ್ಕರ್‌ ಅವರ ಬಾಲ್ಯ, ಅಂಬೇಡ್ಕರ್ ಅವರ ಕೊನೆಯ ಸಂದೇಶ, ಮಹಾತ್ಮ ಗಾಂಧೀಜಿ ಅವರ ಭೇಟಿ, ಸಂಘಟನೆ, ದಲಿತ ಹೋರಾಟದ ರೂಪುರೇಷೆ, ಅಸುರ- ಆರ್ಯರ ನಡುವಿನ ಸಂಘರ್ಷ, ಜಾತಿಗಳ ಮೂಲ, ಹಿಂದೂ ಧರ್ಮ ಮತ್ತು  ಜಾತಿಯ ಕುರಿತು ವಿದ್ವಾಂಸರ ಅಭಿಪ್ರಾಯ, ಮೀಸಲಾತಿಯ ಪ್ರಾತಿನಿಧ್ಯ ಕುರಿತ ವಿವರಗಳನ್ನು ಕೃತಿಯ ಮೂಲಕ ತಿಳಿದುಕೊಳ್ಳಬಹುದು. 

About the Author

ಎಂ. ವೆಂಕಟಸ್ವಾಮಿ

ಕೋಲಾರ ಜಿಲ್ಲೆ ಬಂಗಾರಪೇಟೆ ತಾಲ್ಲೂಕಿನ ಯರ್ರಗೊಂಡ ಬ್ಯಾಟರಾಯನಹಳ್ಳಿಗೆ ಸೇರಿದ ಡಾ.ಎಂ.ವೆಂಕಟಸ್ವಾಮಿ ಅವರು 06.11.1955 ರಂದು ಜನಿಸಿದರು,  ಪ್ರಾಥಮಿಕ ಶಿಕ್ಷಣ ತನ್ನ ಊರಿನಲ್ಲಿ ಮತ್ತು ಮಾಧ್ಯಮಿಕ ಶಿಕ್ಷಣವನ್ನು ಘಟ್ಟುಮಾದಮಂಗಳದಲ್ಲಿ ಪೂರೈಸಿದರು. ಕೆ.ಜಿ.ಎಫ್‍ನ ಮುನಿಸಿಪಲ್ ಬಾಯ್ಸ್ ಪ್ರೌಢಶಾಲೆಯಲ್ಲಿ ಹೈಸ್ಕೂಲ್ ಶಿಕ್ಷಣ ಮತ್ತು ಕೆಜಿಎಫ್ ಪ್ರ.ದ.ಕಾಲೇಜಿನಲ್ಲಿ ಬಿ.ಎಸ್ಸಿ. ಮುಗಿಸಿದರು. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ (ಭೂವಿಜ್ಞಾನ) ಎಂ.ಎಸ್ಸಿ., ಮುಗಿಸಿದರು. 1984ರಲ್ಲಿ ಲಕ್ನೋದಲ್ಲಿ ಭೂವಿಜ್ಞಾನಿಯಾಗಿ ಸೇರಿ, ಭಾರತೀಯ ಭೂವೈಜ್ಞಾನಿಕ ಸರ್ವೆಕ್ಷಣಾ ಇಲಾಖೆಯ (2015ರಲ್ಲಿ ನಾಗ್ಪುರದಲ್ಲಿ) ಮಹಾನಿರ್ದೇಶಕರಾಗಿ ನಿವೃತ್ತರಾದರು. ಅದಕ್ಕೆ ಮುಂಚೆ ಸ್ವಲ್ಪ ಕಾಲ ಕೆಜಿಎಫ್‍ನ ಎಲ್.ಐ.ಸಿ ಮತ್ತು ಮಧ್ಯಪ್ರದೇಶದ ಬಿಲಾಯ್‍ನಲ್ಲಿ (SAIL) ಕೆಲಸ ಮಾಡಿದ್ದರು.  ‘ಕೋಲಾರ ಚಿನ್ನದ ಗಣಿಗಳು'' ಮಹಾಪ್ರಬಂಧಕ್ಕೆ ...

READ MORE

Reviews

ಜಾತಿ ಅಸ್ಪೃಶ್ಯತೆಯ ಸಂಘರ್ಷ

ವಿಮರ್ಶೆ 1: ಕೆಳ ಜಾತಿ ಕಾರಣಕ್ಕಾಗಿಯೇ ಅಸ್ಪೃಶ್ಯತೆ ಅನುಭವಿಸುತ್ತಿರುವ ಸಂಘರ್ಷದ  ಕಥನವನ್ನು ಒಳಗೊಂಡಿರುವ ಕೃತಿ `ಜಾತಿ ಅಸ್ಪೃಶ್ಯತೆಯ ಸಂಘರ್ಷ’ ಲೇಖಕ ಡಾ.ಎಂ.ವೆಂಕಟಸ್ವಾಮಿ ಅವರ ಆಳವಾದ ಅಧ್ಯಯನ ಮತ್ತು ಅನುಭವಗಳು ಕೃತಿಯುದ್ದಕ್ಕೂ ಗೋಚರಿಸುತ್ತದೆ. ಒಟ್ಟು ನಾಲ್ಕು ಭಾಗಗಳಲ್ಲಿ ಜಾತಿಯ ವಿಭಿನ್ನ ನೆಲೆಗಳನ್ನು ಲೇಖಕರು ಸಂಕ್ಷಿಪ್ತವಾಗಿ ಓದುಗರಿಗೆ ಮನಗಾಣಿಸುತ್ತಾರೆ. ಜಾತಿ ಮತ್ತು ಅಸ್ಪೃಸ್ಯತೆ ನಿರ್ಮೂಲನೆಗಾಗಿ  ಹೋರಾಡಿದ ಡಾ.ಬಿ.ಆರ್.ಅಂಬೇಡ್ಕರ್ ಅವರ ಬಾಲ್ಯ, ಅವರನ್ನು ಗಟ್ಟಿಗೊಳಿಸಿದ ಸಂಗತಿಗಳು, ಮಹಾತ್ಮಗಾಂಧೀಜಿ ಭೇಟಿ, ಸಂಘಟನೆ, ಅಂಬೇಡ್ಕರ್ ಅವರ ಕೊನೆಯ ಸಂದೇಶದ ತನಕ ಅಂಬೇಡ್ಕರ್ ಅವರ ಸಮಗ್ರ ಬದುಕಿನ ಕುರಿತು ಕೃತಿಯ ಭಾಗ -1ರಲ್ಲಿ ಸಂಕ್ಷಿಪ್ತವಾಗಿ ಕಟ್ಟಿಕೊಡಲಾಗಿದೆ. 

ಭಾಗ-2ರಲ್ಲಿ ಕರ್ನಾಟಕದಲ್ಲಿ ದಲಿತ ಹೋರಾಟಗಳ ರೂಪರೇಷೆಗಳ ಜತೆಗೆ ಅಸುರ ಮತ್ತು ಆರ್ಯರ ನಡುವಿನ ಸಂಘರ್ಷದ ನೆಲೆಗಳ ಮಾಹಿತಿ ಇದೆ. ಮುಖ್ಯವಾಗಿ ವಿದೇಶಗಳಲ್ಲಿರುವ ಜಾತಿ ಅಸ್ಪೃಶ್ಯತೆಯ ಕುರಿತು ಉಲ್ಲೇಖಿಸಿರುವುದು ಗಮನೀಯ.ಭಾಗ-3ರಲ್ಲಿ ಜಾತಿಗಳ ಮೂಲ, ಹಿಂದೂ ಧಮ೵ ಮತ್ತು ಜಾತಿಯ ಕುರಿತು ವಿದ್ವಾಂಸರ ಅಭಿಪ್ರಾಯಗಳನ್ನು ದಾಖಲಿಸಲಾಗಿದೆ. ಭಾಗ-4ರಲ್ಲಿ ಪ್ರಸ್ತುತ ದಿನಗಳಲ್ಲಿ ಬಹುಚರ್ಚಿತ ವಿಷಯವಾಗಿರುವ ಮೀಸಲಾತಿಯ ಪ್ರಾತಿನಿಧ್ಯದ ಕುರಿತ ವಿವರಗಳಿವೆ. ಜಾತಿ ಕುರಿತು ಆಳವಾಗಿ ಅಧ್ಯಯನ ಮಾಡುವವರಿಗೆ ಡಾ.ಎಂ.ವೆಂಕಟಸ್ವಾಮಿ ಅವರ ಈ ಕೃತಿ ಅತ್ಯುತ್ತಮ ಅಕರ ಗ್ರಂಥವಾಗಿದೆ 

- ಪ್ರಜಾವಾಣಿ.

ವಿಮರ್ಶೆ 2: ಅಸ್ಪೃಶ್ಯತೆ: ಸಾವಿರಾರು ವರ್ಷಗಳ ಬಾಧೆ                                                                                                                                                                                   ವಿಜ್ಞಾನ-ತಂತ್ರಜ್ಞಾನ ಕ್ಷೇತ್ರದಲ್ಲಿ ಮನುಷ್ಯ ಎಷ್ಟೆಲ್ಲ ಸಾಧನೆ, ಆರ್ಥಿಕವಾಗಿ ಎಷ್ಟೆಲ್ಲ ಸಂಪತ್ತು ಗಳಿಸಿರಬಹುದು, ಆದರೆ ಜಾತಿ, ಧರ್ಮದ ವಿಷಯದಲ್ಲಿ ಹಿಮ್ಮುಖ ಚಲನೆ. ಜಾತಿಯ ವಿಷಯ ಬಂದಾಗ, ದೊಡ್ಡ ಧ್ವನಿಯಲ್ಲಿ ಕೆಲವರು `ಎಲ್ಲಿದೆ ಜಾತಿ?' ಎಂದು ಪ್ರಶ್ನಿಸುತ್ತಾರೆ. `ರಾಜ್ಯದಲ್ಲಿ 5 ದಿನಗಳಿಗೊಬ್ಬ ದಲಿತನ ಕೊಲೆ ಆಗುತ್ತದೆ. ಒಂದು ಅಥವಾ ಎರಡು ದಿನಗಳಲ್ಲಿ ದಲಿತ, ಆದಿವಾಸಿ ಮಹಿಳೆಯ ಮೇಲೆ ಅತ್ಯಾಚಾರ ನಡೆಯುತ್ತದೆ. ಪ್ರತಿ 4 ಗಂಟೆಗೊಂದು ದಲಿತರ ದೌರ್ಜನ್ಯ ಪ್ರಕರಣ ವರದಿಯಾಗುತ್ತದೆ' ಎಂದು ಇತ್ತೀಚಿನ ಅಂಕಿಅಂಶಗಳು ಹೇಳಿವೆ. ಸಾವಿರಾರು ವರ್ಷಗಳಿಂದ ಕಾಡುತ್ತಿರುವ ಈ ಸಮಸ್ಯೆಯನ್ನು ಅರ್ಥಮಾಡಿಕೊಳ್ಳಲು ಡಾ.ಎಂ.ವೆಂಕಟಸ್ವಾಮಿ ಅವರ `ಜಾತಿ ಅಸ್ಪೃಶ್ಯತೆಯ ಸಂಘಷ೵' ಪುಸ್ತಕ ನೆರವಾಗುತ್ತದೆ. ಭೂವಿಜ್ಞಾನಿ ಮತ್ತು ಲೇಖಕರಾದ ವೆಂಕಟಸ್ವಾಮಿ, ಅಂದು-ಇಂದಿನ ಕಾಣದ ಕತೆ-ವ್ಯಥೆ ಮತ್ತು ಸಮಸ್ಯೆಗಳನ್ನು ವಿಶ್ಲೇಷಿಸಿದ್ದಾರೆ. ಶಿಸ್ತುಬದ್ಧ ಅಧ್ಯಯನದ ಮೂಲಕ ವಿಷಯಗಳನ್ನು ಚರ್ಚಿಸಿದ್ದಾರೆ.                                                                                                                                                                       ಡಾ.ಜಿ.ರಾಮಕೃಷ್ಣ (ಜಿ.ಆರ್) ಹೇಳುವಂತೆ `ಅಹಂ ಬ್ರಹ್ಮಾಸ್ಮಿ' ಎಂದು ರಮ್ಯತೆಯ ತತ್ವಶಾಸ್ತ್ರ ಬೋಧಿಸಿದ ಶಂಕರ, ರಾಮಾನುಜ, ಮಧ್ವರು ವರ್ಣ ವಿಭಜನೆಯನ್ನು ಸಮರ್ಥಿಸಿ  ಮನುವಿನ ಮಾತಿಗೆ ತಲೆಬಾಗಿದರು. ಇಂತಹ ವಿರೋಧಭಾಸಗಳನ್ನು ವೆಂಕಟಸ್ವಾಮಿ ಚಾರಿತ್ರಿಕೆ ಹಿನ್ನೆಲೆಯಲ್ಲಿ ಪುರಾವೆ ಸಹಿತ ಪ್ರತಿಪಾದಿಸಿದ್ದಾರೆ'. ಪೂರಕ ಅಂಕಿಅಂಶಗಳು, ಉಲ್ಲೇಖಗಳಿಂದಾಗಿ ಪುಸ್ತಕದ ಮಹತ್ವ ಹೆಚ್ಚಿದೆ.  `ದೇಶದ ಜನಸಂಖ್ಯೆಯಲ್ಲಿ ಶೇ.15ರಷ್ಟಿರುವ ಅಸ್ಪೃಶ್ಯರು ಸಾವಿರಾರು ವಷ೵ಗಳಿಂದ ದಂಗೆ ಏಳದೆ, ಪ್ರತ್ಯೇಕ ದೇಶವನ್ನು ಕೇಳದೆ ಸಂಯಮದಿಂದ ಇರುವುದು ಈ ದೇಶ ಇನ್ನೂ ಆಖಂಡವಾಗಿಲು ಕಾರಣವಾಗಿದ್ದಾರೆ. ಇವರಿಗೆ ಇಷ್ಟು ಸಂಯಮ  ಬಹುಶಃ ಬುದ್ಧನಿಂದಲೇ ಬಂದಿರಬೇಕು' ಎನ್ನುವ ಲೇಖಕರು ಸಾವಿರಾರು ವರ್ಷಗಳ ಜಾತಿ, ಅಸ್ಪೃಶ್ಯತೆಯ ಸಂಘರ್ಷವನ್ನು ಸಮರ್ಥವಾಗಿ ದಾಖಲಿಸಿದ್ದಾರೆ. ದಶಾವತಾರ: ಆಸುರ ಮತ್ತು ಆರ್ಯರ  ನಡುವಿನ ಸಂಘರ್ಷ  ಕರ್ನಾಟಕ ದಲ್ಲಿ ದಲಿತ ಹೋರಾಟ, ವಿದೇಶಗಳಲ್ಲಿ ಅಸ್ಪೃಶ್ಯತೆ, ಜಾತಿಗಳ ಮೂಲ, ಹಿಂಧೂ ಧರ್ಮ ಮತ್ತು ಜಾತಿ, ಅಸ್ಪೃಶ್ಯತೆಯ ಮೂಲ, ಮೀಸಲಾತಿ ಎನ್ನುವ 14 ಅಧ್ಯಾಯಗಳಿವೆ. ಅಸ್ಪೃಶ್ಯತೆ ನಿವಾರಣೆಗೆ ಅಂಬೇಡ್ಕರ್ ಮಾಗ೵ದ ಕುರಿತು ಆರಂಭಿಕ ಮೂರು ಅಧ್ಯಾಯಗಳು ಬೆಳಕು ಚೆಲ್ಲಿವೆ 

- ನಟೇಶ್ ಬಾಬು, ವಿಜಯ ಕರ್ನಾಟಕ.   

ವಿಮರ್ಶೆ 3: ಅಸ್ಪೃಶ್ಯರು ಮತ್ತು ಅಸ್ಪಶ್ಯತೆಯ ಮೂಲವನ್ನು ಕುರಿತಾದ ಪುಸ್ತಕ ಕನ್ನಡದಲ್ಲಿ ಇಲ್ಲ ಎಂಬ ಕೊರತೆಯನ್ನು ಸ್ವಲ್ಪ ಮಟ್ಟಗೆ ನೀಗಿಸುವಂತಿರುವ ಈ ಕೃತಿಯು ಶೂದ್ರ ಸಂಸ್ಕೃತಿಯ ಬಗ್ಗೆ ಆಸಕ್ತಿ ಇರುವವರಿಗೆ ಸಹಾಯಕವಾಗಬಲ್ಲದು. ಶ್ರೇಣಿಕೃತ ಸಮಾಜದಲ್ಲಿ ಕವಿ, ಲೇಖಕ, ಬುದ್ಧಿಜೀವಿಗಳೆಲ್ಲ ಒಂದು ನಿದ೵ಷ್ಟ ವರ್ಗಕ್ಕೆ ಅಂಟಿಕೊಂಡಿರುವುದು ನಿಜ. ಆದರೆ ಈ ಕೃತಿಯಲ್ಲಿನ ಚಿಂತನೆಗಳು, ಹೊಸ ವಿಚಾರಗಳು ಅವೆಲ್ಲವನ್ನು ಮೆಟ್ಟಿ ನಿಲ್ಲುವ ಪ್ರಯತ್ನ ಮಾಡಿದ್ದು, ಸಾಮಾಜಿಕ ಹೋರಾಟ ನಡೆಸಿದ ಮಹಾತ್ಮರ ಚಿಂತನೆಗಳನ್ನೊಳಗೊಂಡಿದೆ.

- ಸಂವಾದ ತಿಂಗಳ ಪತ್ರಿಕೆ, ನವೆಂಬರ್, 2020.

  

          

 

  

 

Related Books