ಎಸ್. ಸದಾನಂದ

Author : ಕೃಷ್ಣಮೂರ್ತಿ ನಾಡಿಗ

Pages 120

₹ 15.00




Year of Publication: 1980
Published by: ರಾಷ್ಟ್ರೋತ್ಥಾನ ಸಾಹಿತ್ಯ
Address: ಕೇಶವ ಶಿಲ್ಪ, ಕೆಂಪೇಗೌಡ ನಗರ, ಬೆಂಗಳೂರು-560019.
Phone: 9945036300

Synopsys

ಎಸ್. ಸದಾನಂದ ಜೀವನಚರಿತ್ರೆ ಪುಸ್ತಕವನ್ನು ಲೇಖಕ ನಾಡಿಗ ಕೃಷ್ಣಮೂರ್ತಿ ಅವರು ರಚಿಸಿದ್ದಾರೆ. ಈ ಕೃತಿಯಲ್ಲಿ ಗುಲಾಗಿರಿಯಲ್ಲಿ ನರಳುತ್ತಿದ್ದ ಭಾರತದಲ್ಲಿ ನಿಜವಾಗಿ ಆಗುತ್ತಿದ್ದುದೇನು ಎಂಬುದನ್ನೂ ಸ್ವಾತಂತ್ರ್ಯ ಹೋರಾಟದ ಧೈರ್ಯ ಸಾಧನೆಗಳನ್ನೂ ಹೊರಗಿನ ಜಗತ್ತಿಗೆ ತಿಳಿಸಲು ಹೋರಾಡಿದ ಸಾಹಸಿ ಪತ್ರಿಕೋದ್ಯಮಿ. ಇದಕ್ಕಾಗಿ ಸರ್ಕಾರದ ವಿರೋಧವನ್ನೂ ಲಕ್ಷಿಸದೆ ವಾರ್ತಾಸಂಸ್ಥೆಯನ್ನು ಪ್ರಾರಂಭಿಸಿದ. ಆತ್ಮಗೌರವ, ನಿರ್ಭಯ ಪ್ರಾಮಾಣಿಕತೆಗಳಿಂದ ಭಾರತೀಯ ಪತ್ರಿಕೋದ್ಯಮಕ್ಕೆ ಗೌರವ ತಂದ ಧೀರ ಎಂದು ಸದಾನಂದ ಅವರ ಕುರಿತಾಗಿ ಇಲ್ಲಿ ವಿರಿಸಲಾಗಿದೆ. ಇಲ್ಲಿ ಅವರ ಬಾಲ್ಯ ಜೀವನ, ಬದುಕಿನ ತಿರುವುಗಳು, ಪತ್ರಿಕೋದ್ಯ ಬದುಕು ಹೀಗೆ ಅವರ ಜೀವನದ ವಿವಿಧ ಭಾಗಗಳನ್ನು ಲೇಖಕರು ಈ ಪುಸ್ತಕದಲ್ಲಿ ಸುಂದರವಾಗಿ ಚಿತ್ರಿಸಿದ್ದಾರೆ.

About the Author

ಕೃಷ್ಣಮೂರ್ತಿ ನಾಡಿಗ

ಶಿವಮೊಗ್ಗಾ ಜಿಲ್ಲೆಯ ಅನವಟ್ಟಿ ಗ್ರಾಮದಲ್ಲಿ (ಜನನ: 1921) ಡಾ.ನಾಡಿಗ ಕೃಷ್ಣಮೂರ್ತಿ ಜನಿಸಿದರು.ತಂದೆ ನರಸಿಂಗರಾವ್ ನಾಡಿಗ, ತಾಯಿ ಕಮಲಾಬಾಯಿ. ಪ್ರಾಥಮಿಕ ಮತ್ತು ಮಾಧ್ಯಮಿಕ ವಿದ್ಯಾಭ್ಯಾಸ ಆನವಟ್ಟಿಯಲ್ಲಿ. ಶಿವಮೊಗ್ಗದಲ್ಲಿ ಪ್ರೌಢಶಾಲಾ ವಿದ್ಯಾಭ್ಯಾಸ. ನಂತರ ಕಾಲೇಜಿಗೆ ಸೇರಿದರು. ಅಮೇರಿಕಾದ ಮಿಸ್ಸೋರಿಯಲ್ಲಿ ಪತ್ರಿಕೋದ್ಯಮ ಶಿಕ್ಷಣ ನಂತರ ಅವರು ಮೈಸೂರಿನ ಮಹಾರಾಜಾ ಕಾಲೇಜಿನಲ್ಲಿ ಪತ್ರಿಕೋದ್ಯಮ ವಿಭಾಗದಲ್ಲಿ ಪ್ರವಾಚಕರಾದರು. ‘ಪತ್ರಿಕೋದ್ಯಮದ ಹುಟ್ಟು,ಬೆಳವಣಿಗೆ ಮತ್ತು ಅಭಿವೃದ್ಧಿ’ ಪ್ರೌಢ ಪ್ರಬಂಧವನ್ನು ಸಲ್ಲಿಸಿ ಡಾಕ್ಟರೇಟ್ ಪಡೆದರು. ವಿದೇಶಿ ವಿದ್ಯಾಲಯಗಳಿಗೆ ಅವರು ಸಂದರ್ಶಕ ಅಧ್ಯಾಪಕರಾಗಿ ಅನೇಕ ಉಪನ್ಯಾಸಗಳನ್ನು ಮಾಡಿದ್ದಾರೆ.  ‘ಮಾನಸ ಗಂಗೋತ್ರಿ’ ಸಂಪಾದಿಸುತ್ತಿದ್ದ ಪ್ರಾಯೋಗಿಕ ಪತ್ರಿಕೆ. ಕರ್ನಾಟಕ ಪತ್ರಿಕಾ ಅಕಾಡೆಮಿಗೆ ಪ್ರಥಮ ...

READ MORE

Related Books