ಅಪ್ಪು ಅಮರ

Author : ಸತೀಶಕುಮಾರ ಹೊಸಮನಿ

Pages 352

₹ 890.00
Year of Publication: 2022
Published by: ಕಾವ್ಯ ಸ್ಪಂದನ ಪಬ್ಲಿಕೇಷನ್,
Address: ಬೆಂಗಳೂರು

Synopsis

ಕನ್ನಡ ಚಲನಚಿತ್ರ ನಟ ಪುನೀತ್ ರಾಜಕುಮಾರ ಅವರ ಬದುಕು-ಸಾಧನೆ ಕುರಿತು ಬರೆದ ಕೃತಿ-ಅಪ್ಪು ಅಮರ. ಲೇಖಕ ಸತೀಶ ಕುಮಾರ ಹೋಸಮನಿ ರಚಿಸಿದ್ದಾರೆ. ‘ಅಪ್ಪು’ ಎಂದೇ ಅಭಿಮಾನಿ ಬಳಗದಲ್ಲಿ ಖ್ಯಾತಿ ಪಡೆದಿದ್ದ ಪುನೀತ್ ರಾಜಕುಮಾರ್, ಮಧ್ಯ ವಯಸ್ಸಿನಲ್ಲಿ ಹೃದಯಾಘಾತಕ್ಕೆ ಒಳಗಾಗಿದ್ದು, ಅಭಿಮಾನಿಗಳಲ್ಲಿ ಆಘಾತ ಮೂಡಿಸಿದೆ. ಅವರು ನಟನೆ ಮಾತ್ರವಲ್ಲ, ಅನಾಥ-ವೃದ್ಧರ ಸೇವೆಯಲ್ಲಿ ಆಸಕ್ತರು. ಹೀಗಾಗಿ, ಅವರ ಆಶ್ರಯಕ್ಕಾಗಿ ಕೇಂದ್ರವನ್ನು ತೆರೆದು ಸಮಾಜಕ್ಕೆ ಮಾದರಿ ಎನಿಸಿದ್ದು, ಜನರಲ್ಲಿ ಅಭಿಮಾನ ಹೆಚ್ಚಿಸಲು ಕಾರಣವಾಗಿತ್ತು. ನಡೆ-ನುಡಿಯಿಂದಲೂ ತಮ್ಮದೇ ವ್ಯಕ್ತಿತ್ವದ ಛಾಪು ಮೂಡಿಸಿದ್ದ ಅವರು ಜನಾನುರಾಗಿಯಾಗಿದ್ದರ ಬಗ್ಗಯೂ ಈ ಕೃತಿಯಲ್ಲಿ ಲೇಖಕರು ವಿವರಿಸಿದ್ದಾರೆ.

About the Author

ಸತೀಶಕುಮಾರ ಹೊಸಮನಿ

ಸತೀಶಕುಮಾರ ಹೊಸಮನಿ ಅವರು ಗ್ರಂಥಾಲಯ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈಗಾಗಲೇ ಹತ್ತಕ್ಕೂ ಹೆಚ್ಚು ಕೃತಿಗಳನ್ನು ಸಾಹಿತ್ಯ ಲೋಕಕ್ಕೆ ನೀಡಿದ್ದಾರೆ. ಪ್ರವಾಸಕಥನ, ಕಾವ್ಯ, ಗ್ರಂಥಾಲಯ ಮಾಹಿತಿ ಹೊಂದಿದ ಅನೇಕ ಕೃತಿಗಳು ಆಕರಗಳಾಗಿವೆ. ಹತ್ತು ಹಲವು ಸಂಘ ಸಂಸ್ಥೆಗಳು ಇವರಿಗೆ ಐವತ್ತಕ್ಕೂ ಹೆಚ್ಚು ಪ್ರಶಸ್ತಿ ಗೌರವ ನೀಡಿವೆ. ಕಲ್ಯಾಣ ಪ್ರಭೆ ಎಂಬ ಅಭಿನಂದನ ಗ್ರಂಥ ಅರ್ಪಿಸಲಾಗಿದೆ. ...

READ MORE

Related Books