ಕಾಡುಮಕ್ಕಳ ಕೂಗು

Author : ತಂಬಂಡ ವಿಜಯ್ ಪೂಣಚ್ಚ

Pages 468

₹ 400.00




Year of Publication: 2023
Published by: ವೇದಿಕೆ ಪ್ರಕಾಶನ
Address: ಬೆಂಗಳೂರು

Synopsys

‘ಕಾಡುಮಕ್ಕಳ ಕೂಗು’ ವಿಜಯ್‌ ಪೂಣಚ್ಚ ತಂಬಂಡ ಅವರ ವಿಮರ್ಶಾತ್ಮಕ ಕೃತಿಯಾಗಿದೆ. ಚಾರಿತ್ರಿಕವಾಗಿ ಕೊಡಗಿನ ಸಮಾಜವನ್ನು ಕಟ್ಟಿಕೊಡುವುದರ ಜೊತೆಗೆ ಸಮಕಾಲೀನ ದಲಿತ-ಬುಡಕಟ್ಟು ಜಗತ್ತನ್ನು ಪರಿಚಯಿಸುವ ಪ್ರಯತ್ನವನ್ನು ಮಾಡಿರುವುದು ಈ ಸಂಶೋಧನೆಯ ವಿಶಿಷ್ಟತೆಯಾಗಿದೆ. ಈ ಜಗತ್ತಿನಲ್ಲಿ ಕಂಡ ಬದುಕು, ಫ್ಯಾಂಟಸಿ, ಸುಖ, ದುಃಖ, ದುಮ್ಮಾನ, ಅಸಹಾಯಕತೆಗಳನ್ನು ಪ್ರಸ್ತುತ ಕೃತಿಯು ದಾಖಲಿಸುವ ಪ್ರಯತ್ನ ಮಾಡಿದೆ. ತಮ್ಮ ಮೇಲಾದ ದಬ್ಬಾಳಿಕೆಯ ವಿರುದ್ಧ ಈ ಸಮುದಾಯಗಳು ತೋರಿದ ಪ್ರತಿರೋಧಗಳ ವಿವಿಧ ನೆಲೆಗಳು ಪ್ರಸ್ತುತ ಸಂಶೋಧನೆಯಲ್ಲಿ ವಿಮರ್ಶೆಗೊಳಪಟ್ಟಿವೆ. ಇಂತಹ ಅವಿಸ್ಮರಣೀಯ ಮತ್ತು ಬಹಳ ಮಹತ್ವದ ಸಂಶೋಧನೆಯನ್ನು ಕೈಗೊಂಡು ಮನಮುಟ್ಟುವ ಭಾಷೆಯಲ್ಲಿ ದಾಖಲಿಸಿ ತಳಸಮುದಾಯಗಳನ್ನು ಚರಿತ್ರಾರ್ಹರನ್ನಾಗಿಸಿದ ಕೀರ್ತಿಯು ಡಾ. ವಿಜಯ್ ಪೂಣಚ್ಚ ತಂಬಂಡ ಹಾಗೂ ಅವರ ಸಂಶೋಧನಾ ತಂಡಕ್ಕೆ ಸಲ್ಲುತ್ತದೆ .

About the Author

ತಂಬಂಡ ವಿಜಯ್ ಪೂಣಚ್ಚ

ತಂಬಂಡ ವಿಜಯ್ ಪೂಣಚ್ಚ ಮೂಲತಃ ಮಡಿಕೇರಿಯವರು. ಮಂಗಳೂರು ವಿ.ವಿ.ಯಲ್ಲಿ ಸ್ನಾತಕೋತ್ತರ ಪದವಿ, ಆಕ್ಸ್ ಫರ್ಡ್ ವಿ.ವಿ.ಯಲ್ಲಿ ಡಾಕ್ಟರೇಟ್ ಪದವಿ ನಂತರ, ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಹಾಲೇರಿ ಅರಸ ವೀರರಾಜೇಂದ್ರ ಒಡೆಯರ್ ಕುರಿತು ಬರೆದ ‘ರಾಜೇಂದ್ರನಾಮೆ ಮರು ಓದು’ ಮಹತ್ವದ ಕೃತಿಗಳಲ್ಲಿ ಒಂದು. ಹೊಸ ತಲೆಮಾರಿನ ಪ್ರಮುಖ ಇತಿಹಾಸಕಾರರಾಗಿರುವ ವಿಜಯ್ ಪೂಣಚ್ಚ, ಸದ್ಯ ಹಂಪಿ ಕನ್ನಡ ವಿ.ವಿ.ಇತಿಹಾಸ ವಿಭಾಗದಲ್ಲಿ ಪ್ರೊಫೆಸರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ...

READ MORE

Related Books