ಡಾ. ತಾಳ್ತಜೆ ವಸಂತಕುಮಾರ

Author : ಬಿ.ಪಿ. ಸಂಪತ್ ಕುಮಾರ್

Pages 56

₹ 60.00




Year of Publication: 2020
Published by: ಕನ್ನಡ ಸಂಘ, ಕಾಂತಾವರ
Address: ಕೆ.ಬಿ. ಜಿನರಾಜ ಹೆಗ್ಡೆ ಸ್ಮಾರಕ ಕನ್ನಡ ಭವನ, ಕಾಂತಾವರ, ಅಂಚೆ-ಕಾಂತಾವರ-574129, ಕಾರ್ಕಳ ತಾಲ್ಲೂಕು, ಉಡುಪಿ ಜಿಲ್ಲೆ
Phone: 8548933733

Synopsys

ಕಾಂತಾವರ ಕನ್ನಡ ಸಂಘದ 'ನಾಡಿಗೆ ನಮಸ್ಕಾರ’ ಸಾಹಿತ್ಯ ಸಂಸ್ಕೃತಿ ಚಿಂತನ ಗ್ರಂಥಮಾಲೆಯ 289ನೇ ಪುಸ್ತಕ ‘ಡಾ. ತಾಳ್ತಜೆ ವಸಂತಕುಮಾರ’. ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರಾಗಿದ್ದ ಖ್ಯಾತ ಕನ್ನಡ ಪ್ರಾಧ್ಯಾಪಕ, ಲೇಖಕ, ಸಂಶೋಧಕ ಡಾ. ತಾಳ್ತಜೆ ವಸಂತಕುಮಾರ ಅವರ ಜೀವನ ಚಿತ್ರಣ ಈ ಕೃತಿ. 'ಬೌದ್ಧಾಯನ', 'ಕರ್ನಾಟಕದಲ್ಲಿ ಬೌದ್ಧಸಂಸ್ಕತಿ', 'ಮುತ್ತಿನ ಸತ್ತಿಗೆ', 'ಸಾರಸ', 'ವಿ.ಕೃ. ಗೋಕಾಕ', 'ಶಿವರಾಮ ಕಾರಂತ', 'ರಂ.ಶ್ರೀ. ಮುಗಳಿ', 'ಮರೀಚಿಕೆ’ - (ಕಾದಂಬರಿ) ಮುಂತಾದ ಮೌಲಿಕ ಕೃತಿಗಳನ್ನು ತಾಳ್ತಜೆಯವರು ಕನ್ನಡ ಸಾಹಿತ್ಯಕ್ಕೆ ಕೊಟ್ಟಿದ್ದಾರೆ.

About the Author

ಬಿ.ಪಿ. ಸಂಪತ್ ಕುಮಾರ್

ಡಾ. ಬಿ. ಪಿ. ಸಂಪತ್ ಕುಮಾರ್ ಅವರು ಅವಿಭಜಿತ ದ.ಕ. ಜಿಲ್ಲೆಯ ಅನೇಕ ಸಂಸ್ಥೆಗಳ ಸ್ಮರಣ ಸಂಚಿಕೆಗಳ ಸಂಪಾದಕರಾಗಿ, ವಿಮರ್ಶೆ ಮತ್ತು ಪರಾಮರ್ಶನ ಗ್ರಂಥಗಳಲ್ಲಿ ಸಹಸಂಪಾದಕರಾಗಿದ್ದಾರೆ. ರಾಷ್ಟ್ರೀಯ ಸೇವಾ ಯೋಜನೆಯ ಯೋಜನಾಧಿಕಾರಿಯಾಗಿ, ಜೇಸೀ ವಲಯ ತರಬೇತಿದಾರರಾಗಿ ರಾಜ್ಯ ಮಟ್ಟದ ಪ್ರಶಸ್ತಿ ಗಳಿಸಿದ್ದು, ರಾಷ್ಟ್ರಮಟ್ಟದ ಶೈಕ್ಷಣಿಕ ಶಿಬಿರಗಳಲ್ಲಿ ತರಬೇತಿ ಪಡೆದವರು, ಅನೇಕ ರಾಷ್ಟ್ರೀಯ ವಿಚಾರ ಸಂಕಿರಣಗಳ ಸಂಘಟಕರು. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಕನ್ನಡದಲ್ಲಿ ಚಿನ್ನದ ಪದಕಗಳೊಂದಿಗೆ  ಸ್ನಾತಕೋತ್ತರ ಪದವೀಧರರು. ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರು. 'ಸಾಂಸ್ಕತಿಕ ಧರ್ಮಸ್ಥಳ' ಎಂಬ ಸಂಶೋಧನಾ ಪ್ರಬಂಧಕ್ಕಾಗಿ ಮುಂಬಯಿ ವಿ. ವಿ. ಯಿಂದ ಪಿ.ಹೆಚ್.ಡಿ. ...

READ MORE

Related Books