ಕೆ.ಟಿ. ಶಿವಪ್ರಸಾದ್

Author : ಎಚ್. ಎ. ಅನಿಲ್‌ಕುಮಾರ್

Pages 80

₹ 45.00




Year of Publication: 2000
Published by: ಕರ್ನಾಟಕ ಲಿಲಿತಕಲಾ ಅಕಾಡೆಮಿ
Address: ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು- 560002

Synopsys

ಕಲಾವಿದ ಕೆ.ಟಿ. ಶಿವಪ್ರಸಾದ್ ಅವರ ಕಲಾಕೃತಿಗಳ ವಿವರದೊಂದಿಗೆ ಅವರ ಕಲಾಬದುಕಿನ ಮೇಲೆ ಬೆಳಕು ಚೆಲ್ಲುವ ಕೃತಿ ‘ಕೆ.ಟಿ.ಶಿವಪ್ರಸಾದ್’ ಕರ್ನಾಟಕ ಲಲಿತ ಕಲಾ ಅಕಾಡೆಮಿ ಪ್ರಕಟಿಸಿರುವ ಈ ಕೃತಿಯನ್ನು ಕಲಾವಿದ, ಲೇಖಕ ಎಚ್.ಎ. ಅನಿಲ್ ಕುಮಾರ್ ರಚಿಸಿದ್ದಾರೆ. ಶಿವಪ್ರಸಾದ್ ಅವರ ಕಲಾಕೃತಿಗಳ ವಿಭಿನ್ನತೆಯನ್ನು ಕಲಾವಿದನ ಅಸ್ಥಿತ್ವವನ್ನು ಎಳೆಎಳೆಯಾಗಿ ವಿವರಿಸುವ ಮೂಲಕ ಕಲಾಬದುಕಿನ ಸುಂದರ ಕ್ಷಣಗಳನ್ನು ಈ ಕೃತಿಯಲ್ಲಿ ಕಟ್ಟಿಕೊಟ್ಟಿದ್ದಾರೆ.

About the Author

ಎಚ್. ಎ. ಅನಿಲ್‌ಕುಮಾರ್

ಎಚ್.ಎ.ಅನಿಲ್ ಕುಮಾರ್ ಕಲಾ ವಿಮರ್ಶಕರು, ಚಿತ್ರಕಲಾ ಪರಿಷತ್ತಿನ ಕಲಾ ಇತಿಹಾಸ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ಇವರು ಕಲೆಗೆ ಸಂಬಂಧಿಸಿದ ಬರಹಗಳ ಮೂಲಕ ಕನ್ನಡ ಮತ್ತು ಇಂಗ್ಲಿಷ್ ಓದುಗರಿಬ್ಬರಿಗೂ ಪರಿಚಿತರು. ಇವರಿಗೆ ದೆಹಲಿ ಕಲಾ ಶಾಲೆ ರಾಷ್ಟ್ರಮಟ್ಟದಲ್ಲಿ ಅತ್ಯುತ್ತಮ ಕಲಾ ಶಿಕ್ಷಕರಿಗೆ ನೀಡುವ ಪ್ರತಿಷ್ಠಿತ ಬಿ.ಸಿ.ಸನ್ಯಾಲ್ ಪ್ರಶಸ್ತಿ ನೀಡಿ ಗೌರವಿಸಿದೆ. ಮೊದಲ ಬಾರಿಗೆ ಕರ್ನಾಟಕದ ಕಲಾ ಶಿಕ್ಷಕರೊಬ್ಬರಿಗೆ ಈ ಪ್ರಶಸ್ತಿ ದೊರೆತಿದೆ.  ಶಾಂತಿನಿಕೇತನದ ವಿಶ್ವಭಾರತಿ ವಿಶ್ವವಿದ್ಯಾಲಯದ ಕಲಾ ಇತಿಹಾಸದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಚಿತ್ರಕಲಾ ಪರಿಷತ್ತಿನ ಹಳೆಯ ವಿದ್ಯಾರ್ಥಿಯೂ ಹೌದು. ಲಂಡನ್‌ನ ರಾಯಲ್ ಕಾಲೇಜ್‌ನಲ್ಲಿ ಸಮಕಾಲೀನ ಕ್ಯುರೇಶನ್ ...

READ MORE

Related Books