ಆಲ್ಫ್ರೆಡ್ ವೆಗೆನರ್

Author : ಟಿ. ಆರ್. ಅನಂತರಾಮು

Pages 192

₹ 80.00




Year of Publication: 2012
Published by: ಕೀರ್ತನ ಪ್ರಕಾಶನ
Address: ನಂ. 85, ಗಿರಿದರ್ಶಿನಿ, 3ನೇ ಅಡ್ಡರಸ್ತೆ, ಹನುಮಂತನಗರ, ಬೆಂಗಳೂರು – 560 019
Phone: 9591657066

Synopsys

ಜಗತ್ತು ಕಂಡ ಶ್ರೇಷ್ಠ ವಿಜ್ಞಾನಿಯ ಜೀವನ ಚರಿತ್ರೆಯನ್ನು ಒಳಗೊಂಡ ಕೃತಿ ‘ಆಲ್ಫ್ರೆಡ್ ವೆಗೆನರ್’. ಈ ಕೃತಿಯನ್ನು ಭೂವಿಜ್ಞಾನಿ, ಲೇಖಕ ಟಿ.ಆರ್. ಅನಂತರಾಮು ಅವರು ರಚಿಸಿದ್ದಾರೆ. ಹವಾಮಾನ ವಿಜ್ಞಾನದಲ್ಲಿ ಪರಿಣತಿ ಇದ್ದ ಜರ್ಮನಿಯ ಆಲ್ಫ್ರೆಡ್ ವೆಗೆನರ್‍ನನ್ನು ಜಗತ್ತು ಸ್ಮರಿಸಿಕೊಳ್ಳುವುದು ಅವರು ಭೂವಿಜ್ಞಾನಕ್ಕೆ ನೀಡಿದ ಕೊಡುಗೆಗಾಗಿ. 25 ಕೋಟಿ ವರ್ಷಗಳ ಹಿಂದೆ ಭೂಖಂಡಗಳೆಲ್ಲವೂ ಒಟ್ಟುಗೂಡಿದ್ದವು, ಅನಂತರ ಮೆಲ್ಲನೆ ಸರಿದು ಈಗ್ಗೆ ಆರೂವರೆ ಕೋಟಿ ವರ್ಷಗಳ ಹಿಂದೆ ಈಗಿನ ನೆಲೆ ತಲಪಿದವು ಎಂದು ಪ್ರತಿಪಾದಿಸಿದ ವಿಜ್ಞಾನಿ ಆಲ್ಫ್ರೆಡ್ ವೆಗೆನರ್.

ಇದೊಂದು ಕ್ರಾಂತಿಕಾರಿ ಸಿದ್ಧಾಂತ. ಭೌತವಿಜ್ಞಾನಿಗಳು ಇದು ಸಾಧ್ಯವಿಲ್ಲ ಎಂದು ಅಲ್ಲಗಳೆದರು. ಆದರೆ ವೆಗೆನರ್ ಭೂಖಂಡಗಳ ಅಂಚನ್ನು ಗಮನಿಸಿ, ಯಾವ ಖಂಡ ಯಾವುದಕ್ಕೆ ಹೊಂದಾಣಿಕೆಯಾಗುತ್ತದೆಂದು ಪಳೆಯುಳಿಕೆಗಳ ಸಾಕ್ಷಿಯೊಂದಿಗೆ ತನ್ನ ಸಿದ್ಧಾಂತವನ್ನು ಪ್ರತಿಪಾದಿಸಿದ. ಈಗ ಭೂಖಂಡಗಳಷ್ಟೇ ಅಲ್ಲ, ಅದನ್ನು ಹೊತ್ತಿರುವ ಭೂಫಲಕಗಳೂ ಸರಿಯುತ್ತಿವೆ ಎಂಬ ಸಿದ್ಧಾಂತ ಪ್ರಚಲಿತವಿದೆ. ಇದಕ್ಕೆ ಅಡಿಪಾಯ ಹಾಕಿದವನೇ ವೆಗೆನರ್.

ಗ್ರೀನ್‍ಲೆಂಡನ್ನು ಅನೇಕ ಬಾರಿ ಅಡ್ಡಹಾಯ್ದು ಹೊಸ ಹೊಸ ಮಾಹಿತಿಗಳನ್ನು ಸಂಗ್ರಹಿಸಿದ. ಮೊದಲನೇ ಜಾಗತಿಕ ಸಮರದಲ್ಲಿ ಸೇವೆ ಸಲ್ಲಿಸಿದ ನಂತರ `ಖಂಡ ಮತ್ತು ಸಾಗರಗಳ ಉಗಮ’ ಎಂಬ ಕೃತಿಯನ್ನು ಪ್ರಕಟಿಸಿದ. ಅಷ್ಟೇ ಅಲ್ಲ, ಗತಕಾಲದ ವಾಯುಗುಣವನ್ನು ಅಧ್ಯಯನ ಮಾಡಿ ಭೂಚರಿತ್ರೆಗೆ ಹೊಸ ಅಧ್ಯಾಯಗಳನ್ನು ಸೇರಿಸಿದ. ಈ ಕೃತಿ `ಆಲ್ಫ್ರೆಡ್ ವೆಗೆನರ್’, ಅವನ ಬಾಲ್ಯ, ಅಧ್ಯಯನ, ಭೂವಿಜ್ಞಾನಕ್ಕೆ ನೀಡಿದ ಕೊಡುಗೆ ಮುಂತಾದವನ್ನು ಸಮಗ್ರವಾಗಿ ಕಟ್ಟಿಕೊಡುತ್ತದೆ.

About the Author

ಟಿ. ಆರ್. ಅನಂತರಾಮು
(03 August 1949)

ಭೂ ವಿಜ್ಞಾನಿ, ಸಂಶೋಧಕ, ಅಂಕಣಕಾರ, ವಿಜ್ಞಾನ ಲೇಖಕ ಟಿ.ಆರ್. ಅನಂತರಾಮು ಅವರು ಜನಿಸಿದ್ದು 1949 ಆಗಸ್ಟ್ 3ರಂದು ತುಮಕೂರು ಜಿಲ್ಲೆ ಶಿರಾ ತಾಲ್ಲೂಕಿನ ತಾಳಗುಂದದಲ್ಲಿ.ತಾಳಗುಂದ ರಾಮಣ್ಣ ಅನಂತರಾಮು ಅವರ ಪೂರ್ಣ ಹೆಸರು. ಸಿರಾದ ಸರ್ಕಾರಿ ಮಾಧ್ಯಮಿಕ ಶಾಲೆಯಲ್ಲಿ ಮಾಧ್ಯಮಿಕ ಶಿಕ್ಷಣ ಪೂರ್ಣಗೊಳಿಸಿದ ಅವರು ಸಿರಾದ ಮುನಿಸಿಪಲ್ ಹೈಸ್ಕೂಲಿನಲ್ಲಿ ಪ್ರೌಢಶಿಕ್ಷಣ ಪೂರ್ಣಗೊಳಿಸಿದ್ದಾರೆ. ಆನಂತರ ತುಮಕೂರಿನ ಸರ್ಕಾರಿ ಕಾಲೇಜಿನಲ್ಲಿ ಪದವಿ, ಮೈಸೂರು ವಿಶ್ವವಿದ್ಯಾಲಯದಲ್ಲಿ ಎಂ.ಎನ್ಸಿ(ಜಿಯಾಲಜಿ) ಪದವಿ ಪಡೆದಿದ್ದಾರೆ.  ಭೂ ವಿಜ್ಞಾನ ವಿಷಯದಲ್ಲಿ ಪದವಿ ಪಡೆದ ನಂತನ ಬೆಂಗಳೂರಿನ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ, ರಾಜ್ಯದ ನಾನಾ ಕಾಲೇಜುಗಳಲ್ಲಿ ಅಧ್ಯಾಪಕರಾಗಿ ಕೆಲಸ ಮಾಡಿದ್ದಾರೆ.  ...

READ MORE

Related Books