ಎಂ. ರಾಮನರಸಯ್ಯ

Author : ರಾಮದಾಸ್ ಅಡ್ಯಂತಾಯ

Pages 56

₹ 25.00




Year of Publication: 2000
Published by: ಕರ್ನಾಟಕ ಲಲಿತಕಲಾ ಅಕಾಡೆಮಿ
Address: 2ನೇ ಮಹಡಿ, ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು – 560002

Synopsys

ಭಾರತದ ಕಲಾಪರಂಪರೆಗೆ, ಕರ್ನಾಟಕ ಲಲಿತಕಲಾ ಅಕಾಡೆಮಿಯು ಕರ್ನಾಟಕದ ಖ್ಯಾತ ಕಲಾವಿದರಾದ ಎಂ. ರಾಮನರಸಯ್ಯ ಅವರ ಪರಿಚಯ, ಸಮಕಾಲೀನ ಕಲಾವಿದರ ಚಿತ್ರ, ಅವರ ಜೀವನ ಶೈಲಿ, ಬದುಕಿನ ಘಟ್ಟಗಳ ಪರಿಚಯ, ಕಲಾವಿದರ ಸೃಜನಶೀಲತೆಯ ವಿಚಾರಗಳ ಕುರಿತ ಸೂಕ್ಷ್ಮವಾದ ಪರಿಚಯ ’ಎಂ. ರಾಮನರಸಯ್ಯ’ ಅವರ ಪುಸ್ತಕ ಪ್ರಕಟಣೆಯಲ್ಲಿ ಬರಹಗಾರ, ಕಲಾವಿದ, ಚಿತ್ರಕಲೆಯ ಸಾಹಿತ್ಯವನ್ನು ಕುರಿತಂತೆ ಸಾಧನೆ ,ಮಾಡಿರುವ ಬರಹಗಾರರಾದ ರಾಮದಾಸ್ ಅಡ್ಯಂತಾಯ ಅವರು ಹೊರತಂದಿದ್ದಾರೆ.

ಎಂ. ರಾಮನರಸಯ್ಯ  ಅವರು ಮೈಸೂರು ಅರಮನೆಯ ಕಲಾವಿದರಾಗಿ ಉತ್ತಮ ಭಾವಚಿತ್ರಗಳ ರಚನೆಯ ಮೂಲಕ ಕರ್ನಾಟಕಕ್ಕೆ ಮಹತ್ವದ ಕಾಣಿಕೆ ಸಲ್ಲಿಸಿದ್ದಾರೆ.  ರಾಮನರಸಯ್ಯ ಅವರ ಹೆಸರು ಕರ್ನಾಟಕದಾದ್ಯಂತ ಮಾತ್ರವಲ್ಲದೇ ದೇಶ-ವಿದೇಶಗಳಲ್ಲೂ ಪರಿಚಿತ.  ಪ್ರಬುದ್ಧ ಕಲಾವಿದರಾದ ಎಂ. ರಾಮನರಸಯ್ಯ ಅವರ ಬದುಕು, ಶಿಕ್ಷಣ, ಮೈಸೂರು ಸಂಸ್ಥಾನದ ಒಡನಾಟ, ಕಲಾತ್ಮಕ ಜೀವನ, ಕಲಾ ಕೊಡುಗೆ ಇವೆಲ್ಲವನ್ನೂ ಪರಿಚಯಿಸುವ ’ ಎಂ, ರಾಮನರಸಯ್ಯ’ ಕೃತಿ ಕರ್ನಾಟಕ ಲಲಿತಕಲಾ ಅಕಾಡೆಮಿ ವತಿಯಿಂದ ಪ್ರಕಟಗೊಂಡಿದೆ.

 

About the Author

ರಾಮದಾಸ್ ಅಡ್ಯಂತಾಯ

ಬೆಂಗಳೂರಿನ ಕೆನ್ ಕಲಾಶಾಲೆಯಲ್ಲಿ ಡ್ರಾಯಿಂಗ್ ಮತ್ತು ಪೆಯಿಂಟಿಂಗ್‌ನಲ್ಲಿ ಡಿಪ್ಲೊಮಾ ಮಾಡಿದ ರಾಮದಾಸ್ ಅಡ್ಯಂತಾಯ ಸ್ನಾತಕೋತ್ತರ ಡಿಪ್ಲೋಮಾವನ್ನು ಶಾಂತಿನಿಕೇತನದಲ್ಲಿ ಪಡೆದಿದ್ದಾರೆ. ರಾಷ್ಟ್ರದ ಪ್ರಮುಖ ಸ್ಥಳಗಳಲ್ಲಿ ಏಕವ್ಯಕ್ತಿ ಮತ್ತು ಸಮೂಹ ಕಲಾ ಪ್ರದರ್ಶನಗಳನ್ನು ಏರ್ಪಡಿಸಿರುವುದಲ್ಲದೆ ಕೇಂದ್ರ ಮತ್ತು ರಾಜ್ಯ ಅಕಾಡೆಮಿಗಳ ಮೂಲಕ ಕಲಾ ಪ್ರದರ್ಶನಗಳನ್ನು ಏರ್ಪಡಿಸಿದ್ದಾರೆ. ಗ್ರಾಫಿಕ್‌ಕಲೆಯಲ್ಲಿ ಹೆಚ್ಚಿನ ಪರಿಣತಿಯನ್ನು ಪಡೆದಿರುವ ಇವರು ಹಲವಾರು ಗ್ರಾಫಿಕ್ ಶಿಬಿರಗಳಲ್ಲಿ ಭಾಗವಹಿಸಿದ್ದಾರೆ. ಕೇಂದ್ರ ಹಾಗೂ ರಾಜ್ಯ ಅಕಾಡೆಮಿಗಳ ಜೊತೆಗೆ ವಿದೇಶಗಳಲ್ಲೂ ಇವರ ಕೃತಿಗಳು ಸಂಗ್ರಹವಾಗಿವೆ. ಚಿಂತನಶೀಲ ಕಲಾವಿದರಾದ ಅಡ್ಯಂತಾಯ ಅವರು ಅನೇಕ ಕಲಾ ಸಂಸ್ಥೆಗಳ ಸಕ್ರಿಯ ಕಾರ್ಯಕರ್ತರಾಗಿ ದುಡಿಯುತ್ತಿದ್ದಾರೆ. ಎಂ. ರಾಮನರಸಯ್ಯ ಅವರನ್ನು ...

READ MORE

Related Books