ಸಿ.ಜಿ. ಕೃಷ್ಣಸ್ವಾಮಿ

Author : ಲಿಂಗದೇವರು ಹಳೆಮನೆ

Pages 104

₹ 40.00




Year of Publication: 2004
Published by: ಕರ್ನಾಟಕ ನಾಟಕ ಅಕಾಡೆಮಿ
Address: ಕನ್ನಡ ಭವನ, ಜೆ.ಸಿ. ರಸ್ತೆ, ಬೆಂಗಳೂರು
Phone: 08022237484

Synopsys

ಆಧುನಿಕ ಕನ್ನಡ ರಂಗಭೂಮಿಯ ಖ್ಯಾತ ರಂಗ ನಿರ್ದೇಶಕ ಸಿ.ಜಿ.ಕೆ. (ಸಿ.ಜಿ. ಕೃಷ್ಣಸ್ವಾಮಿ). ರಂಗಸಂಘಟಕರಾಗಿ, ರಂಗ ನಿರ್ದೇಶಕರಾಗಿ, ಬೆಳಕಿನ ವಿನ್ಯಾಸಕಾರರಾಗಿ ಹಾಗೂ ಪ್ರಗತಿಪರ ಚಿಂತಕರಾಗಿ ವಿಶಿಷ್ಟ ಸ್ಥಾನ- ಮಾನ ಗಳಿಸಿಕೊಂಡಿದ್ದಾರೆ. ಯಾವುದೇ ಶಾಸ್ತ್ರೀಯ ರಂಗ ತರಬೇತಿ, ಔಪಚಾರಿಕ ಅಧ್ಯಯನ ಇಲ್ಲದೆ, ಸ್ವಂತ ಪ್ರತಿಭೆ, ಪರಿಶ್ರಮ ಮತ್ತು ಕಲ್ಪಕತೆಗಳ ಮೇಲೆ ತಮ್ಮ ವ್ಯಕ್ತಿತ್ವವನ್ನು ರೂಢಿಸಿಕೊಂಡವರು. ಪ್ರಸ್ತುತ ಕೃತಿಯು ಅತ್ಯಂತ ಸರಳವಾಗಿ ಅವರನ್ನು ಮತ್ತು ಅವರ ಸಾಧನೆಯನ್ನು ಪರಿಚಯಿಸುತ್ತದೆ.

About the Author

ಲಿಂಗದೇವರು ಹಳೆಮನೆ
(06 March 1949 - 08 June 2011)

ರಂಗಭೂಮಿ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ ಲಿಂಗದೇವರು ಹಳೆಮನೆ ಅವರು ಮೂಲತಃ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ಹಾಲುಗೊಣದವರು. 1949ರ ಮಾರ್ಚ್‌ 6ರಂದು ಜನಿಸಿದ ಅವರು ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿದ್ದರು. ಮೈಸೂರು ಕರ್ನಾಟಕ ನಾಟಕ ರಂಗಾಯಣದ ನಿರ್ದೇಶಕರಾಗಿದ್ದ ಅವರಿಗೆ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ, ಹಾಮಾನಾ ಪ್ರಶಸ್ತಿ, ಕೆ.ವಿ. ಸುಬ್ಬಣ್ಣ ನಾಟಕ ಪ್ರಶಸ್ತಿ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪಡೆದಿದ್ದರು. ಚಿಕ್ಕದೇವಭೂಪ, ಹೈದರ್, ಅಂತೆಂಬರ ಗಂಡ, ತಸ್ಕರ, ಶಾಪ, ಡಾ.ಬೇಥೂನ್‌, ಮಟಾಶ್‌ರಾಜ, ಧರ್ಮಪುರಿಯ ದೇವದಾಸ, ಮದರ್ ಕರೇಜ್‌, ಮನುಷ್ಯ ಅಂದ್ರೆ ಮನುಷ್ಯನೇ (ನಾಟಕಗಳು), ಕನ್ನಡ ಕಲಿ, ಭಾಷೆ, ಭಾಷೆ ...

READ MORE

Related Books