ಕಾರ್ಲ್ ಯೂಂಗ್

Author : ಎಂ. ಬಸವಣ್ಣ

Pages 140

₹ 75.00




Year of Publication: 2011
Published by: ಅಭಿನವ ಪ್ರಕಾಶನ
Address: ಮೊದಲನೆಯ ಮುಖ್ಯರಸ್ತೆ, ಮಾರೇನಹಳ್ಳಿ, ವಿಜಯನಗರ, ಬೆಂಗಳೂರು-560040
Phone: 9448804905

Synopsys

ಹಿರಿಯ ಮನೋವಿಜ್ಞಾನಿ ಡಾ. ಎಂ.ಬಸವಣ್ಣ ಅವರ ‘ಕಾರ್ಲ್ ಯೂಂಗ್’ ಕೃತಿಯು ಕಾರ್ಲ್ ಯೂಂಗ್ ನ ಜೀವನ ಮತ್ತು ಕಾರ್ಯಗಳ ಕುರಿತ ಬರವಣಿಗೆಯಾಗಿದೆ. ಕೃತಿಯು 6 ಪರಿವಿಡಿಗಳನ್ನು ಒಳಗೊಂಡಿದ್ದು ಪ್ರವೇಶ, ವ್ಯಕ್ತಿತ್ವದ ರಚನೆ, ವ್ಯಕ್ತಿತ್ವದ ಕಾರ್ಯವಿಧಾನ, ವ್ಯಕ್ತಿತ್ವದ ವರ್ಗೀಕರಣ, ವ್ಯಕ್ತಿತ್ವವಿಕಾಸ-ಸ್ವಯಂಸಾಕ್ಷಾತ್ಕಾರ, ಯೂಂಗ್ ನ ಸಿದ್ದಾಂತಗಳ ವೈಜ್ಞಾನಿಕ ಹಿನ್ನಲೆ, ಅನುಬಂಧ-1; ಮನಶ್ಚಿಕಿತ್ಸಾ ವಿಧಾನ, ಅನುಬಂಧ-2; ಯೂಂಗ್ ನ ಸಿದ್ಧಾಂತಗಳಲ್ಲಿ ಧಾರ್ಮಿಕ, ಆಧ್ಯಾತ್ಮಿಕ ವಿಚಾರಗಳು, ಅನುಬಂಧ-3; ಸಿದ್ದಾಂತಗಳಲ್ಲಿ ವ್ಯಕ್ತಿನಿಷ್ಠ ವಿಷಯಗಳ ಪ್ರಕ್ಷೇಪಣೆಗಳು ಇದರಲ್ಲಿವೆ. ಈ ಕೃತಿಯು ಯೂಂಗ್ ನ ವಿಚಾರಧಾರೆಗಳನ್ನು ಪ್ರಸ್ತುತಪಡಿಸುತ್ತಾ ಯೂಂಗ್‌ನ ಪ್ರಭಾವ ಮನೋವಿಜ್ಞಾನದ ಮೇಲಷ್ಟೇ ಅಲ್ಲ, ಅದರ ಹೊರಗೂ ಆಗಿದೆ ಎನ್ನುತ್ತಾರೆ. ಸಿಗ್ಮಂಡ್ ಪ್ರಾಯ್ಡ್ ಮತ್ತು ಯೂಂಗ್ ಚಿಂತಕರ ವಿಚಾರಗಳ ನಂತರವೂ ಮನೋವೈಜ್ಞಾನಿಕ ಕ್ಷೇತ್ರ ವ್ಯಾಪಕವಾಗಿ ಬೆಳೆದಿದೆ. ಅವನ ಪ್ರಭಾವ ಮನೋವಿಜ್ಞಾನಿಗಳಿಗಿಂತ ಬೇರೆಯವರ ಮೇಲೆಯೇ ಹೆಚ್ಚಾಗಿ ಆಗಿರುವಂತೆ ಕಂಡುಬರುತ್ತದೆ. ಆಧುನಿಕ ಮಾನವಶಾಸ್ತ್ರಜ್ಞರು, ಇತಿಹಾಸಕಾರರು, ಸಮಾಜವಿಜ್ಞಾನಿಗಳು, ಧಾರ್ಮಿಕರು, ದಾರ್ಶನಿಕರು ಮತ್ತು ಸಾಹಿತಿಗಳು, ಯೂಂಗ್‌ನ ಪ್ರಭಾವ ತಮ್ಮ ಮೇಲೆ ಅಪಾರವಾಗಿ ಆಗಿದೆ ಎಂದು ಒಪ್ಪಿಕೊಂಡ ನಿದರ್ಶನಗಳಿವೆ. ಅವರಲ್ಲಿ ಅನೇಕರು ಯೂಂಗ್‌ನಿಂದ ಮಾನಸಿಕ ಸಲಹೆ ಪಡೆದದ್ದೂ ಇದೆ ಎನ್ನುತ್ತಾರೆ ಲೇಖಕರು. 

About the Author

ಎಂ. ಬಸವಣ್ಣ

ಎಂ.ಬಸವಣ್ಣ- ಹುಟ್ಟಿದ್ದು 1933, ಚಾಮರಾಜನಗರ ಜಿಲ್ಲೆಯ ಮಂಗಲ ಗ್ರಾಮದಲ್ಲಿ. ಮೈಸೂರು ವಿಶ್ವವಿದ್ಯಾನಿಲಯದಿಂದ ಪ್ರಾಯೋಗಿಕ ಮನಃಶಾಸ್ತ್ರದಲ್ಲಿ 1955ರಲ್ಲಿ ಎಂ.ಎ.ಪದವಿ. ಕ್ಲಿನಿಕಲ್ ಮನಃಶಾಸ್ತ್ರದಲ್ಲಿ ನಿಮ್ಯಾನ್ಸ್ ನಿಂದ 1958ರಲ್ಲಿ ಡಿಪ್ಲೊಮಾ. 1970ರಲ್ಲಿ ತಿರುಪತಿಯ ವೆಂಕಟೇಶ್ವರ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ. ಇದೇ ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕರಾಗಿ ಸೇರಿ 1993ರಲ್ಲಿ ಪ್ರಾಧ್ಯಾಪಕರಾಗಿ ವಿಶ್ರಾಂತರಾದರು. ತಮ್ಮ ಸಂಶೋಧನಾ ಲೇಖನಗಳನ್ನು ಪ್ರತಿಷ್ಠಿತ ಪತ್ರಿಕೆಗಳಲ್ಲಿ ಪ್ರಕಟಿಸಿದರು. ಅಧ್ಯಾಪಕ ವೃತ್ತಿಯನ್ನು ಪ್ರೀತಿಸುವ ಬಸವಣ್ಣನವರು ವ್ಯಕ್ತಿತ್ವ ವಿಕಾಸದ ಬಗ್ಗೆ ವಿಶೇಷ ಆಸಕ್ತಿಯನ್ನು ವಹಿಸಿ, ದೇಶದ ಉದ್ದಗಲಕ್ಕೂ ಉಪನ್ಯಾಸಗಳನ್ನು ಕಮ್ಮಟಗಳನ್ನು ನಡೆಸಿದ್ದಾರೆ. ಗುಲ್ಬರ್ಗಾ, ಕರ್ನಾಟಕ ಮತ್ತು ಬೆಂಗಳೂರು ವಿಶ್ವವಿದ್ಯಾಲಯಗಳಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ...

READ MORE

Related Books