ಜನಪದ ನಾಯಕ ಡಾ. ರಾಜಕುಮಾರ

Author : ಬರಗೂರು ರಾಮಚಂದ್ರಪ್ಪ

Pages 132

₹ 160.00




Year of Publication: 2018
Published by: ಜನ ಪ್ರಕಾಶನ
Address: ಜನ ಪ್ರಕಾಶನ, 54, ಭೈರಯ್ಯ ನಿವಾಸ, 11ನೇ ಮೈನ್, 14ನೇ ಕ್ರಾಸ್, 5ನೇ ಬ್ಲಾಕ್, ಜಯನಗರ, ಬೆಂಗಳೂರು-560041
Phone: 94483 24727

Synopsys

ಕನ್ನಡದ ವರನಟ ಎಂದೇ ಖ್ಯಾತಿಯ ಡಾ. ರಾಜಕುಮಾರ ಅವರ ಬದುಕು-ಸಾಧನೆ ಕುರಿತು ಬರೆದ ಕೃತಿ-ಜನಪದ ನಾಯಕ ಡಾ. ರಾಜಕುಮಾರ. ಪ್ರೊ. ಬರಗೂರು ರಾಮಚಂದ್ರಪ್ಪ ಅವರು ರಚಿಸಿದ್ದು, ಇಲ್ಲಿ ಡಾ. ರಾಜಕುಮಾರ ಅವರ ಕನ್ನಡ ಚಲನಚಿತ್ರದೆಡೆಗೆ ಇರುವ ಬದ್ಧತೆ, ರಾಜಕೀಯಕ್ಕೆ ಇಳಿಯದ ಸಂಕಲ್ಪ ಇತ್ಯಾದಿ ಮಹತ್ವದ ಸಂಗತಿಗಳ ಮೇಲೆ ಕುತೂಹಲ ಕೆರಳಿಸುವ ಅಂಶಗಳನ್ನು ಈ ಕೃತಿ ಒಳಗೊಂಡಿದೆ.

ಕೃತಿಯು ಜನಪದ ನಾಯಕ ಡಾ.ರಾಜಕುಮಾರ್, ಬೆವರಿನ ಮನುಷ್ಯ ಡಾ. ರಾಜಕುಮಾರ್, ಡಾ. ರಾಜಕುಮಾರ್ ಜನರಿಗೆ ಕೊಟ್ಟಿದ್ದೇನು?, ವೃತ್ತಿ ಬಾಂಧವರೊಂದಿಗೆ ಡಾ. ರಾಜಕುಮಾರ್, ನಾನು, ನನ್ನ ಕುಟುಂಬ ಮತ್ತು ಡಾ. ರಾಜಕುಮಾರ್ ವಿಚಾರಗಳ ಕುರಿತು ಮಾತನಾಡುತ್ತದೆ. ಇಲ್ಲಿ ಲೇಖಕ ಬರಗೂರು ರಾಮಚಂದ್ರಪ್ಪ ಅವರು ರಾಜಕುಮಾರ್ ಅವರ ವ್ಯಕ್ತಿತ್ವ ಮತ್ತು ಸಾಧನೆಗಳನ್ನು ಸಾಧಾರವಾಗಿ ಚಿತ್ರಿಸಿದ್ದಾರೆ. 

About the Author

ಬರಗೂರು ರಾಮಚಂದ್ರಪ್ಪ
(18 October 1946)

ಬಂಡಾಯ ಸಾಹಿತ್ಯ ಚಳವಳಿಯ ಪ್ರಮುಖ ಲೇಖಕ ಬರಗೂರು ರಾಮಚಂದ್ರಪ್ಪ ಅವರು ಕತೆ-ಕಾದಂಬರಿ-ಕಾವ್ಯಗಳಂತಹ ಸೃಜನಶೀಲ ಕೃತಿಗಳ ಜೊತೆಗೆ ಚಿಂತನ ಪರ ಬರಹ, ವಿಮರ್ಶೆಗಳ ಮೂಲಕ ಹೆಸರಾದವರು. ರಾಮಚಂದ್ರಪ್ಪ ಅವರು 1946ರ ವರ್ಷದ ಅಕ್ಟೋಬರ್ 18ರಂದು ತುಮಕೂರು ಜಿಲ್ಲೆಯ ಬರಗೂರು ಗ್ರಾಮದಲ್ಲಿ ಜನಿಸಿದರು. ಇವರ ತಾಯಿ ಕೆಂಚಮ್ಮ, ತಂದೆ ರಂಗದಾಸಪ್ಪ. ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದ ಪ್ರಾಧ್ಯಾಪಕ, ನಿರ್ದೇಶಕ ಆಗಿದ್ದರು. ಸಾಹಿತ್ಯದಷ್ಟೇ ಸಿನಿಮಾವನ್ನು ಗಾಢವಾಗಿ ಪ್ರೀತಿಸುವ ಅವರು ಸಿನಿಮಾದ ಕಮರ್ಷಿಯಲ್ ಸೂತ್ರಗಳಿಗೆ ಜೋತು ಬೀಳದೆ ಅಲ್ಲೂ ವಿಭಿನ್ನ ಹಾದಿ ಹಿಡಿದವರು. ಆಡಳಿಗಾರರಾಗಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷತೆ, ಕನ್ನಡ ...

READ MORE

Related Books