ನಮ್ಮ ಕುವೆಂಪು

Author : ಜಿ. ಕೃಷ್ಣಪ್ಪ

Pages 128

₹ 50.00




Year of Publication: 2024
Published by: ಕನ್ನಡ ಜನಶಕ್ತಿ ಕೇಂದ್ರ, ಬೆಂಗಳೂರು
Address: #4172, ‘ನೇಗಿಲಯೋಗಿ’ 2ನೇ ‘ಬಿ’ ಮುಖ್ಯ ರಸ್ತೆ, 1ನೇ ಹಂತ`, ಗಿರಿನಗರ, ಬೆಂಗಳೂರು-560058.\n

Synopsys

‘ನಮ್ಮ ಕುವೆಂಪು’ ರಾಷ್ಟ್ರಕವಿ ಕುವೆಂಪು ಅವರ ಸಾಹಿತ್ಯದ ಕುರಿತು  ನಾಡೋಜ ಡಾ. ಜಿ. ಕೃಷ್ಣಪ್ಪ ಅವರು ರಚಿಸಿರುವ ಕೃತಿಯಾಗಿದೆ. ಇದಕ್ಕೆ ಬೈರಮಂಗಲ ರಾಮೇಗೌಡ ಅವರ ಬೆನ್ನುಡಿ ಬರಹವಿದೆ. ಕೃತಿಯ ಕುರಿತು ಬರೆಯುತ್ತಾ ಜಿ. ಕೃಷ್ಣಪ್ಪನವರು 'ನೆನಪಿನ ದೋಣಿಯಲ್ಲಿ' ಮತ್ತು ಸಮಗ್ರ ಸಾಹಿತ್ಯ ರಾಶಿಯನ್ನು ಶೋಧಿಸಿ, ಅವುಗಳಲ್ಲಿ ಮಕ್ಕಳ ಮನಸ್ಸಿಗೆ ಹಿಡಿಸುವಂತೆ ಯಾವ್ಯಾವುದನ್ನು ಎಷ್ಟೆಷ್ಟು ಪ್ರಮಾಣದಲ್ಲಿ ಕೊಡಬೇಕೆನ್ನುವುದನ್ನು ಸಮತೂಕದಲ್ಲಿರುವಂತೆ ನಿರ್ಣಯಿಸಿ ಕೃತಿಯೊಂದರ ಚೌಕಟ್ಟಿನಲ್ಲಿ ಕಟ್ಟಿಕೊಟ್ಟಿದ್ದಾರೆ.

ಕುವೆಂಪು ಅವರನ್ನು, ಅವರ ಸಾಹಿತ್ಯದ ಮಹತ್ವವನ್ನು ಕವಿತೆ, ಕಥೆ, ಪ್ರಬಂಧ, ನಾಟಕಗಳ ಓದಿನ ಮೂಲಕ ಮೇಲ್ಪದರದಲ್ಲಿ ಗ್ರಹಿಸಿರುವ ಮಕ್ಕಳು ಕೃಷ್ಣಪ್ಪನವರ ಈ ಕೃತಿಯನ್ನು ಮನಸ್ಸಿಟ್ಟು ಓದಿದರೆ ತಂದೆ ತಾಯಿ ಶಿಕ್ಷಕರು ಓದುವಂತೆ ಮಾಡಿದರೆ ಕುವೆಂಪು ಎಲ್ಲೋ ದೂರದಲ್ಲಿರುವ ಹತ್ತಿಪ್ಪತ್ತರ ಗುಂಪಿನಲ್ಲಿ ಒಬ್ಬರಾಗಿರುವ ಸಾಹಿತಿ ಎನ್ನುವ ಸಾಮಾನ್ಯ ಕಲ್ಪನೆ ಅಳಿದು ಅವರು ನಮ್ಮವರೇ ಎನ್ನುವ ಪ್ರೀತಿಯೂ ಗೌರವವೂ ಆಪ್ತತೆಯೂ ಬೆಳೆಯುತ್ತದೆ.

ಕುವೆಂಪು ಸಾಹಿತ್ಯರಾಶಿಗೆ ಪ್ರೀತಿಯಿಂದ ಕುತೂಹಲದಿಂದ ಪ್ರವೇಶಿಸುವ ಪ್ರೇರಣೆ ದೊರೆಯುತ್ತದೆ. ಪುಟ್ಟ ಮನಸ್ಸುಗಳಿಗೆ ಅವರಿಗೆ ಅರಿವಿಲ್ಲದಂತೆಯೇ ವಿಶ್ವಮಾನವ ಸಂದೇಶ ರವಾನೆಯಾಗುತ್ತದೆ. ಅವರ ನಡೆನುಡಿಗಳಲ್ಲಿ ಮಾರ್ಪಾಟಾಗುತ್ತದೆ ಎಂಬುವುದನ್ನು ಈ ಪುಸ್ತಕದಲ್ಲಿ ನೋಡಬಹುದು ಎಂದಿದ್ದಾರೆ ಬೈರಮಂಗಲ ರಾಮೇಗೌಡರು. 

About the Author

ಜಿ. ಕೃಷ್ಣಪ್ಪ

’ಬೇಂದ್ರೆ ಕೃಷ್ಣಪ್ಪ’ ಎಂದೇ ಜನಪ್ರಿಯರಾಗಿರುವ ಡಾ. ಜಿ.ಕೃಷ್ಣಪ್ಪ ಅವರು ಪ್ರಮುಖ ಬೇಂದ್ರ ಸಾಹಿತ್ಯ ಪರಿಚಾರಕರು. ಕೃಷ್ಣಪ್ಪ ಅವರು 1948ರಲ್ಲಿ ಬೆಂಗಳೂರಲ್ಲಿ  ಜನಿಸಿದರು. ತಂದೆ ಹೆಚ್.ಗಂಗಯ್ಯ, ತಾಯಿ ಸಾವಿತ್ರಮ್ಮ. ಜಿ.ಕೃಷ್ಣಪ್ಪ ಅವರು ಬೇರೆ ಕಾವ್ಯದ ಓದಿಗೆ ಹೊಸ ಆಯಾಮ ಪರಿಚಯಿಸಿದವರು. ಬೆಂಗಳೂರಿನ ಎಸ್.ಟಿ. ಪಾಲಿಟೆಕ್ನಿಕ್‌ನಲ್ಲಿ ಡಿಪ್ಲೋಮಾ, ವಾಹನ ನಿರೀಕ್ಷಕರಾಗಿ ವೃತ್ತಿಯಾರಂಭಿಸಿದ ಇವರು, ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಯಾಗಿ ನಿವೃತ್ತಿ. ಉದ್ಯೋಗದ ನಡುವೆ ಬಿ.ಎ, ಎಲ್‌ಎಲ್‌ಬಿ, ಕನ್ನಡದಲ್ಲಿ ಸ್ನಾತಕೋತ್ತರ ಪದವೀಧರಾಗಿದ್ದಾರೆ. 'ಬೇಂದ್ರೆ ಸಾಹಿತ್ಯದಲ್ಲಿ ಸ್ತ್ರೀ : ಒಂದು ಅಧ್ಯಯನ ಕುರಿತು ಪಿಎಚ್ಡಿ ಪದವಿಯನ್ನು ಮಾಡಿದ್ದಾರೆ.ಸಾಹಿತ್ಯದ ಓದು, ಬೇಂದ್ರೆ ಕಾವ್ಯದ ಗುಂಗೇ ಇವರ  ಬರವಣಿಗೆಗೆ ...

READ MORE

Related Books