ಮಹಾಚೇತನ

Author : ರಾಜಕುಮಾರ ಕುಲಕರ್ಣಿ

Pages 184

₹ 200.00




Year of Publication: 2017
Published by: ತ್ವರಿತ ಮುದ್ರಣ
Address: ಗದಗ

Synopsys

‘ಮಹಾಚೇತನ’ -ಸಾಹಿತಿ ಬಿ.ವ್ಹಿ. ಮಠ ಅವರ ಜೀವನ ಮತ್ತು ಸಾಧನೆ ಕುರಿತಂತೆ ಲೇಖಕ ರಾಜಕುಮಾರ ಕುಲಕರ್ಣಿ ಅವರು ಬರೆದ ಕೃತಿ. ಬೆನ್ನುಡಿ ಬರೆದಿರುವ ವೀರಣ್ಣ ಸಿ.ಚರಂತಿಮಠ ಅವರು, ‘ಶ್ರೀ ಬಿ. ವಿ. ಮಠ ಅವರು ಹಳೆಯ ತಲೆಮಾರಿಗೆ ಸೇರಿದ ಗೌರವಾನ್ವಿತ ಗುರುಗಳು. ವಿಜಾಪುರದ ಸಿದ್ಧೇಶ್ವರ ಹೈಸ್ಕೂಲಿನಲ್ಲಿ ಶಿಕ್ಷಕ ವೃತ್ತಿಯನ್ನು ಪ್ರಾರಂಭಿಸಿ ಹೆಚ್ಚಾಗಿ ಇಂಡಿ ತಾಲೂಕಿನ ಲಚ್ಯಾಣ, ಅಥರ್ಗಾ, ತಾಂಬಾ ಮುಂತಾದ ಸ್ಥಳಗಳಲ್ಲಿಯ ಹೈಸ್ಕೂಲು ಮುಖ್ಯಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆಂದು ತಿಳಿದು ಬಂದಿದೆ. ಗ್ರಾಮೀಣ ಭಾಗದಲ್ಲಿ ಮಾಧ್ಯಮಿಕ ಶಿಕ್ಷಣವನ್ನೊದಗಿಸುವಲ್ಲಿ ಶ್ರಮಪಟ್ಟಿದ್ದಾರೆ. ಮುಖ್ಯಾಧ್ಯಾಪಕರಾಗಿ ಸ್ಥಳೀಯ ಜನರ ಮನವೊಲಿಸಿ ಹೈಸ್ಕೂಲಿಗೆ ಬೇಕಾಗುವ ಸೌಕರ್ಯಗಳನ್ನು ಪಡೆಯುವಲ್ಲಿ ಶ್ರಮಪಟ್ಟಿದ್ದಾರೆ. ಬಡಮಕ್ಕಳಿಗೆ ಅನ್ನದಾಸೋಹದ ವ್ಯವಸ್ಥೆ ಮಾಡಿ ಪ್ರೋತ್ಸಾಹಿಸಿದ್ದಾರೆ. ವಿನಯಶೀಲರೂ ವಿದ್ಯಾವಂತರೂ ಆದ ಶ್ರೀ ಬಿ. ವಿ. ಮಠರು ಬಡವರ ಬಗೆಗೆ ವಿಶೇಷ ಕಾಳಜಿವಹಿಸುತ್ತಿದ್ದರೆಂದು ತಿಳಿದಿದೆ. ನಿಷ್ಠೆಯಿಂದ ದುಡಿಯುತ್ತ ಗ್ರಾಮೀಣ ಪ್ರದೇಶದಲ್ಲಿ ಶಿಕ್ಷಣ ಕಾಂತಿ ಮಾಡುವಲ್ಲಿ ಶ್ರಮಿಸಿದ್ದಾರೆ. ಅವರ ಕೈಯಲ್ಲಿ ಕಲಿತ. ಅವರು ಸ್ಥಾಪಿಸಿದ ಶಾಲೆಗಳಲ್ಲಿ ಅಧ್ಯಯನ ಮಾಡುತ್ತ ಸುಖ ಜೀವನ ಸಾಗಿಸುತ್ತಿರುವ ಸಾವಿರಾರು ವಿದ್ಯಾರ್ಥಿಗಳು ಅವರನ್ನು ಮನದುಂಬಿ ಸ್ಮರಿಸುತ್ತಿದ್ದಾರೆ. ಅವರ ಶ್ರದ್ದಾಪೂರ್ಣ ಶ್ರಮವನ್ನು ಸ್ಮರಿಸುವ ಅಭಿನಂದನಾ ಗ್ರಂಥವನ್ನು ಪ್ರಕಟಿಸುವ ಯೋಜನೆ ಯೋಗ್ಯವಾಗಿದೆ’ ಎಂದು ಪ್ರಶಂಸಿಸಿದ್ದಾರೆ. 

About the Author

ರಾಜಕುಮಾರ ಕುಲಕರ್ಣಿ

ಲೇಖಕ ರಾಜಕುಮಾರ ಕುಲಕರ್ಣಿ ಅವರು ವೃತ್ತಿಯಿಂದ ಗ್ರಂಥಪಾಲಕರು. ಇವರ ಹಲವಾರು ಕಥೆಗಳು ಕರ್ಮವೀರ, ಮಾನಸ, ಸಿಹಿಗಾಳಿ, ಪತ್ರಿಕೆಗಳಲ್ಲಿ  ಪ್ರಕಟಗೊಂಡಿದ್ದು, ಹಲವಾರು ಸಂಘ-ಸಂಸ್ಥೆಗಳಿಂದ ಪ್ರಶಸ್ತಿ-ಪುರಸ್ಕಾರಗಳು ಲಭಿಸಿವೆ.  ಕೃತಿಗಳು: ಬೇರಿಗಂಟಿದ ಮರ (ಕಥಾ ಸಂಕಲನ)   ...

READ MORE

Related Books