ಬಸವರಾಜ ಕಟ್ಟೀಮನಿ ಕಾದಂಬರಿಗಳ ಸಮೀಕ್ಷೆ- 4

Author : ಬಾಳಾಸಾಹೇಬ ಲೋಕಾಪುರ

Pages 116

₹ 120.00




Year of Publication: 2020
Published by: ಬಸವರಾಜ ಕಟ್ಟೀಮನಿ ಪ್ರತಿಷ್ಠಾನ
Address: ಬೆಳಗಾವಿ

Synopsys

‘ಬಸವರಾಜ ಕಟ್ಟೀಮನಿ ಕಾದಂಬರಿಗಳ ಸಮೀಕ್ಷೆ- 4’ ಬಸವರಾಜ ಕಟ್ಟೀಮನಿ ಜನ್ಮಶತಮಾನೋತ್ಸವದ ಪ್ರಯುಕ್ತ 2019ನೇ ಸಾಲಿನಲ್ಲಿ ಪ್ರಕಟವಾದ ಕೃತಿ. ಈ ಕೃತಿಯನ್ನು ಡಾ. ಬಾಳಾಸಾಹೇಬ ಲೋಕಾಪುರ ಅವರು ಸಂಪಾದಿಸಿದ್ದಾರೆ. ಈ ಸಂಪುಟಗಳಲ್ಲಿ ಕಟ್ಟೀಮನಿಯವರ 40 ಕಾದಂಬರಿಗಳನ್ನು 40 ಲೇಖಕರು ಹಲವಾರು ನೆಲೆಗಳಿಂದ ವಿಮರ್ಶಿಸಿದ್ದಾರೆ. ಈ 40 ಕಾದಂಬರಿಗಳನ್ನು ಇಲ್ಲಿ ನಾಲ್ಕು ಸಂಪುಟಗಳಲ್ಲಿ ವಿಭಾಗಿಸುವಾಗ ಕಾಲಾನುಕ್ರಮವನ್ನು ಅನುಸರಿಸಿಲ್ಲ. ಎಲ್ಲ ಬಗೆಯ ಕಾದಂಬರಿಗಳು ಪ್ರತಿ ಸಂಪುಟದಲ್ಲಿ ಸೇರುವಂತೆ ನೋಡಿಕೊಳ್ಳಲಾಗಿದೆ. ಹಾಗಾಗಿ ಪ್ರತೀ ಸಂಪುಟದಲ್ಲೂ ವೈವಿಧ್ಯತೆ ಇರುವುದನ್ನು ಗಮನಿಸಬಹುದು. ಕಟ್ಟೀಮನಿ ಅವರ ಸಮಗ್ರ ಸಂಪುಟಗಳು ಹೊರಬಂದ ಬಳಿಕ ಅವರ 40 ಕಾದಂಬರಿಗಳನ್ನು ಕುರಿತ 40 ಲೇಖಕರಿಂದ ಪ್ರತ್ಯೇಕ ಲೇಖನಗಳನ್ನು ಬರೆಯಿಸಿ ಪ್ರಕಟಿಸುತ್ತಿರುವುದು ಇದು ಮೊದಲ ಬಾರಿ, ಕಟ್ಟೀಮನಿಯವರ ಕಾದಂಬರಿಗಳ ಓದುಗರಿಗೆ ಇದು ಉಪಯುಕ್ತವಾಗುತ್ತದೆ. ಈ ಕಾರಣಕ್ಕಾಗಿ ಇದೊಂದು ಒಳ್ಳೆಯ ಪ್ರಯತ್ನವೆಂದು ಭಾವಿಸಿದ್ದೇನೆ ಎನ್ನುತ್ತಾರೆ ಬಸವರಾಜ ಕಟ್ಟೀಮನಿ ಪ್ರತಿಷ್ಟಾನದ ಅಧ್ಯಕ್ಷ ಪ್ರೊ. ಮಲ್ಲಿಕಾರ್ಜುನ ಹಿರೇಮಠ.

About the Author

ಬಾಳಾಸಾಹೇಬ ಲೋಕಾಪುರ

ಬೆಳಗಾವಿ ಜಿಲ್ಲೆ ಅಥಣಿ ತಾಲ್ಲೂಕಿನ ಶಿರಹಟ್ಟಿಯವರಾದ ಲೇಖಕ ಬಾಳಾಸಾಹೇಬ ಲೋಕಾಪುರ 1955ರಲ್ಲಿ ಜನಿಸಿದರು. ನವ್ಯೊತ್ತರ ಸಾಹಿತಿಗಳಾದ ಇವರು ಕರ್ನಾಟಕ ವಿಶ್ವವಿದ್ಯಾಲಯದಿಂದ ಭೂಗೋಳ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ, ಹಂಪಿ ಕನ್ನಡ ವಿಶ್ವವಿದ್ಯಾನಿಲಯದಿಂದ ‘ಆಧುನಿಕ ಕನ್ನಡ ಕಥನ ಸಾಹಿತ್ಯದಲ್ಲಿ ಜೈನ ಸಂವೇದನೆ’ ವಿಷಯದಲ್ಲಿ ಪಿಹೆಚ್ ಡಿ ಪಡೆದರು.  ಬಾಗಲಕೋಟೆಯ ಸಕ್ರಿ ಕಾಲೇಜಿನಲ್ಲಿ ಭೂಗೋಳ ಶಾಸ್ತ್ರದ ಉಪನ್ಯಾಸಕರಾದ ಇವರು ಸಾಹಿತ್ಯ ಕ್ಷೇತ್ರದ ಹಲವು ಪ್ರಕಾರಗಳಲ್ಲಿ ಕೃತಿಗಳನ್ನು ರಚಿಸಿದ್ದಾರೆ. ಕವಣಿಗಲ್ಲು, ಹಾರುವ ಹಕ್ಕಿ ಮತ್ತು ಆಕಾಶ, ತನು ಕರಗದವರಲ್ಲಿ, ಮತ್ತು ಕಂಗಳು ತುಂಬಿದ ಬಳಿಕ ಎಂಬ ಕತಾಸಂಕಲನಗಳು, ಉಧೊ ಉಧೊ, ಹುತ್ತ, ಬಿಸಿಲುಪುರ, ನೀಲಗಂಗಾ ಎಂಬ ಕಾದಂಬರಿಗಳು, ...

READ MORE

Related Books