ಕನ್ನಡ ಸಾಹಿತ್ಯ ಮೀಮಾಂಸೆ

Author : ರಹಮತ್ ತರೀಕೆರೆ

Pages 552

₹ 200.00




Year of Publication: 2001
Published by: ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ

Synopsys

ಆಧುನಿಕ ಕನ್ನಡ ಸಾಹಿತ್ಯದಲ್ಲಿ ಹರಡಿರುವ ಸಾಹಿತ್ಯ ಚಿಂತನೆಯನ್ನು ವ್ಯವಸ್ಥಿತ ವಾಗಿ ಮರುರಚಿಸಿ ನೋಡುವ ಒಂದು ವಿಭಿನ್ನ ಪ್ರಯತ್ನ ಇದು. ನವೋದಯದ ಬಿ ಎಂ ಶ್ರೀ ಅವರಿಂದ ಹಿಡಿದು ಇತ್ತೀಚಿನ ದೇವನೂರು ಅವರ ವರೆಗಿನ ಕನ್ನಡ ಬರಹಗಾರರು ಬರೆದಿರುವ 50 ಲೇಖನಗಳು ಸಂಗ್ರಹದಲ್ಲಿವೆ. ಕನ್ನಡ ಸಾಹಿತ್ಯ ಮೀಮಾಂಸೆ ಹುಡುಕಿಕೊಳ್ಳಬೇಕಾದ ಅಗತ್ಯ ವಿಧಾನ ಹಾಗೂ ಸಮಸ್ಯೆಗಳನ್ನು ವಿವೇಚಿಸುವ ಪ್ರಸ್ತಾವನೆ ಕೃತಿಯ ಪ್ರಮುಖ ಅಂಶ. ಲೇಖನಗಳನ್ನು ನವೋದಯ ಕಾಲಘಟ್ಟದ ಸಾಹಿತಿಗಳ ಪ್ರಮುಖ ವಿಚಾರ ಲೇಖನಗಳು,  ಪ್ರಗತಿಶೀಲ ಕಾಲಘಟ್ಟದ ಸಾಹಿತಿಗಳ ಪ್ರಮುಖ ವಿಚಾರ ಲೇಖನಗಳು, ನವ್ಯ ಬಂಡಾಯ ಕಾಲಘಟ್ಟದ ಸಾಹಿತಿಗಳ ಪ್ರಮುಖ ವಿಚಾರ ಲೇಖನಗಳು ಎಂದು ವಿಭಾಗಿಸಲಾಗಿದೆ.

About the Author

ರಹಮತ್ ತರೀಕೆರೆ
(26 August 1959)

ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಾಹಿತ್ಯ ಅಧ್ಯಯನ ವಿಭಾಗದ ಪ್ರಾಧ್ಯಾಪಕರಾಗಿರುವ ರಹಮತ್ ತರೀಕೆರೆ ಅವರು ಸಂಶೋಧಕ, ವಿಮರ್ಶಕ, ಲೇಖಕ. ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲ್ಲೂಕಿನ ಸಮತಳದವರಾದ (ಜ. 1959) ಅವರು ಮೈಸೂರು ವಿಶ್ವವಿದ್ಯಾಲಯದಿಂದ ಏಳು ಚಿನ್ನದ ಪದಕಗಳೊಂದಿಗೆ ಎಂ.ಎ. ಪದವಿ ಪಡೆದಿದ್ದಾರೆ. ಸ್ಪಷ್ಟ ಸೈದ್ಧಾಂತಿಕ ನಿಲುವು ಹೊಂದಿರುವ ರಹಮತ್ ಅವರು ಬಂಡಾಯ ಸಾಹಿತ್ಯ ಸಂಘಟನೆಯಲ್ಲಿದ್ದವರು. ಪಶ್ಚಿಮದ ಲೇಖಕರಿಗಿಂತ ಭಾರತೀಯ ಭಾಷೆಗಳ ಲೇಖಕರಿಂದ ಕಲಿಯುವ ಅಗತ್ಯವಿದೆಯೆಂದು ಭಾವಿಸುವ ‘ದೇಸಿವಾದಿ’ ಲೇಖಕ. ‘ಆಧುನಿಕ ಕನ್ನಡ ಕಾವ್ಯ ಮತ್ತು ಪ್ರತಿಭಟನೆ’ ವಿಷಯದ ಮೇಲೆ ಪ್ರಬಂಧ ಬರೆದು ಪಿಎಚ್.ಡಿ. ಪದವಿ ಪಡೆದಿರುವ ಅವರ ಮೊದಲ ...

READ MORE

Related Books