ಅಕ್ಕನ ಉಪದೇಶ

Author : ಹರ್ಡೇಕರ್ ಮಂಜಪ್ಪ

Pages 42

₹ 0.00




Year of Publication: 1937
Published by: ಹರ್ಡೇಕರ್ ಮಂಜಪ್ಪ
Address: ಆಲಮಟ್ಟಿ

Synopsys

ಹರ್ಡೇಕರ್ ಮಂಜಪ್ಪನವರು ಶರಣೆ ಅಕ್ಕಮಹಾದೇವಿಯ ಜೀವನ ವೃತ್ತಾಂತ ಕುರಿತು ಬರೆದ ಕೃತಿ-ಅಕ್ಕ ಮಹಾದೇವಿ. ಶಿವಮೊಗ್ಗ ಜಿಲ್ಲೆಯ ಉಡುತಡಿಯಿಂದ ಮೊದಲ್ಗೊಂಡು 12ನೇ ಶತಮಾನದ ಬಸವಣ್ಣ-ಅಲ್ಲಮನ ಅನುಭವ ಮಂಟಪ ಪ್ರವೇಶವರೆಗೂ ಎದುರಿಸಿದ ಧೈರ್ಯ-ಮನೋಸ್ಥೈರ್ಯಗಳ ಕುರಿತು ಎಳೆಯ ಮಕ್ಕಳಲ್ಲಿ ಈ ತಾಯಿಯ ಮನೋಧೋರಣೆಯು ಮಾದರಿಯಾಗಿ ನೆಲೆಯೂರಬೇಕೆಂಬ ಆಶಯದೊಂದಿಗೆ, ಸರಳ ಭಾಷೆಯಲ್ಲಿ ರಚಿಸಿದ್ದಾರೆ.

About the Author

ಹರ್ಡೇಕರ್ ಮಂಜಪ್ಪ
(18 February 1886 - 03 January 1947)

ಹರ್ಡೇಕರ್ ಮಂಜಪ್ಪ ಅವರು (ಜನನ: 18-02-1886) ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬನವಾಸಿಯಲ್ಲಿ ಜನಿಸಿದರು. ಮುಲ್ಕಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಶಿರಸಿಯಲ್ಲಿ ತಾವು ಕಲಿತ ಶಾಲೆಯಲ್ಲೆ ಶಿಕ್ಷಕರಾದರು. ನಂತರ 1905ರಲ್ಲಿ ಪ್ರತ್ಯೇಕ ಶಾಲೆಯ ಏಕೋಪಾಧ್ಯಾಯರಾದರು. ಮಂಜಪ್ಪನವರು ಕೆಲಸಕ್ಕೆ ರಾಜೀನಾಮೆ ನೀಡಿ ಅಣ್ಣ  ಜೊತೆ ದಾವಣಗೆರೆಯಲ್ಲಿ ‘ಧನುರ್ಧಾರಿ’ ಪತ್ರಿಕೆ ಆರಂಭಿಸಿದರು. ಲೋಕಮಾನ್ಯ ಟಿಳಕರು ಕೇಸರಿ ಪತ್ರಿಕೆಯಲ್ಲಿ ಬರೆಯುತ್ತಿದ್ದ ಲೇಖನಗಳನ್ನು ಅನುವಾದಿಸಿ ಪ್ರಕಟಿಸುತ್ತಿದ್ದರು. ಇದನ್ನು ಇಷ್ಟಪಡದ ಮುದ್ರಕರು ನಿರಾಕರಿಸಿದ್ದರಿಂದ ಪತ್ರಿಕೆ ನಿಂತುಹೋಯಿತು. 1908ರಲ್ಲಿ ಸ್ವಂತ ಮುದ್ರಣಯಂತ್ರ ಹೊಂದಿಯೂ ಮತ್ತೆ ಪತ್ರಿಕೆ ಕಾರಣಾಂತರದಿಂದ ಸ್ಥಗಿತಗೊಂಡಿತ್ತು. ರಾಷ್ಟ್ರೀಯತಾವಾದಿಯ ಪ್ರಭಾವದಿಂದ ಬ್ರಹ್ಮಚರ್ಯ ಘೋಷಿಸಿಕೊಂಡು 1911ರಲ್ಲಿ ಟಿಳಕರನ್ನು ಭೇಟಿಯಾದರು. ಹರಿಹರ ರೈಲ್ವೆ ನಿಲ್ದಾಣ ಬಳಿಯ ...

READ MORE

Related Books