ಡಾ. ಬಿ.ಆರ್. ಅಂಬೇಡ್ಕರ್ ಹೆಜ್ಜೆಗಳು

Author : ಕೆ.ಪಿ. ಮಹಾಲಿಂಗು ಕಲ್ಕುಂದ

Pages 312

₹ 300.00




Year of Publication: 2019
Published by: ಚಳವಳಿ ಪ್ರಕಾಶನ
Address: ಬೆಂಗಳೂರು

Synopsys

ಭಾರತದ ಸಂವಿಧಾನ ಬರೆದ ಡಾ. ಬಿ.ಆರ್. ಅಂಬೇಡ್ಕರ್ ಅವರ ಜೀವನಗಾಥೆಯ ಪ್ರಮುಖ ಹೆಜ್ಜೆಗಳನ್ನುಲೇಖಕ ಕೆ.ಪಿ. ಮಹಾಲಿಂಗು ಕಲ್ಕುಂದ ಅವರು ದಾಖಲಿಸಿದ ಕೃತಿ ಇದು. ಜಾತಿ ಶ್ರೇಣೀಕೃತ ವ್ಯವಸ್ಥೆಯಲ್ಲಿ ಅತ್ಯಂತ ಕೆಳಜಾತಿಯಿಂದ ಬಂದಿದ್ದ ಅವರು ತಮ್ಮ ಸ್ವಂತ ಬೌದ್ಧಿಕ ಸಾಮರ್ಥ್ಯದಿಂದ ಸಾಧನೆಯ ಶಿಖರವೇರಿದ ಧೀರ. ಶೈಕ್ಷಣಿಕ ಸಾಧನೆ ಮಾತ್ರವಲ್ಲ ಸಾಮಾಜಿಕ ಚಳವಳಿ, ದಲಿತ ಜಾಗೃತಿ ಚಳವಳಿ ಸೇರಿದಂತೆ ಸಂವಿಧಾನ ರಚನೆಯಂಥಹ ಮಹತ್ವದ ಹೊಣೆಗಾರಿಕೆ ನಿರ್ವಹಿಸಿದ ರೀತಿ, ಭಾರತ ಪ್ರೇಮ, ಮಾನವೀಯತೆ ಇತ್ಯಾದಿ ಕುರಿತು ಅವರ ಚಿಂತನೆಗಳನ್ನು ಬಿಂಬಿಸುವ ಕೃತಿ ಇದು.

About the Author

ಕೆ.ಪಿ. ಮಹಾಲಿಂಗು ಕಲ್ಕುಂದ

ಲೇಖಕ ಡಾ. ಕೆ.ಪಿ. ಮಹಾಲಿಂಗು ಕಲ್ಕುಂದ ಅವರು ಮೂಲತಃ ಮೈಸೂರಿನ ನಂಜನಗೂಡು ತಾಲ್ಲೂಕಿನ ಕಲ್ಕುಂದ ಗ್ರಾಮದವರು. ಚಳವಳಿಯ ಹಿನ್ನೆಲೆಯಿಂದ ಬಂದ ಇವರು ರಾಗ-ದ್ವೇಷದ ನೆಲೆಗಟ್ಟಿನಿಂದ ಮೇಲೆದ್ದು, ಬುದ್ಧಿಯ ಚುರುಕಿನಿಂದ ವಿವೇಕದ ಹಾದಿಯಲ್ಲಿ ನಡೆದವರು. ದಸಂಸ ನಾಯಕತ್ವ ವಹಿಸಿಕೊಂಡು ಅಸತ್ಯತೆಯನ್ನು ಹರಿತ ನಾಲಿಗೆಯಿಂದ ಖಂಡಿಸಿದ ವ್ಯಕ್ತಿ. ಇವರ ಸಂಶೋಧನಾ ವಿಷಯವೂ ಕೂಡ ಚಳವಳಿ ಕುರಿತಾದ ಅಧ್ಯಯನವೇ. ಇವರ ನಾರಾಯಣ ಗುರುಗಳ ವೈಚಾರಿಕತೆ ಕುರಿತ “ಒಂದೇ ಜಾತಿ-ಒಂದೇ ಧರ್ಮ-ಒಂದೇ ದೇವರು” ಎಂಬ ಕೃತಿಯು ನಾರಾಯಣ ಗುರುಗಳ ಆಧ್ಯಾತ್ಮಿಕ ಚಿಂತನೆಗಳನ್ನು ಸಮರ್ಪಕವಾಗಿ ಬಿಂಬಿಸುತ್ತದೆ. ...

READ MORE

Related Books