ನೀರೆಲ್ಲವೂ ತೀರ್ಥ

Author : ಅಂದಯ್ಯ ಅರವಟಗಿಮಠ

Pages 88

₹ 110.00
Year of Publication: 2024
Published by: ಅಡ್ಲಿಗಿ ಪ್ರಕಾಶನ
Address: ಮಸ್ಕಿ-584124
Phone: 91 98801 32569

Synopsys

'ನೀರೆಲ್ಲವೂ ತೀರ್ಥ' ಲೇಖಕ ಡಾ. ಅಂದಯ್ಯ ಅರವಟಗಿಮಠ ಅವರ ವಿಮರ್ಶಾ ಲೇಖನಗಳ ಸಂಕಲನ. ಸಾಹಿತ್ಯ ವಿಮರ್ಶೆ ಸಂಕಷ್ಟದಲ್ಲಿದೆ; ಸಾಹಿತ್ಯ ವಿಮರ್ಶಕರು ಕವಲು ದಾರಿಯಲ್ಲಿದ್ದಾರೆ. ಸಾಹಿತ್ಯ ಕೃತಿಯನ್ನು ಶುದ್ಧ ಸಾಹಿತ್ಯದ ಮಾನದಂಡಗಳಿಂದ ಪರಿಶೀಲಿಸಲು ಸಾಧ್ಯವಾಗದ ಕಾರಣ ಸಾಹಿತ್ಯ ವಿಮರ್ಶೆ ಸಂಕಷ್ಟದಲ್ಲಿದ್ದರೆ, ಹೇಳಬೇಕಾದ ಮಾತು ಹೇಳದೆ, ಹೇಳಲಾಗದ, ಹೇಳಬಾರದ ಮಾತು ಹೇಳಲು ಹೊರಟ ಸಾಹಿತ್ಯ ವಿಮರ್ಶಕರು ಕವಲು ದಾರಿಯಲ್ಲಿದ್ದಾರೆ. ಸಾಹಿತ್ಯದ ಸಾಮಾಜೀಕರಣ, ಸಾಹಿತ್ಯದ ರಾಜಕೀಕರಣ ಈ ಹೊತ್ತಿನ ಸಾಹಿತ್ಯ ವಿಮರ್ಶೆ ಎದುರಿಸುತ್ತಿರುವ ಎರಡು ಸಂಕಷ್ಟಗಳು, ಇದರಿಂದ ಬಿಡುಗಡೆ ಇಲ್ಲವೇನೋ ಎನಿಸುವಷ್ಟು ವಿಮರ್ಶೆ ಮತ್ತು ವಿಮರ್ಶಕರು ಶುದ್ಧ ಸಾಹಿತ್ಯದ ಚರ್ಚೆಯಿಂದ ದೂರ ಸರಿದಿದ್ದಾರೆ. ಇದರಿಂದ ಬಿಡುಗಡೆ ಹೊಂದದ ಹೊರತು ಸಾಹಿತ್ಯ ಕೃತಿಗಳೊಂದಿಗಿನ ಆತ್ಮೀಯ ಅನುಸಂಧಾನ, ಪ್ರೀತಿಯ ಒಡನಾಡ ಸಾಧ್ಯವಾಗುವುದಿಲ್ಲ. ಡಾ. ಅಂದಯ್ಯ ಅರವಟಗಿ ಮಠರ 'ನೀರೆಲ್ಲವೂ ತೀರ್ಥ' ವಿಮರ್ಶೆ ಕೃತಿ ಇಂಥ ಅಪಾಯಗಳಿಂದ ತಪ್ಪಿಸಿಕೊಳ್ಳಲು ಗಂಭೀರ ಪ್ರಯತ್ನ ಮಾಡಿದೆ.

ಈ ಕಿರುಹೊತ್ತಿಗೆಯಲ್ಲಿನ ಹತ್ತು ಲೇಖನಗಳು ಕನ್ನಡದ ಮಹತ್ವದ ಕಥೆಗಾರರ, ಕಾದಂಬರಿಕಾರರ ಮತ್ತು ಸಂಶೋಧಕರ ಪ್ರಮುಖ ಕೃತಿಗಳ ಕುರಿತು ಚರ್ಚಿಸುತ್ತವೆ. ಇಲ್ಲಿನ ಲೇಖನಗಳ ಹಿಂದೆ ಸೂಕ್ಷ್ಮವಾದ, ಮುಗ್ಧವಾದ ಮನಸ್ಸು ಕೆಲಸ ಮಾಡಿದೆ. ಬೀಸು ಹೇಳಿಕೆಗಳು, ಸರಳ ತೀರ್ಮಾನಗಳು ಮತ್ತು ಅತಿರೇಖದ ಅಭಿಪ್ರಾಯಗಳು ಇಲ್ಲಿನ ಲೇಖನಗಳಲ್ಲಿ ಕಾಣಿಸುವುದಿಲ್ಲ. ಓಲೈಕೆಯ ಅಥವಾ ತೆಗಳಿಕೆಯ ಉದ್ದೇಶ ವಿಮರ್ಶಕರಿಗಿಲ್ಲ. ಆ ಕಡೆ, ಈ ಕಡೆ ನೋಡದೆ, ಆಕಾಶ ಭೂಮಿ ಒಂದಾಗಿಸಿ, ಬುದ್ದಿ-ಭಾವದ ನಡುವೆ ಸಂಯಮ ಇಟ್ಟುಕೊಂಡು ಸಾಹಿತ್ಯ ಕೃತಿಗಳನ್ನು ನೋಡುವ ಕ್ರಮ ಮೆಚ್ಚುವಂಥದ್ದು. ರೂಢಿಗತ ಅಭಿಪ್ರಾಯಗಳು, ಬೌದ್ಧಿಕ ವಲಯ ನಿರಂತರವಾಗಿ ಸೃಷ್ಟಿಸುವ ಸಂಕಥನಗಳು ಮತ್ತು ಪ್ರತಿಯೊಂದನ್ನೂ ಪೂರ್ವಾಗ್ರಹದಿಂದ ನೋಡುವ ಒಡಕು ಅಥವಾ ಪಾರ್ಶ್ವ ನೆಲೆಗಳು ಇವುಗಳಿಂದ ತಪ್ಪಿಸಿಕೊಳ್ಳಲು ವಿಮರ್ಶಕನಾದವನು ಪ್ರಯತ್ನಿಸಬೇಕು. ವಿಮರ್ಶೆ ಅಗಾಧ ಧೈರ್ಯ ಮತ್ತು ಸಹನಶಕ್ತಿ ನಿರೀಕ್ಷಿಸುತ್ತದೆ. ನಿರ್ಭಯದಿಂದ ಬರೆಯಲು ಎಲ್ಲಾ ರೀತಿಯ ದಾಕ್ಷಿಣ್ಯ ಮೀರಬೇಕಾಗುತ್ತದೆ. ಕೇಳದ ಧ್ವನಿ ಕೇಳಿಸುವ ಕೆಲಸ ವಿಮರ್ಶಕ ಮಾಡಬೇಕಾಗುತ್ತದೆ. ವಿಶ್ಲೇಷಣಾತ್ಮಕ ಭಾಷೆ, ಆದ್ರ್ರ ಶೈಲಿ ಮತ್ತು ವಸ್ತುನಿಷ್ಟ ದೃಷ್ಟಿಕೋನ ಹೊಂದಿರುವ ಅರವಟಗಿಮಠರಿಂದ ಅನೇಕ ಉತ್ತಮ ವಿಮರ್ಶಾ ಕೃತಿಗಳನ್ನು ನಿರೀಕ್ಷಿಸಬಹುದು. 

About the Author

ಅಂದಯ್ಯ ಅರವಟಗಿಮಠ
(26 July 1993)

ಅಂದಯ್ಯ ಅರವಟಗಿಮಠ ಅವರು ಗದಗ ಜಿಲ್ಲೆಯ ರೋಣ ತಾಲೂಕಿನ ಡಂಬಳ ಸಮ್ಮತ ಹಡಗಲಿಯಲ್ಲಿ ಜುಲೈ 26, 1993ರಂದು ಜನಿಸಿದರು. ಹುಟ್ಟೂರಿನಲ್ಲಿಯೇ ಪ್ರಾಥಮಿಕ ಶಿಕ್ಷಣ, ಪ್ರೌಢ ಮತ್ತು ಪದವಿಪೂರ್ವ ಶಿಕ್ಷಣವನ್ನು ಬೆಳಗಾವಿಯ ಸರ್ಕಾರಿ ಸದಾರ್ಸ್ ಪದವಿ ಪೂರ್ವ ಮಹಾವಿದ್ಯಾಲಯ, ಪದವಿ ಶಿಕ್ಷಣವನ್ನು ಸರ್ಕಾರಿ ಪ್ರಥಮದರ್ಜೆ ಮಹಾವಿದ್ಯಾಲಯ ಗದಗ, ಸ್ನಾತಕೋತ್ತರ ಪದವಿಯನ್ನು ಡಾ. ಆರ್.ಸಿ.ಹಿರೇಮಠ ಕನ್ನಡ ಅಧ್ಯಯನ ಪೀಠ, ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದಲ್ಲಿ ಪೂರೈಸಿದ್ದಾರೆ. ಕನ್ನಡ ವಿಶ್ವವಿದ್ಯಾಲಯ ಹಂಪಿಯ ಕನ್ನಡ ಸಾಹಿತ್ಯ ಅಧ್ಯಯನ ವಿಭಾಗದ ಪ್ರಾಧ್ಯಾಪಕರಾದ ಡಾ. ವೆಂಕಟಗಿರಿ ದಳವಾಯಿಯವರ ಮಾರ್ಗದರ್ಶನದಲ್ಲಿ ‘ಕನ್ನಡ ವಚನ ವಿಮರ್ಶೆಗಳ ತಾತ್ವಿಕ ನೆಲೆಗಳು’ ಎಂಬ ವಿಷಯದ ...

READ MORE

Related Books