
‘ವಿಮರ್ಶಾತ್ಮಕ ಚಿಂತನೆ’ ಡಿ.ಎ. ಪಾಂಡು ಸ್ಮತಿ ಗ್ರಂಥಮಾಲೆ 13 ಕೃತಿಯು ಸುರೇಶ್ ಮೂನ ಅವರ ಬರಹಗಳ ಸಂಕಲನವಾಗಿದೆ. ವಿದ್ಯಾರ್ಥಿಗಳಿಗೂ ಹಿರಿಯರಿಗೂ ಉಪಯುಕ್ತವಾದ ವಿಮರ್ಶಾತ್ಮಕ ಚಿಂತನ ಗ್ರಂಥವನ್ನು ಸರಳವಾಗಿ ಬರೆದಿದ್ದಾರೆ. ಮಂಕುತಿಮ್ಮನ ಕಗ್ಗದ ಪದ್ಯಗಳ ಹಿನ್ನೆಲೆಯಲ್ಲಿ ವಿಚಾರಮಂಡನೆ ಮಾಡಿರುವುದು ಈ ಗ್ರಂಥದ ಹಿರಿಮೆ ಆಗಿದೆ. ವಿಮರ್ಶಾಜ್ಞಾನ ಚಿಂತನೆ ವಿಧಾನಗಳ ಸಮನ್ವಯವನ್ನು ಅನೇಕ ದೃಷ್ಟಾಂತಗಳಿಂದ ಈ ಗ್ರಂಥದಲ್ಲಿ ನಿರೂಪಿಸಿದ್ದಾರೆ. ವ್ಯಕ್ತಿತ್ವ ವಿಕಸನ ಸಾಹಿತ್ಯಕ್ಕೆ ಉತ್ತಮ ಕೊಡುಗೆ ಆಗಿದೆ.

ಅಂಕಣಕಾರರು, ಇತಿಹಾಸ ತಜ್ಞರು ಆಗಿರುವ ಸುರೇಶ್ ಮೂನ ಅವರು ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಮೂಕನಹಳ್ಳಿಯವರು. ಬೆಂಗಳೂರಿನ ಆಚಾರ್ಯ ಪಾಠಶಾಲೆಯಲ್ಲಿ ವಿಜ್ಞಾನ ಉಪನ್ಯಾಸಕರಾಗಿದ್ದರು. ಬೆಂಗಳೂರಿನ ಇತಿಹಾಸ ಕುರಿತು ಸಂಶೋಧನೆ ನಡೆಸಿದ್ದು, ವಿದ್ಯುನ್ಮಾನ ಮಾಧ್ಯಮಗಳಲ್ಲಿ ಈ ಕುರಿತು ಉಪನ್ಯಾಸಗಳನ್ನು ನೀಡಿದ್ದಾರೆ. ಬೆಂಗಳೂರು ನಗರ ನಿರ್ಮಾಪಕರು, ಮಹಾಮಹಿಮ ಹರಕೆ ಹನುಮ, ದಂಡಿನ ದರ್ಶನ, ಮೈಸೂರು ಬ್ಯಾಂಕ್ ಹೆಜ್ಜೆಗುರುತುಗಳು, ಸೇರಿ ಹಲವಾರು ಕೃತಿಗಳನ್ನು ರಚಿಸಿದ್ದಾರೆ. ಇವರಿಗೆ ಕೆಂಪೇಗೌಡ ಪ್ರಶಸ್ತಿ, ಆರ್ಯಭಟ ಪ್ರಶಸ್ತಿಗಳು ಲಭಿಸಿವೆ. ...
READ MORE
