ಶ್ರೀ ಅರವಿಂದರ ದಿವ್ಯ ಜೀವನ

Author : ಕೋ. ಚೆನ್ನಬಸಪ್ಪ

Pages 1376

₹ 500.00




Year of Publication: 2007
Published by: ಶ್ರೀ ಅರವಿಂದ ಪ್ರಕಾಶನ
Address: ಬೆಂಗಳೂರು

Synopsys

‘ಶ್ರೀ ಅರವಿಂದರ ದಿವ್ಯ ಜೀವನ’ ಲೇಖಕ ಚೆನ್ನಬಸಪ್ಪ ಕೋ ಅವರ ಕೃತಿ. ಇದು ಮಹಾನ್ ತತ್ವಜ್ಞಾನಿ, ಭಾರತದ ಸ್ವಾತಂತ್ರ್ಯ ಹೋರಾಟಗಾರ, ಯೋಗಿ ಅರವಿಂದರ ದಿವ್ಯ ಜೀವನದ ಮೇಲೆ ಬೆಳಕು ಚೆಲ್ಲುವ ಕೃತಿ. ಕವಿ, ತತ್ವಜ್ಞಾನಿಯೂ ಆಗಿದ್ದ ಅರವಿಂದರು ಪೂರ್ಣಯೋಗಮಾರ್ಗವನ್ನು ಜಗತ್ತಿಗೆ ತೋರಿದ್ದಾರೆ. ತಮ್ಮ ಹಿಂದಿನ ಮಹಾತ್ಮರೆಲ್ಲರ ವಿಚಾರಧಾರೆಗಳನ್ನು ವಿಮರ್ಶಿಸಿ ಮಹತ್ವಪೂರ್ಣ ಯೋಗಮಾರ್ಗವನ್ನು ಜನತೆಯ ಮುಂದಿಟ್ಟಿವರು, ಈ ಯೋಗಮಾರ್ಗದಲ್ಲಿ ಯಾರು ಬೇಕಾದರೂ ಸಾಧಕರಾಗಬಹುದು ಯೋಗಸಾಧನೆ ಕೇವನ ಆತ್ಮಸಾಕ್ಷಾತ್ಕಾರಕ್ಕಾಗಿಯಲ್ಲ ಅದು ಸಮಷ್ಟಿಯ ಉದ್ಧಾರಕ್ಕೆಂಬುದನ್ನು ಸ್ಪಷ್ಟಪಡಿಸಿದ್ದಾರೆ. ಅವರ ಇಡೀ ಜೀವನದ ದಿವ್ಯತೆಯನ್ನು ಚೆನ್ನಬಸಪ್ಪನವರು ಈ ಕೃತಿಯಲ್ಲಿ ವಿವರಿಸಿದ್ದಾರೆ.

About the Author

ಕೋ. ಚೆನ್ನಬಸಪ್ಪ
(27 February 1922 - 23 February 2019)

ನ್ಯಾಯಾಧೀಶರಾಗಿ, ಸಾಹಿತಿಗಳಾಗಿ, ಚಳುವಳಿಕಾರರಾಗಿ ನಾಡುನುಡಿಗೆ ಸೇವೆ ಸಲ್ಲಿಸಿರುವ ಕೋ. ಚೆನ್ನಬಸಪ್ಪ ಅವರು ಬಳ್ಳಾರಿ ಜಿಲ್ಲೆಯವರು. ತಾಯಿ ಬಸಮ್ಮ- ತಂದೆ ವೀರಣ್ಣ. 1922ರ ಫೆಬ್ರುವರಿ 27ರಂದು ಜನಿಸಿದರು. ಕಾಲೇಜು ಶಿಕ್ಷಣವನ್ನು ಅನಂತಪುರದಲ್ಲಿ ಪಡೆಯುತ್ತಿದ್ದಾಗ ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಭಾಗವಹಿಸಿ ಶಾಲೆಗೆ ತಿಲಾಂಜಲಿಯಿತ್ತರು. ಅನಂತರ ವಿದ್ಯಾಭ್ಯಾಸ ಮುಂದುವರಿಸಿ ಬಿ.ಎ. ಮತ್ತು ಲಾ ಪದವಿಯನ್ನೂ ಹಾಗೂ ಎಂ.ಎ. ಪದವಿಯನ್ನೂ ಗಳಿಸಿದರು. 1946ರಲ್ಲಿ ಬಳ್ಳಾರಿ ಜಿಲ್ಲೆಯ ಡಿಸ್ಟ್ರಿಕ್ಟ್ ಕೋರ್ಟಿನಲ್ಲಿ ವಕೀಲರಾಗಿ ವೃತ್ತಿಜೀವನ ಪ್ರಾರಂಭಿಸಿದ ಇವರು 1965ರಲ್ಲಿ ಡಿಸ್ಟ್ರಿಕ್ಟ್ ಸೆಷನ್ ಜಡ್ಜ್ ಆಗಿ ಅಮೂಲ್ಯ ಸೇವೆಸಲ್ಲಿಸಿದರು. ಇವರು ಹಲವಾರು ಸಂಘ ಸಂಸ್ಥೆಗಳಲ್ಲಿ ಸಮಾಜಮುಖಿ ಸೇವೆ ...

READ MORE

Related Books