ಮಣ್ಣೊಡಲ ಮೊಳಕೆ

Author : ಪಾರ್ವತಿ ಕನಕಗಿರಿ

Pages 74

₹ 80.00




Year of Publication: 2019
Published by: ಬೆಳದಿಂಗಳು ಪ್ರಕಾಶನ
Address: ಬೆಳಗಾವಿ
Phone: 9902130041

Synopsys

’ಮಣ್ಣೊಡಲ ಮೊಳಕೆ’ ವಿಮರ್ಶಾ ಲೇಖನ ಸಂಕಲನದಲ್ಲಿ ಒಟ್ಟು 11 ಲೇಖನಗಳಿದ್ದು ಪ್ರಮುಖವಾಗಿ ಎರಡು ತೆರನಾದ ನೆಲಮೂಲದ ಸಂವೇದನೆಯನ್ನು ಪ್ರತಿನಿಧಿಸುವಂತಿವೆ. ನಾಲ್ಕು ಲೇಖನಗಳು ರಂಗಭೂಮಿಯ ವಿಶ್ಲೇಷಣೆಗೆ ಸಂಬಂಧಿಸಿದ್ದರೆ, ಉಳಿದ ಲೇಖನಗಳು ಹೊಸಗನ್ನಡದ ಅದರಲ್ಲೂ ದಲಿತ-ಬಂಡಾಯದ ಕಾದಂಬರಿಗಳಲ್ಲಿ ಮಹಿಳಾ ಪ್ರತಿನಿಧಿತ್ವವನ್ನು ಶೋಧಿಸುವ ವಿಷಯವನ್ನೊಳಗೊಂಡಿವೆ. ತನ್ನ ಪರಿಸರದ ರಂಗಭೂಮಿ ಹಾಗೂ ತನ್ನತನವನ್ನು ಪ್ರತಿನಿಧಿಸುವ ಮಹಿಳಾ ವಸ್ತು ಪಾರ್ವತಿ ಅವರ ಸಂವೇದನೆಯಾಗಿದೆ. ವಿಮರ್ಶೆಯಲ್ಲಿ ವಸ್ತುವಿನ ಆಯ್ಕೆ ಮತ್ತು ಅದನ್ನು ವಿಶ್ಲೇಷಿಸಿರುವ ರೀತಿ ಪ್ರಬುದ್ಧವಾಗಿವೆ.

About the Author

ಪಾರ್ವತಿ ಕನಕಗಿರಿ
(01 June 1994)

ಲೇಖಕಿ ಪಾರ್ವತಿ ಕನಕಗಿರಿ, ಕೊಪ್ಪಳ ಜಿಲ್ಲೆಯ ಕನಕಗಿರಿಯವರು. ಕಲಬುರಗಿಯ ಕೇಂದ್ರೀಯ ವಿಶ್ವವಿದ್ಯಾಲಯದಿಂದ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಪಡೆದು, ಪ್ರಸ್ತುತ ಹಂಪಿ ಕನ್ನಡ ವಿಶ್ವವಿದ್ಯಾಲಯದ ಮಹಿಳಾ ಅಧ್ಯಯನ ವಿಭಾಗದಲ್ಲಿ 'ಕನ್ನಡ ಬಂಡಾಯ ಕಾದಂಬರಿಗಳಲ್ಲಿ ಮಹಿಳಾ ಪ್ರತಿನಿಧೀಕರಣ'  ಕುರಿತು ಪಿಎಚ್.ಡಿ ಅಧ್ಯಯನ ಮಾಡುತ್ತಿದ್ದಾರೆ. ಈಗಾಗಲೇ ಅವರ ಕವಿತೆಗಳು ಹಾಗೂ ಲೇಖನಗಳು ಹಲವು ಪತ್ರಿಕೆ ಮತ್ತು ನಿಯತಕಾಲಿಕೆಗಳಲ್ಲಿ ಪ್ರಕಟಗೊಂಡಿವೆ. ಕನ್ನಡ ಪುಸ್ತಕ ಪ್ರಾಧಿಕಾರದ ಪ್ರೋತ್ಸಾಹಧನದಿಂದ ಪ್ರಕಟಗೊಂಡಿರುವ 'ಮಣ್ಣೊಡಲ ಮೊಳಕೆ' ಇವರ ಮೊದಲ ವಿಮರ್ಶಾ ಸಂಕಲನ. ಇಲ್ಲಿ 11 ಲೇಖನಗಳಿವೆ.  ...

READ MORE

Related Books