ಹೈನೋದ್ಯಮದ ಹರಿಕಾರ ಎಂ.ವಿ. ಕೃಷ್ಣಪ್ಪ

Author : ನರಸಿಂಹೇಗೌಡ ನಾರಣಾಪುರ

Pages 256

₹ 300.00




Year of Publication: 2021
Published by: ವಿಕಸನ ಪ್ರಕಾಶನ
Address: ವಿಜ್ಞಾತಂ ಭವನ, ಅದಿಚುಂಚನಗಿರಿ ವಿಶ್ವವಿದ್ಯಾಲಯ, ಬಿ.ಜಿ. ನಗರ, ನಾಗಮಂಗಲ ತಾಲೂಕು, ಮಂಡ್ಯ-571448.

Synopsys

ಹೈನೋದ್ಯಮದ ಹರಿಕಾರ ಎಂ.ವಿ. ಕೃಷ್ಣಪ್ಪ ಅವರ ಜೀವನಚರಿತ್ರೆಯ ಕೃತಿ ಇದು. ಲೇಖಕ ನರಸಿಂಹೇಗೌಡ ನಾರಣಾಪುರ ಈ ಕೃತಿ ರಚಿಸಿದ್ದಾರೆ. ಪೀಠಿಕೆ, ಮೋತಕದಲ್ಲಿ, ಮನೆತನ, ಬಾಲ್ಯ ಮತ್ತು ವಿದ್ಯಾಭ್ಯಾಸ, ಶೋಷಿತರ ಅಶಾಕಿರಣ, ಕ್ರಿಯಾಶೀಲ ವಿದ್ಯಾರ್ಥಿ ನಾಯಕ, ಭೂಗತ ಹೋರಾಟಗಾರ, ಸಾಂಸಾರಿಕ ಬದುಕು, ಮೈಸೂರು ಚಲೋ, ಸಜ್ಜನ ರಾಜಕಾರಣಿ, ಕೃಷಿಕರ ಕಾಮಧೇನು, ಹೈನೋದ್ಯಮದ ಹರಿಕಾರ, ಮಾತುಗಾರ ಕೃಷ್ಣಪ್ಪ, ದಿವಂಗತರಿಗೆ ಸಂತಾಪ ಸೂಚನೆ, ವಂಶವೃಕ್ಷ ಅಧ್ಯಾಯಗಳನ್ನು ಈ ಕೃತಿಯು ಒಳಗೊಂಡಿದೆ.

ಸ್ವಾತಂತ್ರ್ಯ ಹೋರಾಟಕ್ಕೆ ವಿದ್ಯಾರ್ಥಿ ದೆಸೆಯಲ್ಲಿಯೇ ಧುಮುಕಿದ್ದ ಎಂ.ವಿ. ಕೃಷ್ಣಪ್ಪನವರು. ಸಣ್ಣ ವಯಸ್ಸಿಗೆ ನಾಯಕತ್ವ ಗುಣಗಳನ್ನು ಬೆಳೆಸಿಕೊಂಡವರು, ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಯುವಕರನ್ನು ಹೋರಾಟಕ್ಕೆ ಅಣಿಗೊಸುವ ಮೂಲಕ ಯುವಜನರ ಆಶಾಕಿರಣ. ಸಭೆಯನ್ನು ಪ್ರವೇಶಿಸಿ ಅಳುವ ಸರ್ಕಾರದ ನಿದ್ದೆಗೆಡೆಸಿದವರು. ಇವರ ರಾಖಕೀಯ ಜೀವನದ ಬಹುಭಾಗ ದೆಹಲಿಯಲ್ಲಿಯೇ ಕಳೆದು ಒಮ್ಮೆ ಮಾತ್ರ ರಾಜ್ಯ ಸರ್ಕಾರದಲ್ಲಿ ಕಂದಾಯ ಸಚಿವರಾಗಿ ಇಡೀ ರಾಜ್ಯಕ್ಕೆ ಏಕರೂಪ ಕಂದಾಯ ವ್ಯವಸ್ಥೆ ಬರಲು ಕಾರಣರಾದವರು ನೆಹರೂ, ಇಂದಿರಾಗಾಂಧಿ, ಚರಣ್‌ಸಿಂಗ್‌ ನೇತೃತ್ವದ ಸರ್ಕಾರದಲ್ಲಿ ಕೇಂದ್ರ ಸಚಿವರಾಗಿದ್ದರು. ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಹೈನುಗಾರಿಕೆ ಬೆಳೆಯಲು ಶ್ರಮಿಸಿದರು. ರೈತರಿಗೆ ಪೂರಕ ಆದಾಯ ದೊರಕುವಂತೆ ಮಾಡಿದರು. ಅಹಾರ, ಕ್ರೀಡೆ, ಕೃಷಿ, ಕಂದಾಯ ಮುಂತಾದ ಹಲವು ಖಾತೆಗಳನ್ನು ಯಶಸ್ವಿಯಾಗಿ ಮುನ್ನಡೆಸಿದರು. ರಾಜ್ಯ ರಾಜಕಾರಣದ ಅತ್ಯಂತ ಪ್ರಬಲ ನಾಯಕರಾಗಿದ್ದ ಕೃಷ್ಣಪ್ಪನವರು ಅಕಾಲಿಕವಾಗಿ ಮರಣ ಹೊಂದಿದರು. ಇವರ ಬಾಳಿನ ಕಥೆಯನ್ನು ಶ್ರೀ ನರಸಿಂಹೇಗೌಡ ನಾರಣಾಪುರ ಅವರು 'ಹೈನೋದ್ಯಮದ ಹರಿಕಾರ ಎಂ.ವಿ. ಕೃಷ್ಣಪ್ಪ' ಕೃತಿಯಲ್ಲಿ ಸೊಗಸಾಗಿ ಕಟ್ಟಿಕೊಟ್ಟಿದ್ದಾರೆ.

About the Author

ನರಸಿಂಹೇಗೌಡ ನಾರಣಾಪುರ
(12 December 1955)

ಲೇಖಕ ನರಸಿಂಹೇಗೌಡ ನಾರಣಾಪುರ ಅವರು ಮಂಡ್ಯ ಜಿಲ್ಲೆ, ಪಾಂಡವಪುರ ತಾಲೂಕು, ಮೇಲುಕೋಟೆಯ ನಾರಣಾಪುರದವರು. ಕೃಷಿಕರು. ತಂದೆ ಬೆಟ್ಟೇಗೌಡ, ತಾಯಿ ನಿಂಗಮ್ಮ. ಎಂ.ಎ., ಎಂ.ಇಡಿ., ಪದವೀಧರರು. 1988ರಲ್ಲಿ ಕೆ.ಜಿ.ಎಫ್‌ನಲ್ಲಿರುವ ಪ್ರಥಮ ದರ್ಜೆ ಕಾಲೇಜು, ಉರಿಗಾಂನಲ್ಲಿ ಕನ್ನಡ ಆಯ್ಕೆ ಶ್ರೇಣಿ ಉಪನ್ಯಾಸಕರಾಗಿ, ವಿಭಾಗದ ಮುಖ್ಯಸ್ಥರಾಗಿ,  2015ರಲ್ಲಿ ನಿವೃತ್ತರಾದರು. ಕರ್ನಾಟಕ ಜಾನಪದ ಅಕಾಡೆಮಿ ಹೊರತಂದಿರುವ ಕನ್ನಡ ಜಾನಪದ ನಿಘಂಟಿನ ಕ್ಷೇತ್ರ ಸಹಾಯಕರಾಗಿ, ಕನ್ನಡ ಸಾಹಿತ್ಯ ಪರಿಷತ್ತಿನ ಕೆ.ಜಿ.ಎಫ್' ವಿಶೇಷ ಘಟಕದ ಪ್ರಧಾನ ಕಾರ್ಯದರ್ಶಿಯಾಗಿ ಹಾಗೂ ಕೆ.ಜಿ.ಎಫ್‌ನ ಕನ್ನಡ ಸಂಘದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ. 2021ರಲ್ಲಿ ನಡೆದ ಕೆ.ಜಿ.ಎಫ್ ತಾಲ್ಲೂಕಿನ ಎರಡನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.  ಕೃತಿಗಳು; ಮೇಲುಕೋಟೆ ಸುತ್ತಿನ ...

READ MORE

Related Books