ಸಿದ್ದವನಹಳ್ಳಿ ಕೃಷ್ಣಶರ್ಮ ವ್ಯಕ್ತಿ- ಶಕ್ತಿ

Author : ನೀಲತ್ತಹಳ್ಳಿ ಕಸ್ತೂರಿ

Pages 252

₹ 10.00




Year of Publication: 1976
Published by: ಗಾಂಧೀ ಸಾಹಿತ್ಯ ಸಂಘ
Address: ಮಲ್ಲೇಶ್ವರ, ಬೆಂಗಳೂರು- 560003

Synopsys

‘ಸಿದ್ದವನಹಳ್ಳಿ ಕೃಷ್ಣಶರ್ಮ’ ವ್ಯಕ್ತಿ- ಶಕ್ತಿ- ಸಾಹಿತ್ಯ, ಪತ್ರಿಕೋದ್ಯಮ ಹಾಗೂ ಸಾರ್ವಜನಿಕ ಜೀವನದಲ್ಲಿ ಸುಮಾರು ನಾಲ್ಕು ದಶಕಗಳ ಕಾಲ ಸಿದ್ಧಹಸ್ತರಾಗಿಯೂ ಶುದ್ಧ ಹಸ್ತರಾಗಿಯೂ ಕಾರ್ಯನಿರ್ವಹಿಸಿದ ದಿ. ಸಿದ್ದವನಹಳ್ಳಿ ಕೃಷ್ಣಶರ್ಮ ಅವರ ಜೀವನ ಚರಿತ್ರೆ. ಈ ಕೃತಿಯನ್ನು ನೀಲತ್ತಳ್ಳಿ ಕಸ್ತೂರಿ ಅವರು ರಚಿಸಿದ್ದಾರೆ. ಸೇವೆ, ತ್ಯಾಗ, ಪ್ರತಿಭೆಗಳ ಸಂಗಮ, ನಡೆ ನುಡಿಗಳ ಸಮನ್ವಯ, ಸರಳತೆಯ ಸಾಕಾರಮೂರ್ತಿ, ಸಾಹಿತ್ಯ, ಸರ್ವೋದಯ, ಪತ್ರಿಕಾವೃತ್ತಿ, ಸಂಘಟನೆ, ಸ್ವಾತಂತ್ರ್ಯ, ಹೋರಾಟ, ರಚನಾತ್ಮಕ ಕಾರ್ಯ, ಭಾಷಣ ಕಲೆಗಳ ಸೀಮಾಪುರುಷ, ಸದಾಚಾರ ಸದ್ವಿಚಾರಗಳ ಪ್ರಚೋದಕ ಶ್ರೀ ಸಿದ್ದವನಹಳ್ಳಿ ಕೃಷ್ಣಶರ್ಮರ ಸಮಗ್ರ ಜೀವನ ಚರಿತ್ರೆ ಇದಾಗಿದೆ. ಶರ್ಮರು ಹುಟ್ಟಿದ, ಬೆಳೆದ, ಬೆಳಗಿದ ಸ್ಥಳಗಳಿಗೆ ಹೋಗಿ, ಅವರ ಒಡನಾಡಿಗಳನ್ನು, ಬಂಧುಗಳನ್ನು, ಶಿಷ್ಯರನ್ನು ಕಂಡು, ವಿಷಯ ಸಂಗ್ರಹಿಸಿ, ರಚಿತವಾದ ಆಧಾರ ಪೂರ್ಣ ಕೃತಿ ಸಿದ್ದವನಹಳ್ಳಿ ಕೃಷ್ಣಶರ್ಮ ವ್ಯಕ್ತಿ-ಶಕ್ತಿ.

About the Author

ನೀಲತ್ತಹಳ್ಳಿ ಕಸ್ತೂರಿ
(29 September 1931)

ನೀಲತ್ತಹಳ್ಳಿ ಕಸ್ತೂರಿಯವರು ಮಾಗಡಿಯಲ್ಲಿ ಸೆಪ್ಟೆಂಬರ್ 29, 1931ರಂದು ಜನಿಸಿದರು. ತಂದೆ ವೆಂಕಟಾಚಾರ್ಯ, ತಾಯಿ ಸೀತಮ್ಮ. ಅಂಚೆ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ಅವರಿಗೆ ಸಾಹಿತ್ಯದಲ್ಲಿ ವಿಶೇಷ ಆಸಕ್ತಿ. ಅವರೊಬ್ಬ ಉತ್ತಮ ಅನುವಾದಕರು. ಚೀನಾ ಜಪಾನ್ ಕತೆಗಳು (ಅನುವಾದ) (ಕಾದಂಬರಿ), ಇದು ಭಾರತದ ದಾರಿ (ನಾಟಕ) ರಾಜೇಂದ್ರ ಪ್ರಸಾದ್, ಡಿ.ವಿ. ಗುಂಡಪ್ಪ ಜೀವನ ಮತ್ತು ಸಾಧನೆ, ಸಿದ್ಧವನಹಳ್ಳಿ ಕೃಷ್ಣಶರ್ಮ - ವ್ಯಕ್ತಿ ಮತ್ತು ಶಕ್ತಿ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ ಸಂದಿದೆ. ...

READ MORE

Related Books