ಕನ್ನಡ ವಿಜ್ಞಾನ ಸಾಹಿತ್ಯದ ದ್ರೋಣಾಚಾರ್ಯ ಆರ್. ಎಲ್ ನರಸಿಂಹಯ್ಯ - ಬದುಕು - ಬರಹ

Author : ಟಿ. ಆರ್. ಅನಂತರಾಮು

Pages 580




Year of Publication: 2017
Published by: ಪ್ರಸಾರಾಂಗ, ಮೈಸೂರು ವಿಶ್ವವಿದ್ಯಾನಿಲಯ
Address: ಮಾನಸ ಗಂಗೋತ್ರಿ ಕರ್ನಾಟಕ 570009

Synopsys

ಕನ್ನಡದಲ್ಲಿ ವಿಜ್ಞಾನ ಸಾಹಿತ್ಯ ಕೃತಿಗಳು ಪ್ರಕಟವಾಗಬೇಕೆಂಬ ಒತ್ತಾಯ ಹಲವು ದಶಕಗಳಿಂದಲೂ ಕೇಳಿ ಬರುತ್ತಿದೆ, ಈ ಕೊರತೆಯನ್ನು ನೀಗಿಸಲು ಅಪಾರ ಕೊಡುಗೆ ನೀಡಿದ ದಿವಂಗತ ಆರ್.ಎಲ್. ನರಸಿಂಹಯ್ಯನವರ ಸಾಧನೆ ಚಿರಸ್ಕರಣೀಯವಾದದ್ದು .ಸೆಂಟ್ರಲ್ ಕಾಲೇಜಿನ ಫಿಸಿಕ್ಸ್ ವಿಭಾಗದಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದ ಮೊ, ಆರ್. ಎಲ್. ನರಸಿಂಹಯ್ಯನವರು ಜನಸಾಮಾನ್ಯರಿಗೂ ವಿಜ್ಞಾನ ಕ್ಷೇತ್ರದ ಸಂಶೋಧನೆಗಳು ಅರಿವಿಗೆ ಬರಲೆಂಬ ಸದುದ್ದೇಶದಿಂದ ಕನ್ನಡದಲ್ಲಿ ವಿಜ್ಞಾನ ಲೇಖನಗಳನ್ನು ಬರೆದು ಕನ್ನಡಪರ ಕಾಳಜಿಯನ್ನು ಮೆರೆದಂತಹ ಹಿರಿಯ ವಿದ್ವಾಂಸರು, ಕನ್ನಡ ವಿಜ್ಞಾನ ಸಾಹಿತ್ಯದ ದ್ರೋಣಾಚಾರ್ಯರೆಂದೇ ಅವರನ್ನು ಕರೆದರೆ, ಅದರಲ್ಲಿ ಯಾವ ಅತಿಶಯೋಕ್ತಿಯೂ ಇಲ್ಲ. ಇಂತಹ ಮಹನೀಯರ ಜೀವನ ಮತ್ತು ಸಾಧನೆಯನ್ನು ಕುರಿತಂತೆ ಡಾ. ಟಿ.ಆರ್. ಅನಂತರಾಮು ಅವರು ಈ ಕೃತಿಯನ್ನು ರಚಿಸಿದ್ದಾರೆ.

About the Author

ಟಿ. ಆರ್. ಅನಂತರಾಮು
(03 August 1949)

ಭೂ ವಿಜ್ಞಾನಿ, ಸಂಶೋಧಕ, ಅಂಕಣಕಾರ, ವಿಜ್ಞಾನ ಲೇಖಕ ಟಿ.ಆರ್. ಅನಂತರಾಮು ಅವರು ಜನಿಸಿದ್ದು 1949 ಆಗಸ್ಟ್ 3ರಂದು ತುಮಕೂರು ಜಿಲ್ಲೆ ಶಿರಾ ತಾಲ್ಲೂಕಿನ ತಾಳಗುಂದದಲ್ಲಿ.ತಾಳಗುಂದ ರಾಮಣ್ಣ ಅನಂತರಾಮು ಅವರ ಪೂರ್ಣ ಹೆಸರು. ಸಿರಾದ ಸರ್ಕಾರಿ ಮಾಧ್ಯಮಿಕ ಶಾಲೆಯಲ್ಲಿ ಮಾಧ್ಯಮಿಕ ಶಿಕ್ಷಣ ಪೂರ್ಣಗೊಳಿಸಿದ ಅವರು ಸಿರಾದ ಮುನಿಸಿಪಲ್ ಹೈಸ್ಕೂಲಿನಲ್ಲಿ ಪ್ರೌಢಶಿಕ್ಷಣ ಪೂರ್ಣಗೊಳಿಸಿದ್ದಾರೆ. ಆನಂತರ ತುಮಕೂರಿನ ಸರ್ಕಾರಿ ಕಾಲೇಜಿನಲ್ಲಿ ಪದವಿ, ಮೈಸೂರು ವಿಶ್ವವಿದ್ಯಾಲಯದಲ್ಲಿ ಎಂ.ಎನ್ಸಿ(ಜಿಯಾಲಜಿ) ಪದವಿ ಪಡೆದಿದ್ದಾರೆ.  ಭೂ ವಿಜ್ಞಾನ ವಿಷಯದಲ್ಲಿ ಪದವಿ ಪಡೆದ ನಂತನ ಬೆಂಗಳೂರಿನ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ, ರಾಜ್ಯದ ನಾನಾ ಕಾಲೇಜುಗಳಲ್ಲಿ ಅಧ್ಯಾಪಕರಾಗಿ ಕೆಲಸ ಮಾಡಿದ್ದಾರೆ.  ...

READ MORE

Related Books