ಕಿಂಗ್‌ ಮೇಕರ್‌ ಸಾಹುಕಾರ್‌ ಚೆನ್ನಯ್ಯ

Author : ಎಸ್.‌ ಪ್ರಕಾಶ್‌ ಬಾಬು

Pages 224

₹ 250.00




Year of Publication: 2021
Published by: ವಿಕಸನ ಪ್ರಕಾಶನ
Address: ವಿಜ್ಞಾತಂ ಭವನ, ಅದಿಚುಂಚನಗಿರಿ ವಿಶ್ವವಿದ್ಯಾಲಯ, ಬಿ.ಜಿ. ನಗರ, ನಾಗಮಂಗಲ ತಾಲೂಕು, ಮಂಡ್ಯ-571448.

Synopsys

‘ಕಿಂಗ್‌ ಮೇಕರ್‌ ಸಾಹುಕಾರ್‌ ಚೆನ್ನಯ್ಯ’  ಕೃತಿಯು ಜೀವನಚರಿತ್ರೆಯಾಗಿದೆ. ಲೇಖಕ ಎಸ್.ಪ್ರಕಾಶ್‌ ಬಾಬು ರಚಿಸಿದ್ದಾರೆ. ಈ ಕೃತಿಯಲ್ಲಿ ವರ್ಣರಂಜಿತ ರಾಜಕಾರಣಿ ಮತ್ತು ಉದ್ಯಮಿ, ನೈಝರ್‌ಬಾದ್ ನವಾಬ ಸಾಹುಕಾರ್‌ ಚೆನ್ನಯ್ಯ, ರಾಜಕಾರಣದ ಬೆಂಕಿ ನವಾಬ, ಉಮ್ಮಡಹಳ್ಳಿಯ ಸಾಹುಕಾರರು, ಮೈಸೂರಿಗೆ ವಾಸ್ತವ್ಯ ಬದಲಾವಣೆ, ಕೊಡುಗೈ ದಾನಿ, ವಿದ್ಯೆ ಕಡಿಮೆ ಜೀವನಾನುಭವ ಹೆಚ್ಚು, ರಾಜಕೀಯ ನಾಯಕರೊಂದಿಗೆ ಒಡನಾಟ, ವಿದ್ಯಾರ್ಥಿ ನಿಲಯಗಳ ಸ್ಥಾಪನೆಗೆ ನೆರವು, ಕಾಂಗ್ರೆಸ್‌ ಪಕ್ಷ ಸ್ಥಾಪನೆ, ರಾಜಕೀಯ ಒಲ್ಲದ ಸಾಹುಕಾರ್‌ ಚೆನ್ನಯ್ಯ, ಚೆನ್ನಯ್ಯರನ್ನು ರಾಜಕೀಯಕ್ಕೆ ತಂದ ಎಚ್.ಕೆ. ವೀರಣ್ಣಗೌಡ, ಐತಿಹಾಸಿಕ ಸಮಾವೇಶಕ್ಕೆ ತಯಾರಿ, ವಿಧುರಾಶ್ವತ್ಥದ ಹತ್ಯಾಕಾಂಡ, ಸಾಹುಕಾರ್‌ ಚೆನ್ನಯ್ಯರಿಗೆ ಹೆಚ್ಚಿದ ಕಿರುಕುಳ, ವಿಧುರಾಶ್ವತ್ಥ ಅಧಿವೇಶನ, ಡಿಫೆನ್ಸ್‌ ಆಫ್‌ ಇಂಡಿಯಾ ಕಾನೂನು, ಕಾನೂನು ಮಂತ್ರಿ ವಿರುದ್ಧವೇ ಮೊಕದ್ದಮೆ ದಾಖಲಿಸಿದ ಚೆನ್ನಯ್ಯ, ಕಸ್ತೂರ್‌ ಬಾ ನಿಧಿಗೆ ಕೊಡುಗೆ, ಏಕಮಾತ್ರ ಪುತ್ರಿ ವಿವಾಹ, ಸ್ವಾತಂತ್ರ್ಯದ ಸಾಕಾರ, ಕಿಂಗ್‌ ಮೇಕರ್‌ ಆದ ಸಾಹುಕಾರ ಚೆನ್ನಯ್ಯ, ಮುಖ್ಯಮಂತ್ರಿಯಾದ ಕೆಂಗಲ್‌, ಏಕೀಕರಣ ಬೆಂಬಲಿಸಿದ ಚೆನ್ನಯ್ಯ, ಕೆಂಗಲ್‌ ತಲೆದಂಡ, ನಂಬಿಸಿ ಬೆನ್ನಿಗಿರಿದರು, ಶಾರದಾ ವಿಲಾಸ ಮೇಷ್ಟ್ರಿಗೆ ಪಾಠ ಕಲಿಸಿದರು, ರಕ್ಷಣಾ ಮಂತ್ರಿ ಮಗಳ ಮದುವೆ ಮಾಡಿಸಿದರು ಮತ್ತು ನಿಜಲಿಂಗಪ್ಪರೊಂದಿಗೆ ಮುನಿಸು ಅಧ್ಯಾಯಗಳನ್ನು ಕೃತಿಯು ಒಳಗೊಂಡಿದೆ.

 

About the Author

ಎಸ್.‌ ಪ್ರಕಾಶ್‌ ಬಾಬು

ಲೇಖಕ ಎಸ್.‌ ಪ್ರಕಾಶ್‌ ಬಾಬು ಪತ್ರಕರ್ತರು. ಅವರು ಮೂಲತಃ ಮೈಸೂರಿನವರು.ಮುದ್ರಣ ಹಾಗೂ ವಿದ್ಯುನ್ಮಾನ ಮಾಧ್ಯಮಗಳಲ್ಲಿ ಕೆಲಸ ಮಾಡಿದ್ದಾರೆ. ತಮ್ಮದೇ 'ಮುಂಗಾರು ಪ್ರಕಾಶನ' ಸಂಸ್ಥೆ ಮೂಲಕ ಮೂರು ಪುಸ್ತಕಗಳನ್ನು ಹೊರತಂದಿದ್ದಾರೆ ಕಾದಂಬರಿ, ಕಥಾ ಸಂಕಲನ, ಆತ್ಮಕಥನ, ಅನುವಾದ, ವಿಜ್ಞಾನ, ವಾಣಿಜ್ಯ ಸಾಹಿತ್ಯ ರಚನೆಯಲ್ಲೂ ಆಸಕ್ತರು.  2017ರಲ್ಲಿ ಮೈಸೂರಿನಲ್ಲಿ ನಡೆದ 83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ವಸತಿ ಮತ್ತು ಸಾರಿಗೆ ಸಮಿತಿ ಸಂಚಾಲಕರಾಗಿದ್ದರು.  ಮೈಸೂರಿನ ಅವಧೂತ ದತ್ತಪೀಠದ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರ 75ನೇ ಜಯಂತಿ ಸಂದರ್ಭದಲ್ಲಿ 'ಸಚ್ಚಿದಾನಂದಶ್ರೀ' ಎಂಬ ಬೃಹತ್ ಗುರುವಂದನ ಗ್ರಂಥದ ಕಾರ್ಯನಿರ್ವಾಹಕ ಸಂಪಾದಕರಾಗಿದ್ದರು. ...

READ MORE

Related Books