ಅರಿವು-ಇರವುಗಳ ಸನ್ನೆಗೈ ಪು.ತಿ.ನ ಮಲೆದೇಗುಲ

Author : ಜ.ನಾ. ತೇಜಶ್ರೀ

Pages 142

₹ 150.00




Year of Publication: 2023
Published by: ಡಾ.ಪು.ತಿ.ನ. ಟ್ರಸ್ಟ್ (ರಿ)
Address: ನಂ. 30, ಸಂಕಲ್ಪ, ಪುಷ್ಪಗಿರಿನಗರ, ಬನಶಂಕರಿ ಮೂರನೇ ಹಂತ, ಬೆಂಗಳೂರು- 560085

Synopsys

ಅರಿವು-ಇರವುಗಳ ಸನ್ನೆಗೈ ‘ಪು.ತಿ.ನ ಮಲೆದೇಗುಲ’ ಜ.ನಾ. ತೇಜಶ್ರೀ ಅವರು ಬರೆದಿರುವ ವಿಮರ್ಶಾ ಕೃತಿ. ಪು.ತಿ.ನ ಅವರ ಮಲೆದೇಗುಲ ಕೃತಿಯ ಕುರಿತು ಬಂದಿರುವ ಈ ಕೃತಿಗೆ ಎಚ್.ಎಸ್.ವಿ ಅವರ ಬೆನ್ನುಡಿ ಬರಹವಿದೆ. ಕೃತಿಯ ಕುರಿತು ತಿಳಿಸುತ್ತಾ ತೇಜಶ್ರೀ ಅವರ ಚಿಂತನೆಗಳಲ್ಲಿ ಕಾಣುವ ಹೊಸ ಹೊಳಹುಗಳಿಂದ ಆಕರ್ಷಿತನಾದ ನಾನು ಮಲೆದೇಗುಲದ ಬಗ್ಗೆ ಒಂದು ಆಲೋಕ ಕೃತಿಯನ್ನು ಟ್ರಸ್ಟ್ ಗಾಗಿ ಬರೆದು ಕೊಡಬೇಕೆಂದು ಒತ್ತಾಯಿಸಿದ್ದರ ಪರಿಣಾಮ, ಮಲೆದೇಗುಲ ಕುರಿತ ಅವರ ಪ್ರೀತಿ ಮತ್ತು ಪ್ರಾಮಾಣಿಕತೆಯ ಒಂದು ಚೂರೂ ತೋರುಗಾಣಿಕೆಯಿಲ್ಲದ ಈ ಆಕರ್ಷಕ ಕೃತಿ ಎಂದಿದ್ದಾರೆ. ಜೊತೆಗೆ ಪ್ರೀತಿಗೆ ಮಣಿದು ಈ ಪುಸ್ತಕ ಬರೆದು ಕೊಟ್ಟ ತೇಜಶ್ರೀಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

About the Author

ಜ.ನಾ. ತೇಜಶ್ರೀ

ಎಂ.ಎ. (ಇಂಗ್ಲಿಷ್) ಮತ್ತು ಭಾಷಾಂತರ ಡಿಪ್ಲೊಮಾ ಪದವೀಧರೆ ಆಗಿರುವ ತೇಜಶ್ರೀ ಅವರು ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಒಂದು ವರ್ಷ ಇಂದಿರಾಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯದ 'ಟ್ಯಾಗೋರ್ ಪೀಠ'ದಲ್ಲಿ ಸಂಶೋಧನಾ ಸಹಾಯಕಿಯಾಗಿ ಕಾರ್ಯ ನಿರ್ವಹಿಸಿ‌ದ್ದಾರೆ. ಲಯ, ತಿಳಿಗೊಳ, ಕತ್ತಲೆಯ ಬೆಳಗು, ಅವನರಿವಲ್ಲಿ, ಉಸುಬುಂಡೆ, ಮಾಗಿಕಾಲದ ಸಾಲುಗಳು (ಕವನ ಸಂಕಲನಗಳು) ಭಾರತ ರಾಷ್ಟ್ರೀಯ ಚಳುವಳಿ, ಚೀನಿ ತತ್ವಶಾಸ್ತ್ರದ ಕತೆ, ಕಡಲ ತಡಿಯ ಗುಡಾರ, ಬೆತ್ತಲೆ ಫಕೀರ, ಇರುವೆ ಮತ್ತು ಪಾರಿವಾಳ (ಅನುವಾದಿತ ಕೃತಿಗಳು) ’ನೀನಾಸಂ'ಗಾಗಿ ವೋಲೆ ಸೋಯಿಂಕಾನ ಸಾವು ಮತ್ತು ರಾಜನ ಕುದುರೆ ಸವಾರ' ನಾಟಕದ ಅನುವಾದ. ಕವಿ ರವೀಂದ್ರ, ...

READ MORE

Related Books