ನಿಜಶರಣ ಅಂಬಿಗರ ಚೌಡಯ್ಯನವರು

Author : ಬಸವರಾಜ ಫಕೀರಪ್ಪ ಸುಣಗಾರ

Pages 132

₹ 120.00




Year of Publication: 2016
Published by: ಶ್ರೀ ಸದ್ಗುರು ಪ್ರಕಾಶನ
Address: ವಿಜಯನಗರ - 591108. ತಾ.ಜಿ. ಬೆಳಗಾವಿ
Phone: 9481738018

Synopsys

ಲೇಖಕ ಬಸವರಾಜ ಫಕೀರಪ್ಪ ಸುಣಗಾರ ಅವರ ಸಂಪಾದಿತ ಕೃತಿ ‘ನಿಜಶರಣ ಅಂಬಿಗರ ಚೌಡಯ್ಯನವರು’. ಕೃತಿಗೆ ಮುನ್ನುಡಿ ಬರೆದ ಎಚ್. ಆಯ್. ತಿಮ್ಮಾಪೂರ, ‘ಅಂಬಿಗರ ಚೌಡಯ್ಯನು ಆತ್ಮವಿಶ್ವಾಸಿಕ ಅಪ್ರತಿಮಜ್ಞಾನಿ ತರ್ಕಶಕ್ತಿ ಮತ್ತು ಆಧ್ಯಾತ್ಮಿಕ ಶಕ್ತಿಯು ಇತ್ತು ಎಂಬುದನ್ನು ಇಲ್ಲಿಯ ಲೇಖನಗಳು ಪ್ರಸ್ತುತಪಡಿಸಿದೆ. ತನು-ಮನ ಶುದ್ದವಾಗಿದ್ದವನು ಮಾತ್ರ ಗುರು ಆಗುತ್ತಾನೆ. ಸ್ಥಾವರ ಲಿಂಗ ಪೂಜಿಸುವುದು ಸರಿಯಲ್ಲ, ಮನಸ್ಸು - ಪ್ರೀತಿ ಸರಿಯಾಗಿದ್ದರೆ ರತ್ನಕ್ಕೆ ಸಮಾನ, ಲಿಂಗ ಬಿಟ್ಟು ಬೇರೆ ಲಿಂಗ ಪೂಜಿಸಬಾರದು-ಎಂಬಿತ್ಯಾದಿ ವಿಷಯ ವಚನಗಳ ವಿವರಣೆ ನೀಡಿದ ಲೇಖನಗಳು ಅರ್ಥಪೂರ್ಣವಾಗಿದೆ’ ಎಂದು ಪ್ರಶಂಸಿದ್ದಾರೆ.

About the Author

ಬಸವರಾಜ ಫಕೀರಪ್ಪ ಸುಣಗಾರ

ಲೇಖಕ ಬಸವರಾಜ ಫಕೀರಪ್ಪ ಸುಣಗಾರ ಮೂಲತಃ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಹಣ್ಣಿಗೇರಿಯವರು. ತಂದೆ ಫಕೀರಪ್ಪ, ತಾಯಿ ನಿಂಗಮ್ಮ. ಬಿಎ, ಟಿಸಿಎಚ್ ಪೂರೈಸಿದ್ದಾರೆ. ಪ್ರಶಸ್ತಿ: ಆದಶ೯ ಶಿಕ್ಷಕ ಪ್ರಶಸ್ತಿ,ಗುರು ಕುಲ ರಾಜ್ಯ ಪ್ರಶಸ್ತಿ, ವರ್ಷದ ವ್ಯಕ್ತಿ ಪ್ರಶಸ್ತಿ 2013,ಮೌಲ್ಯ  ಶಿಕ್ಷಣ ಸಂಪದ ರಾಜ್ಯ ಪ್ರಶಸ್ತಿ, ವಿವಿಧ ಮಠಾಧೀಶರಿಂದ ಸೇವಾ ರತ್ನ ಪ್ರಶಸ್ತಿ. ಕೃತಿಗಳು: ಅಭಿಮಾನದ ನನ್ನೂರು(ಅಂಕಣ ಬರಹಗಳ ಸಂಕಲನ), ನಿಜಶರಣ ಅಂಬಿಗರ ಚೌಡಯ್ಯನವರು(ಲೇಖನಗಳ ಸಂಗ್ರಹ), ಆದರ್ಶ ಶಿಕ್ಷಕ: ಒಂದು ಚಿಂತನೆ (ಲೇಖನಗಳ ಸಂಕಲನ), ಅನಿಸಿದ್ದು. ...

READ MORE

Related Books