ಪ್ರತೀಯಮಾನ

Author : ಸುರೇಂದ್ರನಾಥ ಮಿಣಜಗಿ

Pages 104

₹ 80.00




Published by: ಅಂಕಿತ ಪುಸ್ತಕ
Address: 53, ಶ್ಯಾಮಸಿಂಗ್ ಕಾಂಪ್ಲೆಕ್ಸ್ ಗಾಂಧಿ ಬಜಾರ್ ಮುಖ್ಯರಸ್ತೆ, ಬಸವನಗುಡಿ, ಬೆಂಗಳೂರು -560004

Synopsys

ಹಿರಿಯ ವಿಮರ್ಶಕ ಡಾ. ಸುರೇಂದ್ರನಾಥ ಮಿಣಜಗಿ ಅವರ ವಿಮರ್ಶಾ ಲೇಖನಗಳನ್ನು ಒಳಗೊಂಡ ಸಂಕಲನ. ಈ ಪುಸ್ತಕದಲ್ಲಿ ಒಟ್ಟು ಆರು ವಿಮರ್ಶಾ ಪ್ರಬಂಧಗಳಿವೆ. ವಿಕೆ ಗೋಕಾಕ್, ರಾಮಚಂದ್ರಶರ್ಮ, ಚಂದ್ರಶೇಖರ ಕಂಬಾರ, ಎಚ್.ಕೆ. ರಂಗನಾಥ್, ಇಎಂ ಫಾರ್ಸ್ಟರ್, ಎ.ಕೆ. ರಾಮಾನುಜನ್ ಅವರ ಬರವಣಿಗೆಗಳನ್ನುಕುರಿತ ವಿಮರ್ಶಾತ್ಮಕ ಒಳನೋಟಗಳಿವೆ. ಮುನ್ನುಡಿಯಲ್ಲಿ ಎಚ್.ಎಸ್. ಶಿವಪ್ರಕಾಶ್ ಅವರು ‘ಪ್ರಾಯೋಗಿಕ ವಿಮರ್ಶೆ ಡಾ. ಮಿಣಜಗಿಯವರ ಪ್ರಧಾನ ವಿಶ್ಲೇಷಣಾ ಮಾದರಿ. ಆದರೆ ಅದು ಅಲ್ಲಿಗೇ ನಿಲ್ಲುವುದಿಲ್ಲ. ಸಾಹಿತ್ಯದ ಮೈಮಾಟವನ್ನು ದಾಟಿ ಅದರ ಹಿಂದೆ ಚೈತನ್ಯ ಸ್ವರೂಪಿಯಾಗಿರು ದಾರ್ಶನಿಕ ಸತ್ವವನ್ನು ಅವರು ಗುರುತಿಸಬಲ್ಲರು. ಆ ಮೂಲಕ ಬದಲಾಗುತ್ತಿರುವ ಪ್ರಪಂಚದಲ್ಲಿ ಕಂಡೂ ಕಾಣದಂತಿರುವ ನಿರಂತರತೆಯ ಎಳೆಗಳನ್ನು ಹಿಡಿಯಬಲ್ಲರು. ಇದಕ್ಕೊಂದು ನಿದರ್ಶನವೆಂದರೆ ರಾಮಚಂದ್ರಶರ್ಮರ ನವ್ಯತೆ ಚಾರ್ವಾಕರ ದೇಹಮೂಲವಾದ ನೋಟದ ಪುನರುಕ್ತಿ ಎಂಬುದನ್ನು ಮಿಣಜಗಿಯವರು ಗುರುತಿಸುವ ಬಗೆ. ಡಾ. ಮಿಣಜಗಿಯವರ ವಿದ್ವತ್ತಿನ ಪರಿಧಿ ಬಹಳ ವಿಸ್ತಾರವಾದುದು. ಹಳಗನ್ನಡ- ಹೊಸಗನ್ನಡ ಸಾಹಿತ್ಯಗಳನ್ನು ಅವರು ಚೆನ್ನಾಗಿ ತಿಳಿದುಕೊಂಡಿದ್ದಾರೆ. ಇಂಗ್ಲೀಷ್ ಸಾಹಿತ್ಯ ಪರಂಪರೆಯ ವಿವಿಧ ಧಾರೆಗಳನ್ನು ಸಂಸ್ಕೃತ-ಪ್ರಾಕೃತಗಳನ್ನು ತಲಸ್ಪರ್ಶಿಯಾಗಿ ಕಲಿತಿದ್ದಾರೆ. ಭಾರತೀಯ ಮತ್ತು ಪಾಶ್ಚಿಮಾತ್ಯ ದರ್ಶನ ಮತ್ತು ಸೌಂದರ್ಯಶಾಸ್ತ್ರಗಳಲ್ಲಿ ನುರಿತವರಾಗಿದ್ದಾರೆ.

About the Author

ಸುರೇಂದ್ರನಾಥ ಮಿಣಜಗಿ
(05 September 1926 - 01 October 2015)

ಬೆಳಗಾವಿ ಜಿಲ್ಲೆಯ ಗುಳೇದಗುಟ್ಟಿದಲ್ಲಿ ಜನಿಸಿದ ಸುರೇಂದ್ರನಾಥ ಅವರು ಗುಳೇದಗುಡ್ಡ, ಧಾರವಾಡ, ಸಾಂಗ್ಲಿಗಳಲ್ಲಿ ವಿದ್ಯಾಭ್ಯಾಸ ಮಾಡಿದರು. ಇಂಗ್ಲಿಷ್ ಸಾಹಿತ್ಯದಲ್ಲಿ ಎಂ.ಎ. ಪದವಿ ಪಡೆದ ಅವರು ನಂತರ ಧಾರವಾಡದಲ್ಲಿ ವೃತ್ತಿ ಜೀವನ ಆರಂಭಿಸಿದರು. ಆಮೇಲೆ ಗುಜರಾತಿನ ವಲ್ಲಭ ವಿದ್ಯಾನಗರದ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ಅಲ್ಲಿಯೇ ನಿವೃತ್ತರಾದರು. ಕನ್ನಡದ ಸೃಜನಶೀಲ ವಿಮರ್ಶಕರಲ್ಲಿ ಒಬ್ಬರಾದ ಮಿಣಜಗಿಯವರು ವಿ.ಕೃ. ಗೋಕಾಕರ ಆಪ್ತಶಿಷ್ಯರಲ್ಲೊಬ್ಬರು. ‘ಸೃಜನಕ್ರಿಯೆ ಮತ್ತು ಸಂವೇದನೆ’, ಎಲಿಯಟ್: ಕವಿ ಹಾಗೂ ನಾಟಕಕಾರ, ಪ್ರತೀಯಮಾನ, ವಿನಾಯಕ ಕೃಷ್ಣ ಗೋಕಾಕ್, ಟಿ.ಎಸ್. ಎಲಿಯಟ್ ವಿಮರ್ಶೆಯ ವಿಚಾರಗಳು ಇವರ ಪ್ರಮುಖ ಕೃತಿಗಳು. ಎಲಿಯಟ್: ಕವಿ ಹಾಗೂ ...

READ MORE

Related Books