ನನ್ನ ತೇಜಸ್ವಿ

Author : ರಾಜೇಶ್ವರಿ ತೇಜಸ್ವಿ

Pages 572

₹ 332.00




Year of Publication: 2013
Published by: ಪುಸ್ತಕ ಪ್ರಕಾಶನ
Address: 91, 9ನೇ ಮುಖ್ಯರಸ್ತೆ, ಸರಸ್ವತಿಪುರಂ, ಮೈಸೂರು- 570004

Synopsys

‘ನನ್ನ ತೇಜಸ್ವಿ’ ಲೇಖಕ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರ ಕುರಿತಾಗಿ ಅವರ ಪತ್ನಿ ರಾಜೇಶ್ವರಿ ತೇಜಸ್ವಿ ಅವರು ಬರೆದ ಕೃತಿ. ತೇಜಸ್ವಿ ಮರಣಾನಂತರ ಪ್ರಕಟವಾದ ಈ ಕೃತಿಯಲ್ಲಿ ತೇಜಸ್ವಿಯವರೇ ಕೇಂದ್ರ ಬಿಂದು. ರಾಷ್ಟ್ರಕವಿ ಕುವೆಂಪು, ಅವರ ಬದುಕು, ಆ ಕಾಲದ ಹೋರಾಟಗಳನ್ನುರಾಜೇಶ್ವರಿ ಅವರು ಅರ್ಥಪೂರ್ಣವಾಗಿ ವಿವರಿಸಿದ್ದಾರೆ. ತೇಜಸ್ವಿ ಬದುಕಿದ್ದಾಗಲೇ ಅವರ ಸಾಹಿತಿ ಮಿತ್ರರೊಬ್ಬರು ರಾಜೇಶ್ವರಿ ಅವರಿಗೆ ಪುಸ್ತಕ ಬರೆಯಲು ಸೂಚಿಸಿದ್ದರಂತೆ, ಆ ವೇಳೆ ತೇಜಸ್ವಿ ‘ಅವಳು ದಿನಸಿ ಚೀಟಿ ಬರೆಯಲಿಕ್ಕೆ ಮಾತ್ರ ಲಾಯಕ್ಕು’ ಎಂದು ಹಾಸ್ಯ ಮಾಡಿದ್ದನ್ನು ರಾಜೇಶ್ವರಿ ಅವರು ಈ ಕೃತಿಯಲ್ಲಿ ಉಲ್ಲೇಖಿಸಿದ್ದಾರೆ.

ಕನ್ನಡ ಸಾಹಿತ್ಯ ಲೋಕದಲ್ಲಿ ತೇಜಸ್ವಿ ಅವರು ಒಂದು ರೀತಿಯ ವಿಸ್ಮಯ. ಅವರ ಬರೆಹದ ಮೋಡಿ ಎಂಥಹವರನ್ನೂ ಹಿಡಿದಿಡಬಲ್ಲದು. ಅವರೊಂದಿಗೆ ಬದುಕಿದ ರಾಜೇಶ್ವರಿ ಅವರು ಈ ಕೃತಿಯಲ್ಲಿ ತಾವೂ ಉತ್ತಮ ಬರಹಗಾರ್ತಿ ಎಂಬುದನ್ನು ನಿರೂಪಿಸಿದ್ದಾರೆ. ತೇಜಸ್ವಿಯವರ ಬದುಕಿನ ಭಾಗವಾಗಿದ್ದ ರಾಜೇಶ್ವರಿ ಅವರು ತೇಜಸ್ವಿ ಬದುಕಿನ ಮತ್ತಷ್ಟು ಮುಖಗಳನ್ನು ಈ ಕೃತಿಯಲ್ಲಿ ಅನಾವರಣ ಮಾಡಿದ್ದಾರೆ.

About the Author

ರಾಜೇಶ್ವರಿ ತೇಜಸ್ವಿ - 14 December 2021)

ರಾಜೇಶ್ವರಿ ತೇಜಸ್ವಿ- 1937ರಲ್ಲಿ ಬೆಂಗಳೂರಿನ ಕಲಾಸಿಪಾಳ್ಯಂ ಹೊಸ ಬಡಾವಣೆಯಲ್ಲಿ ತೀರಾ ಸಾಮಾನ್ಯ ಕುಟುಂಬದಲ್ಲಿ ಹುಟ್ಟಿದವರು. ಹೆಣ್ಣುಮಕ್ಕಳಿಗೂ ತಮ್ಮ ಕಾಲ ಮೇಲೆ ನಿಂತುಕೊಳ್ಳುವ ವಿದ್ಯಾಭ್ಯಾಸ ಕೊಡಬೇಕೆನ್ನುವ ತಮ್ಮ ತಂದೆಯ ಉದಾತ್ತ ಧ್ಯೇಯದಿಂದಾಗಿ ತತ್ವಶಾಸ್ತ್ರದಲ್ಲಿ ಆನರ್ಸ್ ಮತ್ತು ಎಂ.ಎ ಮಾಡಲು ಮಾನಸ ಗಂಗೋತ್ರಿ ಮೈಸೂರಿಗೆ ಬಂದರು. ಅಲ್ಲಿ ಪೂರ್ಣಚಂದ್ರ ತೇಜಸ್ವಿಯವರ ಪರಿಚಯವಾಗಿ ಪ್ರೀತಿಸಿದರು. ಆನಂತರ ಇವರ ಬದುಕಿನ ದಿಕ್ಕೇ ಬದಲಾಯಿಸಿತು. 1966ರಲ್ಲಿ  ವಿವಾಹವಾದರು. ‘ನನ್ನ ತೇಜಸ್ವಿ’ ರಾಜೇಶ್ವರಿ ಅವರ ಮೊಟ್ಟ ಮೊದಲ ಪುಸ್ತಕ. ಈಗ ಅದು ಐದನೇ ಮುದ್ರಣ ಕಂಡಿದೆ.  ಇವರ ಹವ್ಯಾಸವೂ ವಿಭಿನ್ನವಾಗಿದೆ. ಕ್ರೋಶ-ಟೈಲರಿಂಗ್, ಮೊಮ್ಮಕ್ಕಳು ಮತ್ತು ನೆರೆಹೊರೆಯ ...

READ MORE

Related Books