ಬೇಂದ್ರೆಯವರ ಕಾವ್ಯದಲ್ಲಿ ರಸಸಿದ್ಧಿ

Author : ಸತ್ಯಕಾಮ (ಅನಂತ ಕೃಷ್ಣಾಚಾರ್ಯ ಶಹಾಪುರ)

Pages 1




Published by: ಅಭಿನವ ಪ್ರಕಾಶನ
Address: 17/18-2, ಮೊದಲನೆಯ ಮುಖ್ಯರಸ್ತೆ, ಮಾರೇನಹಳ್ಳಿ, ವಿಜಯನಗರ, ಬೆಂಗಳೂರು-560040
Phone: 9448804905

Synopsys

“ಸತ್ಯಕಾಮ” ಕನ್ನಡದ ವಿಶಿಷ್ಟ ಸಂವೇದನಾ ಚೈತನ್ಯ, ತಮ್ಮ ಜನಪ್ರಿಯ ಮತ್ತು ತಾಂತ್ರಿಕ-ತಾತ್ವಿಕ ಶೈಲಿಯ ಕಾದಂಬರಿಗಳ ಮೂಲಕ ಎಷ್ಟು ಜನಪ್ರಿಯರೋ ಅದಕ್ಕಿಂತ ಹೆಚ್ಚು ಅವರ ಸಾಧನೆ-ಸಿದ್ಧಿಗಳಿಂದ ಹೆಸರಾಗಿದ್ದಾರೆ.1946ರಲ್ಲಿ ಬರೆದ ಈ ಬರಹಗಳಲ್ಲಿ ಬೇಂದ್ರೆಯವರ ಸಾಹಿತ್ಯದ ಕೆಲವು ಹೊಳಹುಗಳನ್ನು ಗುರುತಿಸಿದ್ದಾರೆ.  

About the Author

ಸತ್ಯಕಾಮ (ಅನಂತ ಕೃಷ್ಣಾಚಾರ್ಯ ಶಹಾಪುರ)
(02 March 1920 - 20 October 1998)

’ಸತ್ಯಕಾಮ’ ಎಂಬುದು ಅನಂತ ಕೃಷ್ಣಾಚಾರ್ಯ ಶಹಾಪುರ ಅವರ ಕಾವ್ಯನಾಮ. ತಮ್ಮ ಕಾದಂಬರಿ ಹಾಗೂ ತಂತ್ರವಿದ್ಯೆ, ಕೃಷಿಯ ಮೂಲಕ ನಾಡಿನ ಮನೆ ಮಾತಾದವರು ’ಸತ್ಯಕಾಮ’. ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲ್ಲೂಕಿನ ಗಲಗಲಿಯಲ್ಲಿ 1920ರ ಮಾರ್ಚ್ 2ರಂದು ಜನಿಸಿದರು. (ಕೆಲವು ಕಡೆ ಏಪ್ರಿಲ್ 16 ಎಂದು ದಾಖಲಾಗಿದೆ.)  ಆರಂಭಿಕ ಶಿಕ್ಷಣವನ್ನು ಗಲಗಲಿಯಲ್ಲಿ ಪಡೆದ ಅವರು ಮುಲ್ಕಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ನಂತರ ಶಾಲೆಯ ಗೊಡವೆಗೇ ಹೋಗದೆ ಒಂದು ವರ್ಷ ಗಲಗಲಿಯಲ್ಲಿಯೇ ಕಳೆದರು. 1935ರಲ್ಲಿ ಬಾಗಲಕೋಟೆಯ ಸಕ್ರಿ ಹೈಸ್ಕೂಲಿಗೆ ಸೇರಿದರಾದರೂ ಓದು ಮುಂದುವರಿಸಲಿಲ್ಲ. ಭಾರತದಲ್ಲಿ ಉಪ್ಪಿನ ಸತ್ಯಾಗ್ರಹ ನಡೆಯುತ್ತಿದ್ದ 1930-31ರಲ್ಲಿ ಬಾಲಕ ಅನಂತ ...

READ MORE

Related Books