ಸೃಷ್ಟಿಯ ಸೆಲೆ

Author : ಆರ್. ಎಸ್. ರಾಜಾರಾಮ್

Pages 200

₹ 175.00




Phone: 080- 22161911

Synopsys

ಒಂದು ಪುಸ್ತಕವೆಂದರೆ ಬಿಳಿಯ ಹಾಳೆಯ ಮೇಲೆ ಅಚ್ಚು ಮಾಡಿದ ಅಕ್ಷರಗಳು ಮಾತ್ರವಲ್ಲ, ಪುಸ್ತಕಕ್ಕೆ ಒಂದು ಹೃದಯವಿದೆ. ಪುಸ್ತಕ ಮನುಷ್ಯನ ಅತ್ಯುತ್ತಮ ಸಂಗಾತಿಯಾಗಬಲ್ಲುದು, ಜ್ಞಾನ ಪ್ರಸಾರದ ಪರಿಣಾಮಕಾರಿ ಸಾಧನವೂ ಆಗಬಲ್ಲದು ಎಂಬ ತಿಳುವಳಿಕೆಯನ್ನು ರಾಜಾರಾಮ್ ಅವರು ಹೊಂದಿದ್ದಾರೆ. ಅವರು ನಡೆಸಿದ ವಿವಿಧ ಚಟುವಟಿಕೆಗಳ, ಎದುರಿಸಿದ ವಿವಿಧ ತೊಡಕುಗಳ ಮತ್ತು ಮಾಡಿದ ಸಾಧನೆಗಳ ಪರಿಚಯ ಈ ಕೃತಿಯಲ್ಲಿದೆ. ರಾಜಾರಾಮ್ ಅವರ ಬದುಕು ಮತ್ತು ಸಾಧನೆಯ ಕುರಿತು ಈ ಕೃತಿಯಲ್ಲಿ ನಿರೂಪಿಸಿದ್ದಾರೆ. ಕೆಲವು ತುಣುಕುಗಳನ್ನು ನಮ್ಮ ಮುಂದಿರಿಸಿ ರಾಜಾರಾಮ್ ಅವರ ಕಾರ್ಯಕ್ಷೇತ್ರದ ವ್ಯಾಪ್ತಿಯನ್ನು ಸಂಕ್ಷಿಪ್ತವಾಗಿ ಮತ್ತು ಸೊಗಸಾಗಿ ನಿರೂಪಿಸುವ ಹೊತ್ತಿಗೆ ಇದು. ಇಲ್ಲಿ ರಾಜಾರಾಮ್ ಕುರಿತಂತೆ ಅವರ ಕುಟುಂಬದ ವಿವಿಧ ಸದಸ್ಯರು ಬರೆದಿರುವ ವಿವಿಧ ಆತ್ಮೀಯ ಬರಹಗಳೂ ಇವೆ. ಜೊತೆಗೆ ಅವರ ಬದುಕನ್ನು ಕಟ್ಟಿಕೊಡುವ ಕೆಲವು ವರ್ಣಮಯ ಛಾಯಚಿತ್ರಗಳನ್ನೂ ಕೃತಿ ಹೊಂದಿದೆ. ತಮ್ಮ ಬಾಲ್ಯ, ಕಾಲೇಜು ಬದುಕು ಇತ್ಯಾದಿಗಳ ಜೊತೆಗೆ ನವಕರ್ನಾಟಕ ಪ್ರಕಾಶನ ಸ್ಥಾಪನೆಯ ಸವಾಲುಗಳು, ಅದು ಬೆಳೆದ ರೀತಿ ಎಲ್ಲವನ್ನು ಸಂಕ್ಷಿಪ್ತವಾಗಿ ಈ ಕೃತಿಯಲ್ಲಿ ರಾಜಾರಾಮ್ ಕಟ್ಟಿಕೊಟ್ಟಿದ್ದಾರೆ. ಅವರ ಬರಹ, ಚಿಂತನೆಗಳೂ ಈ ಕೃತಿಯಲ್ಲಿವೆ.

About the Author

ಆರ್. ಎಸ್. ರಾಜಾರಾಮ್

ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಕೊಡುಗೆ ನೀಡಿರುವ ಆರ್.ಎಸ್.ರಾಜಾರಾಮ್ ಅವರು ನವಕರ್ನಾಟಕ ಪ್ರಕಾಶನದ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ. ಇವರಿಗೆ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕಾರವು ದೊರೆತಿದೆ  ...

READ MORE

Related Books