ಮಹಾದೇವಿಯಕ್ಕನ ಮದುವೆ

Author : ಎಸ್.ಪಿ. ಪಾಟೀಲ

Pages 64

₹ 50.00




Year of Publication: 2004
Published by: ದಿ ಬಂಥನಾಳ ಶ್ರೀ ವೃಷಭಲಿಂಗೇಶ್ವರ
Address: ವಿದ್ಯಾವರ್ಧಕ ಟ್ರಸ್ಟ್, ಲಚ್ಯಾಣ, ಜಿಲ್ಲೆ ವಿಜಾಪುರ

Synopsys

`ಮಹಾದೇವಿಯಕ್ಕನ ಮದುವೆ’ ಪಿ. ಎಸ್‌. ಪಾಟೀಲ ಅವರ ವಿಮರ್ಶ ಲೇಖನಗಳ ಕೃತಿಯಾಗಿದೆ. ಭಕ್ತಿ ಚಳುವಳಿಯ ಒಂದು ಭಾಗವಾಗಿ ಮಹಾದೇವಿಯಕ್ಕನನ್ನು ಸಾಮಾನ್ಯವಾಗಿ ಗುರುತಿಸಲಾಗಿದೆ. ಆದರೆ ಇಲ್ಲಿನ ಲೇಖಕರು ಮಾರ್ಕ್ಸ್‌ ವಾದೀ ಭೌತಿಕ ಅಧ್ಯಯನದ ಹಿನ್ನೆಲೆಯಲ್ಲಿ ಮಹಾದೇವಿಯಕ್ಕನ ಮದುವೆಯ ವಾಸ್ತವ ಸಂಗತಿ ಏನಿರಬಹುದೆಂದು ವಿಶ್ಲೇಷಿಸಲು ಪ್ರಯತ್ನಿಸಿದ್ದಾರೆ. ರಾಜತ್ವ, ಮದುವೆಯಂತಹ ವ್ಯವಸ್ಥೆಯನ್ನು ತಿರಸ್ಕರಿಸಿದ ಅಕ್ಕಮಹಾದೇವಿಯ ವಚನಗಳ ಹಿನ್ನೆಲೆಯಲ್ಲಿ ಪಾಟೀಲ್ ಅವರ ಚಿಂತನೆ ಕಂಡುಬರುತ್ತದೆ.

About the Author

ಎಸ್.ಪಿ. ಪಾಟೀಲ
(31 May 1939)

ಎಸ್.ಪಿ.ಪಾಟೀಲರು ಹುಟ್ಟಿದ್ದು ಮಹಾರಾಷ್ಟ್ರದ ಅಂಕಲಿ ಜಿಲ್ಲೆಯ ಸಾಂಗಲಿಯಲ್ಲಿ. ತಂದೆ-ಪೀರಗೌಡ ಧರ್ಮಗೌಡ ಪಾಟೀಲ, ತಾಯಿ- ಪದ್ಮಾವತಿ. ಪ್ರಾಥಮಿಕ ವಿದ್ಯಾಭ್ಯಾಸ ಶೇಡಬಾಳ, ಕಾಲೇಜು ಕಲಿತದ್ದು ಸಾಂಗಲಿಯ ವಿಲ್ಲಿಂಗ್‌ಡನ್ ಕಾಲೇಜಿನಲ್ಲಿ ಬಿ.ಎ. ಮತ್ತು ಶ್ರೀ ರಂ.ಶ್ರೀ ಮುಗಳಿ ಅವರ ಮಾರ್ಗದರ್ಶನದಲ್ಲಿ ಎಂ.ಎ. ಪದವಿ ಪೂರ್ಣಗೊಳಿಸಿದರು. ಆನಂತರ ‘ಚಾವುಂಡರಾಯ ಒಂದು ಅಧ್ಯಯನ’ ಮಹಾಪ್ರಬಂಧ ಮಂಡಿಸಿ, ಕರ್ನಾಟಕ ವಿಶ್ವವಿದ್ಯಾಲಯದಿಂದ ಪಿಎಚ್.ಡಿ. ಪದವಿ ಪಡೆದರು. ನಂತರ ಉದ್ಯೋಗ ಪ್ರಾರಂಭಿಸಿದ್ದು ಶೇಡಬಾಳ ಸನ್ಮತಿ ವಿದ್ಯಾಲಯದಲ್ಲಿ ಅಧ್ಯಾಪಕರಾಗಿ. ಕಾಮರ್ಸ್ ಕಾಲೇಜಿನ ಅಧ್ಯಾಪಕರಾಗಿ, ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಪೀಠದಲ್ಲಿ  ಸಹಾಯಕ ಸಂಶೋಧಕರಾಗಿ, ಆಧ್ಯಾಪಕರಾಗಿ, ರೀಡರ್ ಆಗಿ, ಪ್ರಾಧ್ಯಾಪಕರಾಗಿ, ಜೈನ ...

READ MORE

Reviews

ಹೊಸತು- ಸೆಪ್ಟೆಂಬರ್‌-2005

ವಚನ ಚಳುವಳಿ ಮತ್ತು ಸಾಹಿತ್ಯ ತನ್ನ ಕ್ರಾಂತಿಕಾರಕ ಗುಣಗಳಿಂದ ಹಲವಾರು ಸಂಶೋಧನಾತ್ಮಕ ಕೃತಿಗಳಿಗೆ ಮತ್ತು ಸೃಜನಶೀಲ ಸಾಹಿತ್ಯ ಸೃಷ್ಟಿಗೆ ಪ್ರೇರಣೆಯನ್ನುಂಟು ಮಹಾದೇವಿಯಲ್ಲಿದೆ. ಮದುವೆ ಮಾಡಿದೆ. ಭಕ್ತಿ ಚಳುವಳಿಯ ಒಂದು ಭಾಗವಾಗಿ ಮಹಾದೇವಿಯಕ್ಕನನ್ನು ಸಾಮಾನ್ಯವಾಗಿ ಗುರುತಿಸಲಾಗಿದೆ. ಆದರೆ ಇಲ್ಲಿನ ಲೇಖಕರು ಮಾರ್ಕ್ಸ್‌ ವಾದೀ ಭೌತಿಕ ಅಧ್ಯಯನದ ಹಿನ್ನೆಲೆಯಲ್ಲಿ ಮಹಾದೇವಿಯಕ್ಕನ ಮದುವೆಯ ವಾಸ್ತವ ಸಂಗತಿ ಏನಿರಬಹುದೆಂದು ವಿಶ್ಲೇಷಿಸಲು ಪ್ರಯತ್ನಿಸಿದ್ದಾರೆ. ರಾಜತ್ವ, ಮದುವೆಯಂತಹ ವ್ಯವಸ್ಥೆಯನ್ನು ತಿರಸ್ಕರಿಸಿದ ಅಕ್ಕಮಹಾದೇವಿಯ ವಚನಗಳ ಹಿನ್ನೆಲೆಯಲ್ಲಿ ಪಾಟೀಲ್ ಅವರ ಚಿಂತನೆ ಕಂಡುಬರುತ್ತದೆ. ಪಾಳೇಗಾರಿಕೆಯ ಪ್ರತೀಕವಾಗಿದ್ದ ಕೌಶಿಕನನ್ನು ಅಕ್ಕಮಹಾದೇವಿ ತಿರಸ್ಕರಿಸಿ ಪರ್ಯಾಯ ವಿವಾಹ ಪದ್ಧತಿಯನ್ನು ವರ್ಗಪೂರ್ವ ಸಮಾಜದ ಗಣ ಸಮಾಜ ಪದ್ಧತಿಯನ್ನು ಅನುಸರಿಸಿದಳು ಎಂಬ ತೀರ್ಮಾನಕ್ಕೆ ಲೇಖಕರು ಬಂದಿದ್ದಾರೆ. ಈ ಬಗ್ಗೆ ಇನ್ನೂ ಹೆಚ್ಚಿನ ಚರ್ಚೆ ಅವಶ್ಯಕ.

Related Books