ತ್ಯಾಗೀಶಾನಂದರು

Author : ಪ್ರಭುಶಂಕರ

Pages 120

₹ 15.00




Year of Publication: 1980
Published by: ರಾಷ್ಟ್ರೋತ್ಥಾನ ಸಾಹಿತ್ಯ
Address: ಕೇಶವ ಶಿಲ್ಪ, ಕೆಂಪೇಗೌಡ ನಗರ, ಬೆಂಗಳೂರು-560019.
Phone: 9945036300

Synopsys

ತ್ಯಾಗೀಶಾನಂದರು ಜೀವನಚರಿತ್ರೆ ಪುಸ್ತಕವನ್ನು ಲೇಖಕ ಪ್ರಭುಶಂಕರ ಅವರು ರಚಿಸಿದ್ದಾರೆ. ರಾಮಕೃಷ್ಣ ಮಹಾ ಸಂಘದ ಹಿರಿಯ ಸನ್ಯಾಸಿಗಳು. ತಮಗಾಗಿ ಏನನ್ನೂ ಬಯಸದೆ ಇತರರಿಗಾಗಿ ಬದುಕಿದರು. ಹರಿಜನರು, ವಿದ್ಯಾರ್ಥಿಗಳು, ದುಃಖಿತರು ಇವರ ಸೇವೆಯಲ್ಲಿ ಜೀವನವನ್ನು ಸವೆಸಿದರು ಎಂದು ತ್ಯಾಗೀಶಾನಂದರ ಕುರಿತಾಗಿ ವಿವರಿಸಲಾಗಿದೆ. ಇಲ್ಲಿ ಅವರ ಬಾಲ್ಯ ಜೀವನ, ರಾಮಕೃಷ್ಣ ಮಹಾಸಂಘಕ್ಕೆ ಸೇರಿದ ಬಗೆ, ಸನ್ಯಾಸತ್ವ ಸ್ವೀಕರಿಸಿದ ಬಗೆ, ಸಾಮನ್ಯ ಜನೊರೊಂದಿಗೆ ಹೊಂದಿದ ಅವಿನಾಭಾವ ಸಂಬಂಧ ಹೀಗೆ ಅವರ ಬದುಕಿನ ಅಮೂಲ್ಯ ಘಟ್ಟಗಳನ್ನು ಲೇಖಕರು ಚಿತ್ರಿಸಿದ್ದಾರೆ.

About the Author

ಪ್ರಭುಶಂಕರ
(15 February 1929)

ಬರಹಗಾರರಾದ ಪ್ರಭುಶಂಕರ ಅವರು ಜನಿಸಿದ್ದು 1929  ಫೆಬ್ರುವರಿ 15ರಂದು. ಮೈಸೂರು ವಿಶ್ವವಿದ್ಯಾಲಯದಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿರುವ ಇವರು ಕುವೆಂಪು ಅವರ ಮಾರ್ಗದರ್ಶನದಲ್ಲಿ ‘ಕನ್ನಡದಲ್ಲಿ ಭಾವಗೀತೆ’ ಪ್ರಬಂಧ ಮಂಡಿಸಿ ಪಿಎಚ್‌ಡಿ ಪದವಿ ಪಡೆದರು.  ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡಿದ್ದ ಇವರು  ಅಮೆರಿಕ ಭೇಟಿಯ ಕುರಿತು ’ಅಮೆರಿಕಾದಲ್ಲಿ ನಾನು ಮತ್ತು ಶಾಂತಿ’ ಎಂಬ ಪ್ರವಾಸ ಕಥನ ರಚಿಸಿದ್ದಾರೆ. ಅವರ ಕೆಲವು ಕೃತಿಗಳು- ಕನ್ನಡದಲ್ಲಿ ಭಾವಗೀತೆ, ಅಂಗುಲೀಮಾಲ, ಆಮ್ರಪಾಲಿ, ಖಲೀಲ್ ಗಿಬ್ರಾನ್, ಕಾವ್ಯಯೋಗ, ಅಮೆರಿಕದಲ್ಲಿ ನಾನು ಶಾಂತಿ, ನಿವೇದಿತಾ, ಜನ-ಮನ, ಚಿಂತೆ-ಚಿಂತನೆ, ಮಂದಹಾಸ ಮೀಮಾಂಸೆ ಇತ್ಯಾದಿ.  ...

READ MORE

Related Books