ಸರೋಜಿನಿ ನಾಯುಡು

Author : ಬಿ. ಕಾಮಾಕ್ಷಮ್ಮ

Pages 120

₹ 15.00




Year of Publication: 1974
Published by: ರಾಷ್ಟ್ರೋತ್ಥಾನ ಸಾಹಿತ್ಯ
Address: ಕೇಶವ ಶಿಲ್ಪ, ಕೆಂಪೇಗೌಡ ನಗರ, ಬೆಂಗಳೂರು-560019

Synopsys

ಸರೋಜಿನಿ ನಾಯುಡು ಜೀವನ ಚರಿತ್ರೆ ಪುಸ್ತಕವನ್ನು ಲೇಖಕಿ ಬಿ. ಕಾಮಾಕ್ಷಮ್ಮ ಅವರು ರಚಿಸಿದ್ದಾರೆ. ಈ ಕೃತಿಯಲ್ಲಿ ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಧೀರ ಮಹಿಳೆ. ಗಾಂಧೀಜಿಯ ಪ್ರಿಯ ಶಿಷ್ಯೆ. ಶ್ರೀಮಂತಿಕೆ, ಸುಖ ಎಲ್ಲವನ್ನೂ ತ್ಯಾಗ ಮಾಡಿ ದಿಟ್ಟತನದಿಂದ ಹೋರಾಡಿದರು. ಸ್ವತಂತ್ರ ಭಾರತದಲ್ಲಿ ಮೊದಲನೆಯ ಸ್ತ್ರೀ ಗವರ್ನರ್. ಪ್ರಸಿದ್ಧ ಕವಯಿತ್ರಿ. ಎಂತಹ ಸನ್ನಿವೇಶದಲ್ಲಿಯೂ ತಿಳಿಹಾಸ್ಯದ ಬೆಳಕನ್ನು ಹರಿಸುತ್ತಿದ್ದರು. ಉತ್ಸಾಹದ ತವರು ಎಂದು ಸರೋಜಿನಿ ನಾಯುಡು ಅವರ ಕುರಿತು ಈ ಕೃತಿಯಲ್ಲಿ ವಿವರಿಸಲಾಗಿದೆ. ಸರೋಜಿನಿ ನಾಯುಡು ಅವರ ಬಾಲ್ಯ ಜೀವನ, ವಿದ್ಯಾಭ್ಯಾಸ, ಜೀವನದ ಏಳು-ಬೀಳು ಹೀಗೆ ಅವರ ಬದುಕಿನ ಆಯಾಮಗಳನ್ನು ಲೇಖಕರು ಈ ಪುಸ್ತಕದಲ್ಲಿ ಸರಳ ಕನ್ನಡ ಭಾಷೆಯಲ್ಲಿ ಚಿತ್ರಿಸಿದ್ದಾರೆ.

About the Author

ಬಿ. ಕಾಮಾಕ್ಷಮ್ಮ

ಬರಹಗಾರ್ತಿ ಕಾಮಾಕ್ಷಮ್ಮ ಅವರು ಏಪ್ರಿಲ್ 1912ರಂದು ಬೆಂಗಳೂರಿನಲ್ಲಿ ಜನಿಸಿದರು. ತಂದೆ ಬಿ. ವಿ. ಕುಮಾರಯ್ಯ, ತಾಯಿ ಆರ್. ನಂಜಮ್ಮ. ಸ್ವಾತಂತ್ರ್ಯ ಸಂಗ್ರಾಮದ ಸ್ಟತಿ (ಅನುವಾದ), ಲಾಹೋರಿನಿಂದ ಭಾರತಕ್ಕೆ (ಕಥೆ), ಸರೋಜಿನಿ ನಾಯ್ಡು (ಜೀವನ ಚರಿತ್ರೆ), ಯಶೋಧರಾ ದಾಸಪ್ಪ (ಜೀವನ ಚರಿತ್ರೆ), ಸರ್ವೋದಯ ಸಾಹಿತ್ಯ, ಆಶ್ರಮದ ಸೋದರಿಯರಿಗೆ ಬಾಪೂಜಿ ಪತ್ರಗಳು (ಅನುವದ) ಅವರ ಕೃತಿಗಳು. ...

READ MORE

Related Books