ಕ್ರಾಂತದರ್ಶನ

Author : ಕುಸುಮಾಕರ ದೇವರಗಣ್ಣೂರ (ವಸಂತ ಅನಂತ ದಿವಾಣಜಿ)

Pages 160

₹ 160.00




Year of Publication: 2022
Published by: ಸಾಹಿತ್ಯ ಭಂಡಾರ
Address: ಬಳೇಪೇಟೆ, ಬೆಂಗಳೂರು-53

Synopsys

ಕುಸುಮಾಕರ ದೇವರಗಣ್ಣೂರ ಅವರ ಕೃತಿ ಕ್ರಾಂತದರ್ಶನ. ಬೇಂದ್ರೆಯವರ ಕಾವ್ಯ ಸ್ವರೂಪದ ವಿರಾಟ್ ದರ್ಶನ ಈ ಕೃತಿಯಲ್ಲಿ ಸಾಧ್ಯವಗುತ್ತದೆ. ಕುಸುಮಾಕರರು ಬೇಂದ್ರೆಯವರ ಅಂತೇವಸಿಗಳಾಗಿ, ಮಗನೇ ಆಗಿ ಅವರ ಸಾಮಿಪ್ಯದಲ್ಲಿ ಬೆಳೆದವರು. ಈ ಕೃತಿಗೊಂದು ಉಪನಿಷತ್ತಿನ ಸ್ವರೂಪವಿದೆ. ಬಹುಷಃ ಅದಕ್ಕೆ ಇದನ್ನು ’ಕ್ರಾಂತದರ್ಶನ’ ಎಂದು ಕರೆದಿರಬಹುದು. ಬೇಂದ್ರೆ ಮತ್ತು ಕುಸುಮಾಕರರ ನಡುವಿನ ಒಡನಾಟದ ಹಬೆ ಹಬೆಯಾಡುತ್ತವೆ ಇಲ್ಲಿನ ಲೇಖನಗಳು.

ಕೃತಿಯ ಬೆನ್ನುಡಿಯಲ್ಲಿ ಬರೆದಿರುವಂತೆ, ಹಲವು ವರ್ಷಗಳ ಕಾಲ ಬೇಂದ್ರೆಯವರ ಜೀವನ ಮತ್ತು ಬರವಣಿಗೆಯನ್ನು ಬಹಳ ಹತ್ತಿರದಿಂದ, ಬಹಳ ಪ್ರೀತಿಯಿಂದ ನೋಡಿದ ವಸಂತ ದಿವಾಣಜಿ ಅವರು ಈ ವಿಶಿಷ್ಟವಾದ ಕೃತಿಯನ್ನು ಕೊಟ್ಟಿದ್ದಾರೆ. ಇಲ್ಲಿ ಕವಿ ಮತ್ತು ರಸಿಕರ ನಡುವಿನ ಅರ್ಥಪೂರ್ಣ ಸಂವಾದವಿದೆ. ಬೇರೆಲ್ಲಿಯೂ ಸಿಗಲಾರದ ನೆನಪುಗಳ ಸಂಕಲನವು ಕವಿಹೃದಯದ ಆಗುಹೋಗುಗಳಿಗೆ ಕನ್ನಡಿ ಹಿಡಿದಿದೆ. ಎಚ್ಚರದ ಪ್ರತಿ ಕ್ಷಣದಲ್ಲಿಯೂ ಕವಿಯಂತೆಯೇ ಲೋಕವನ್ನು ಕಂಡ, ಹಾಗೆಯೇ ಕಂಡರಿಸಿದ ಬೇಂದ್ರೆ ಅವರನ್ನು ದಿವಾಣಜಿಯವರ ಸೂಕ್ಷ್ಮ ಮತಿಯು ಗೌರವ ಮತ್ತು ವಿಮರ್ಶಾತ್ಮಕ ದೂರಗಳಿಂದ ನೋಡಿದೆ.ಬೇಂದ್ರೆಯವರೇ ಹೇಳಿದ ಹತ್ತು ಹಲವು ವಿಚಾರಗಳು ಮತ್ತು ಅವರ ಜೀವನದಿಂದ ಆಯ್ದು ತೆಗೆದ ಘಟನೆಗಳು ಮಸ್ತಕದ ಮೌಲ್ಯವನ್ನು ಹೆಚ್ಚಿಸಿವೆ.ಬೇಂದ್ರೆಯವರ ಕವಿತೆಯನ್ನು ಗ್ರಹಿಸಬೇಕಾದ ಹಲವು ಬಗೆಗಳನ್ನು, ಕವಿಯ ಮೂಲಕ ಮತ್ತು ಸ್ವಂತ ಪ್ರತಿಭೆಯ ಮೂಲಕ ಕಂಡುಕೊಂಡ ಲೇಖಕರು ಒಟ್ಟಂದದ ವಿಶ್ಲೇಷಣೆ ಮತ್ತು ಹಲವು ಕವಿತೆಗಳ ಓದಿನ ಮೂಲಕ ತೋರಿಸಿಕೊಟ್ಟಿದ್ದಾರೆ. ಬೇಂದ್ರೆಯವರ ಮಿತಿಗಳನ್ನು ಗುರುತಿಸಿಯೂ ಅವರ ಕಾವ್ಯದ ಅಖಂಡ ಶಕ್ತಿಯನ್ನು ತೆರೆದು ತೋರಿಸುವುದು ಮೆಚ್ಚುವುದು ಇದರ ಹಿರಿದು.ಬೇಂದ್ರೆಯವರ ಬಗ್ಗೆ ಈವರೆಗೆ ಬಂದಿರುವ ವಿಮರ್ಶೆಯ ವಿಮರ್ಶೆ ಈ ಪುಸ್ತಕದ ಇನ್ನೊಂದು ನೆಲೆ. ನೇರವಾಗಿ ಹೆಸರಿಸದಿದ್ದರೂ ಕನ್ನಡದ ಪ್ರಮುಖ ಬೇಂದ್ರೆ ವಿಮರ್ಶಕರ ವಿಧಾನ, ಶಕ್ತಿ ಮತ್ತು ಪರಿಮಿತಿಗಳ ಸೂಕ್ಷ್ಮವಾದ ಪರಿಶೀಲನೆ ಇಲ್ಲಿದೆ. ಗತ-ಪ್ರಸ್ತುತಗಳ ಸೀಮಿತಗಳನ್ನು ಮೀರಿದ ತಾತ್ವಿಕಸಂಗತಿಗಳ ನೋಟವು ಕವಿಗೆ ಸಾಧ್ಯ. ಆದ್ದರಿಂದಲೇ ಅವನನ್ನು ಕ್ರಾಂತದರ್ಶಿಯೆಂದು ಕರೆಯುತ್ತಾರೆ. ಬೇಂದ್ರೆಯವರು ನೀಡಿರುವ, ಅಂಥ ದರ್ಶನದ ಹೊಳಹುಗಳನ್ನು ಈ ಪುಸ್ತಕವು ಅರಸುತ್ತದೆ.ಆರಾಧನೆ ಅಥವಾ ನಿರಾಕರಣೆಗಳೆಂಬ ಅತಿರೇಕಗಳನ್ನು ಬದಿಗಿಟ್ಟು ಕಲೆಯನ್ನು ಅನುಸಂಧಾನ ಮಾಡುವ 'ಕ್ರಾಂತದರ್ಶನ ಇಂಥ ಪ್ರಯತ್ನಗಳಿಗೆ ಮಾದರಿ ಎಂಬುದಾಗಿದೆ.

About the Author

ಕುಸುಮಾಕರ ದೇವರಗಣ್ಣೂರ (ವಸಂತ ಅನಂತ ದಿವಾಣಜಿ)
(15 February 1930 - 17 April 2012)

ಕನ್ನಡದ ವಿಶಿಷ್ಟ ಕಾದಂಬರಿಕಾರ ಕುಸುಮಾಕರ ದೇವರಗೆಣ್ಣೂರ ಅವರ ಮೂಲ ಹೆಸರು ವಸಂತ ಅನಂತ ದಿವಾಣಜಿ. ಸಾಹಿತ್ಯ ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ವಸಂತ ಅನಂತ ದಿವಾಣಜಿ ವಿಜಯಪುರ ಜಿಲ್ಲೆಯ ವಿಜಯಪುರ ತಾಲ್ಲೂಕಿನ ದೇವರಗೆಣ್ಣೂರ ಗ್ರಾಮದಲ್ಲಿ ಜನಿಸಿದರು. ಕನ್ನಡದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದ ಬಳಿಕ, ಪುಣೆ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ ಪಡೆದರು. 1956ರಲ್ಲಿ ಸೊಲ್ಲಾಪುರದ ದಯಾನಂದ ಮಹಾವಿದ್ಯಾಲಯದಲ್ಲಿ ಕನ್ನಡ ಪ್ರಾಧ್ಯಾಪಕರಾಗಿ 35 ವರ್ಷಗಳವರೆಗೆ ಸೇವೆ ಸಲ್ಲಿಸಿ ನಿವೃತ್ತರಾದರು. ಕನ್ನಡದ ಕವಿ ದಾ.ರಾ.ಬೇಂದ್ರೆ ಅವರ ನಿಕಟ ಸಂಪರ್ಕ ವಸಂತ ದಿವಾಣಜಿ ಅವರಿಗೆ ಸುಮಾರು 12 ವರ್ಷಗಳ ಕಾಲ ಸೊಲ್ಲಾಪುರದಲ್ಲಿ ಸಿಕ್ಕಿತ್ತು. ಸೊಲ್ಲಾಪುರಕ್ಕೆ ...

READ MORE

Related Books