ಎದೆಯ ಒಕ್ಕಲಿಗ

Author : ಚನ್ನಪ್ಪ ಅಂಗಡಿ

Pages 124

₹ 100.00




Year of Publication: 2014
Published by: ಶ್ರೀ ಚನ್ನಬಸವೇಶ್ವರ ಸಂಸ್ಥಾನ ಹಿರೇಮಠ
Address: ಹಾರಕೂಡ, ಬೀದರ್ ಜಿಲ್ಲೆ.

Synopsys

‘ಎದೆಯ ಒಕ್ಕಲಿಗ’ 12ನೇ ಶತಮಾನದ ಕೃಷಿ ಕಾಯಕದ ವಚನಕಾರ ಒಕ್ಕಲಿಗ ಮುದ್ದಣ್ಣನ ವಚನ ವಿಶ್ಲೇಷಣೆ ಮತ್ತು ಜೀವನ ವೃತ್ತಾಂತವನ್ನು ವಿವರಿಸಿದ ಕೃತಿ ಇದು. ಈ ಕೃತಿಗೆ ಬೆಟದೂರು ಪ್ರತಿಷ್ಠಾನ ಪ್ರಶಸ್ತಿ, ಅಡ್ವೈಸರ್ ಪುಸ್ತಕ ಪ್ರಶಸ್ತಿ ಲಭಿಸಿವೆ. ಜೋಳದಹಾಳ ಗ್ರಾಮದ ಭಕ್ತ ಒಕ್ಕಲಿಗ ಮುದ್ದಣ ಕೃಷಿಕಾಯಕದ ಮೂಲಕ ಜಂಗಮ ದಾಸೋಹ ನಡೆಸುವ ಪ್ರವೃತ್ತಿಯವರು. ಅಂಗವೆ ಭೂಮಿಯಾಗಿ ಲಿಂಗವೆ ಬೆಳೆಯಾಗಿ ವಚನಬೀಜ ಬಿತ್ತಿ ಆಧ್ಯಾತ್ಮಸಾರದ ಪಾರಿಭಾಷಿಕ ಭಾಷೆಯಲ್ಲಿ ಕೃಷಿ ಪರಿಸರದ ಪ್ರತಿಮೆಗಳ ಮುಖಾಂತರ ಬದುಕಿನ ಮೌಲ್ಯಗಳನ್ನು ಹಸನಾದ ನೆಲದಲ್ಲಿ ನೇಗಿಲಿನಿಂದ ಬರೆದು, ಬದುಕಿದರು. ಕಾಮಭೀಮ ಜಾವಧನದೊಡೆಯ ಎಂಬ ಮುದ್ರಿಕೆಯ ಈತನ ಹನ್ನೆರಡು ವಚನಗಳು ಇದುವರೆಗೆ ಲಭ್ಯವಾಗಿವೆ.

ಶಿವಶರಣರು ಅಂತರಂಗದ ಕೃಷಿಕರು. ಅಚ್ಚಗನ್ನಡದ ಬೇಸಾಯಗಾರರು ಒಕ್ಕಲಿಗ ಮುದ್ದಣ ಒಬ್ಬ ಅನುಭಾವಿ. ಅವನ ವಚನಗಳನ್ನು ಮುಖ್ಯವಾಗಿಟ್ಟುಕೊಂಡು ಶರಣರ ಸಮಸ್ತ ಕೃಷಿಜ್ಞಾನವನ್ನು ಇಲ್ಲಿ ಲೇಖಕರು ವಿವೇಚಿಸಿದ್ದಾರೆ.

About the Author

ಚನ್ನಪ್ಪ ಅಂಗಡಿ
(15 April 1970)

ಚನ್ನಪ್ಪ ಅಂಗಡಿ ಅವರು  ಎಮ್ ಎಸ್ ಸಿ (ಕೃಷಿ)  ಸಹಾಯಕ ಕೃಷಿ ನಿರ್ದೇಶಕರಾಗಿದ್ದಾರೆ.   ಇವರು ಜನಿಸಿದ್ದು15.04.1970, ಬಮ್ಮನಹಳ್ಳಿ ಹಾವೇರಿ ಜಿಲ್ಲೆಯಲ್ಲಿ.   ಮಂದ ಬೆಳಕಿನ ಸಾಂತ್ವನ, ಭೂಮಿ ತಿರುಗುವ ಶಬ್ದ (ಕವನಸಂಕಲನ), ಮಣ್ಣಿನೊಳಗಣ ಮರ್ಮ, ಕಿಬ್ಬದಿಯ ಕೀಲುಳುಕಿ (ಕಥಾಸಂಕಲನ), ಎದೆಯ ಒಕ್ಕಲಿಗ (ವೈಚಾರಿಕ), ಕೃಷಿ ಕಾರಣ ಸಂಪಾದನೆ : ಮಡಿಲು, ಕಾಯಕಯೋಗಿ, ಕದಂಬ, ಬಿತ್ತೋಣ ಹತ್ತಿ ಬೆಳೆಯೋಣ, ಗಿಡಗಂಟೆಗಳ ಕೊರಳು ಕೃತಿಗಳನ್ನು ರಚಿಸಿದ್ದಾರೆ. ಭೂಚೇತನ ಪ್ರಶಸ್ತಿ , ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (ಕಾವ್ಯ), ಮುದ್ದಣ ರತ್ನಾಕರವರ್ಣಿ ಅನಾಮಿಕ (ಕಸಾಪ) ಪ್ರಶಸ್ತಿ, ವಿಭಾ ಸಾಹಿತ್ಯ ಪ್ರಶಸ್ತಿ, ...

READ MORE

Related Books