ಸಂಗೀತ ಲೋಕದ ಸಂತ ಬಿಸ್ಮಿಲ್ಲಾ ಖಾನ್

Author : ಎನ್. ಜಗದೀಶ್ ಕೊಪ್ಪ

Pages 200

₹ 200.00




Year of Publication: 2020
Published by: ಮನೋಹರ ಗ್ರಂಥ ಮಾಲಾ
Address: ಮೊದಲ ಮಹಡಿ, ಲಕ್ಷ್ಮೀ ಭವನ, ಸುಭಾಶ ರಸ್ತೆ, ಖಾದಿ ಭಂಡಾರ ಕಟ್ಟಡದ ಮೇಲೆ, ಧಾರವಾಡ-580001
Phone: 0836 244 1823

Synopsys

‘ಸಂಗೀತ ಲೋಕದ ಸಂತ ಬಿಸ್ಮಿಲ್ಲಾ ಖಾನ್’ ಡಾ. ಎನ್. ಜಗದೀಶ್ ಕೊಪ್ಪ ಅವರು ಬರೆದಿರುವ ಬಿಸ್ಮಿಲ್ಲಾಖಾನ್ ಅವರ ಜೀವನಚರಿತ್ರೆ. ಈ ಕೃತಿಗೆ ಡಾ. ಹ. ವೆಂ. ಕಾಖಂಡಿಕಿ ದೀರ್ಘ ಮುನ್ನುಡಿ ಬರೆದಿದ್ದಾರೆ. ಸಂಗೀತ ಲೋಕದ ಸಂತ, ಶಹನಾಯ್ ವಾದ್ಯದ ಮೂಲಕ ಜಗತ್ ಪ್ರಸಿದ್ಧಿ ಪಡೆದ ಬಿಸ್ಮಿಲ್ಲಾ ಖಾನ್ ಅವರ ಜೀವನ ಚರಿತ್ರೆಯನ್ನು ಅತೀ ಸೂಕ್ಷ್ಮವಾಗಿ ಲೇಖಕರು ದಾಖಲಿಸಿದ್ದಾರೆ. ಶಹನಾಯ್ ವಾದ್ಯದ ಬೆಳವಣಿಗೆ, ಉಪಯೊಗ, ಜನಪ್ರಿಯತೆಯನ್ನು ವಿವರಿಸುತ್ತ ಪ್ರಾರಂಭವಾಗುವ ಈ ಕೃತಿ ಉಸ್ತಾದ್ ಬಿಸ್ಮಿಲ್ಲಾ ಖಾನರಿಂದ ಈ ವಾದ್ಯ ಹೇಗೆ ಜಗತ್‍ಪ್ರಸಿದ್ಧಿಯನ್ನು ಪಡೆಯಿತು ಎನ್ನುವುದನ್ನು ವಿವರಿಸುತ್ತಾ ಸಾಗುತ್ತಾರೆ.

ಕಾಶಿ (ವಾರಣಾಸಿ)ಯ ಸಂಸ್ಕೃತಿ, ವಿಶ್ವನಾಥನ ಸನ್ನಿಧಿ, ಅದರ ಹತ್ತಿರದ ದೇವಾಲಯವೊಂದರಲ್ಲಿ ಬಿಸ್ಮಿಲ್ಲಾ ಖಾನರು ತಮ್ಮ ಗುರುವಿನಿಂದ ಪಡೆದ ಮಾರ್ಗದರ್ಶನ, ನಂತರದ ದಿನಗಳಲ್ಲಿ ತಾವು ತಮ್ಮ ಗುರುವಿನ ಹಾಗೆ ದೇವರ ಸೇವೆ ಮುಂದುವರೆಸಿದ್ದು, ಪಡೆದ ಅನುಭಾವದ ಕ್ಷಣಗಳು ಹೀಗೆ ಎಲ್ಲವನ್ನೂ ಓದುಗರ ಮುಂದೆ ಇಡುತ್ತ ಬಿಸ್ಮಿಲ್ಲಾ ಖಾನ್ ಅವರ ವ್ಯಕ್ತಿತ್ವವನ್ನು ಕಟ್ಟಿಕೊಡುವ ರೀತಿ ನಿಜಕ್ಕೂ ಆಪ್ಯಾಯಮಾನ ಎನ್ನುತ್ತಾರೆ ಲೇಖಕ ಕಾಖಂಡಿಕಿ.

ಖಾನರ ಪ್ರಸಿದ್ಧಿ, ಕಾರ್ಯಕ್ರಮಗಳು, ಸಂಸಾರ, ಸಿಕ್ಕ ಮರ್ಯಾದೆ, ದೊರಕಿದ ಪ್ರಶಸ್ತಿಗಳು, ಚಲನಚಿತ್ರಗಳಲ್ಲಿ ಖಾನ ಸಾಹೇಬರು ಸಾಧಿಸಿದ ಸಾಧನೆ ಹೀಗೆ ಎಲ್ಲವನ್ನೂ ಎಳೆ-ಎಳೆಯಾಗಿ ಲೇಖಕರು ನಮ್ಮ ಮುಂದಿಡುತ್ತಾರೆ. ಅವರ ಸಂಸಾರ, ಬಂಧು ಬಳಗ, ಅವರ ಕೊನೆಯ ದಿನಗಳನ್ನು ಕೂಡ ಅಷ್ಟೇ ಕಾಳಜಿಯಿಂದ ದಾಖಲಿಸಿದ್ದಾರೆ, ಈ ಎಲ್ಲ ವಿಷಯಗಳನ್ನು ಜಗದೀಶ ಕೊಪ್ಪ ಅವರು ಹೆಚ್ಚಿನ ಶ್ರಮವಹಿಸಿ, ಆ ಎಲ್ಲ ಪ್ರದೇಶಗಳಲ್ಲಿ ತಿರುಗಾಡಿ, ಅವರ ಬಂಧು ಬಾಂಧವರು, ಸ್ನೇಹಿತರನ್ನು ಭೇಟಿಯಾಗಿ ಬರಹರೂಪದಲ್ಲಿ ನಮಗೆ ಕಟ್ಟಿ ಕೊಟ್ಟಿದ್ದಾರೆ.

 

About the Author

ಎನ್. ಜಗದೀಶ್ ಕೊಪ್ಪ

ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕಿನ ಕೊಪ್ಪ ಗ್ರಾಮದಲ್ಲಿ 1956 ರಲ್ಲಿ ರೈತ ಕುಟುಂಬದಲ್ಲಿ ಜನನ. ಬೆಂಗಳೂರು ವಿ.ವಿ.ಪುರಂ ಕಾಲೇಜಿನಿಂದ ಬಿ.ಎ. ಪದವಿ, ಮೈಸೂರು ವಿಶ್ವವಿದ್ಯಾನಿಲಯದಿಂದ ಅರ್ಥಶಾಸ್ತ್ರದಲ್ಲಿ ಎಂ.ಎ. ಪದವಿ ಹಾಗೂ ಹಂಪಿ ಕನ್ನಡ ವಿಶ್ವವಿದ್ಯಾನಿಯದಿಂದ ‘ ಜಾಗತೀಕರಣ ಮತ್ತು ಗ್ರಾಮ ಭಾರತ’ ಪೌಢಪ್ರಬಂಧಕ್ಕೆ ಡಾಕ್ಟರೇಟ್ ಪದವಿ ಪಡೆದರು. 1981 ರಲ್ಲಿ ಪತ್ರಿಕೋದ್ಯಮ ಪ್ರವೇಶಿಸಿದ ಇವರು 2018 ರವರೆಗೆ ಹುಬ್ಬಳ್ಳಿ ನಗರದಲ್ಲಿ ಉದಯಟಿ.ವಿ.ಸಂಸ್ಥೆಯ ಉತ್ತರ ಕರ್ನಾಟಕ ಪ್ರಾದೇಶಿಕ ಕಚೇರಿಯ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿ ಇದೀಗ ಮೈಸೂರು ನಗರದಲ್ಲಿ ನಿವೃತ್ತ ಜೀವನ ನಡೆಸುತ್ತಿದ್ದಾರೆ. 1995 ರಲ್ಲಿ ಸುಮ್ಮಾನದ ಪದ್ಯಗಳು ಕೃತಿಯ ಮೂಲಕ ...

READ MORE

Related Books