ಟಿಪ್ಪು ಸುಲ್ತಾನ್ (ಅಪ್ರತಿಮ ಶೂರ)

Author : ಗೋಪಾಲಕೃಷ್ಣ ಮಧ್ಯಸ್ಥ (ಜಿ.ಕೆ.ಮಧ್ಯಸ್ಥ)

Pages 96

₹ 60.00




Year of Publication: 2016
Published by: ವಸಂತ ಪ್ರಕಾಶನ
Address: ನಂ 360, 10ನೇ ಬಿ- ಮುಖ್ಯರಸ್ತೆ, 3ನೇ ಅಡ್ಡರಸ್ತೆ, ಜಯನಗರ, ಬೆಂಗಳೂರು-11

Synopsys

‘ಟಿಪ್ಪು ಸುಲ್ತಾನ್ ’ ಪತ್ರಕರ್ತ, ಲೇಖಕ ಜಿ.ಕೆ. ಮಧ್ಯಸ್ಥ ಅವರು ರಚಿಸಿರುವ ಅಪ್ರತಿಮ ಹೋರಾಟಗಾರ ಟಿಪ್ಪು ಸುಲ್ತಾನ್ ಅವರ ಜೀವನಚರಿತ್ರೆ. ವಿದ್ಯಾರ್ಥಿಗಳ ಜೀವನದ ಗುರಿಗಳು ಮೊಳಕೆಯೊಡೆಯುವ ಕಾಲಘಟ್ಟದಲ್ಲಿ ಸಕಾರಾತ್ಮಕ ಚಿಂತನೆಗಳನ್ನು ತುಂಬಬೇಕೆನ್ನುವ ಅಭಿಲಾಷೆಯಿಂದ ವಸಂತ ಪ್ರಕಾಶನ ಪ್ರಕಟಿಸಿದ ಮಹಾನ್ ವ್ಯಕ್ತಿಗಳ ಸಂಕಲ್ಪ-ಸಾಧನೆ ಮಾಲೆಯಲ್ಲಿ ಪ್ರಕಟವಾದ ಕೃತಿ ಟಿಪ್ಪು ಸುಲ್ತಾನ್. ಬ್ರಿಟೀಷರ ವಿರುದ್ಧ ಹೋರಾಡಿದ ಅಪ್ರತಿಮ ವೀರ ಟಿಪ್ಪು ಸುಲ್ತಾನ್ ಅವರ ಜೀವನಚರಿತ್ರೆಯನ್ನು ಅತ್ಯಂತ ಸರಳ ಭಾಷೆಯಲ್ಲಿ ಲೇಖಕರು ಬರೆದಿದ್ದಾರೆ.

About the Author

ಗೋಪಾಲಕೃಷ್ಣ ಮಧ್ಯಸ್ಥ (ಜಿ.ಕೆ.ಮಧ್ಯಸ್ಥ)
(16 August 1945)

ಸಾಹಿತ್ಯ ಮತ್ತು ಪತ್ರಿಕೋದ್ಯಮ ಎರಡರಲ್ಲೂ ಸಮಾನ ಆಸಕ್ತಿ ಇರುವ ಗೋಪಾಲ ಕೃಷ್ಣ ಮಧ್ಯಸ್ಥ (ಜಿ.ಕೆ. ಮಧ್ಯಸ್ಥ) ಅವರು ಪ್ರಜಾವಾಣಿ, ವಿಜಯ ಕರ್ನಾಟಕ ಸೇರಿದಂತೆ ಕನ್ನಡದ ವಿವಿಧ ಪತ್ರಿಕೆಗಳಲ್ಲಿ ಕೆಲಸ ಮಾಡಿದ್ದಾರೆ. ಪತ್ರಿಕೆಗಳ ಭಾಷೆಯ ಬಳಕೆ ಮತ್ತು ಬದಲಾವಣೆಯನ್ನು ವಿಶ್ಲೇಷಣೆ ಮಾಡುತ್ತಾರೆ. ನಿವೃತ್ತಿಯ ನಂತರ ಉಡುಪಿಯಲ್ಲಿ ನೆಲೆಸಿರುವ ಅವರು ‘ದುಡ್ಡು ಕಾಸು', 'ಪದೋನ್ನತಿ' ಎಂಬ ಎರಡು ಅಂಕಣ ಬರಹಗಳನ್ನು ಪುಸ್ತಕಗಳಾಗಿ ಪ್ರಕಟಿಸಿದ್ದಾರೆ. ಗೋಪಾಲಕೃಷ್ಣ ಮಧ್ಯಸ್ಥ ಜನಿಸಿದ್ದು ಕಾಸರಗೋಡು ಸಮೀಪದ ಕುಂಜ್ಯಾರುವಿನಲ್ಲಿ. ...

READ MORE

Related Books