ಸನ್ ಶೂಯನ್ ಪ್ರಶಾಂತ ನೀಲಾಕಾಶ

Author : ಉಷಾಶ್ರೀ ಎಸ್

Pages 476

₹ 500.00




Year of Publication: 2021
Published by: ಸೃಷ್ಟಿ ಪಬ್ಲಿಕೇಷನ್ಸ್
Address: #121, 13 ನೇ ಮುಖ್ಯ ರಸ್ತೆ, ಎಂ. ಸಿ ಲೇಔಟ್, ವಿಜಯನಗರ, ಬೆಂಗಳೂರು-560040.
Phone: 9845096668

Synopsys

ಲೇಖಕಿ ಉಷಾಶ್ರೀ ಎಸ್ ಅವರ ’ಸನ್ ಶೂಯನ್ ಪ್ರಶಾಂತ ನೀಲಾಕಾಶ’ ಕೃತಿಯು ಚೀನಾದ ಇತಿಹಾಸವನ್ನು ಪ್ರಸ್ತುತಪಡಿಸುವ ಕೃತಿಯಾಗಿದೆ. ಇಲ್ಲಿ ಸನ್ ಶೂಯನ್ ಳ ಸಾಹಸಗಾಥೆಯು ವ್ಯಕ್ತವಾಗುತ್ತದೆ. ಸುಮಾರು 2500 ವರ್ಷಗಳ ಹಿಂದಿನ ಬುದ್ದನ ಮತ್ತು ಬೌದ್ಧಧರ್ಮದ ಪರಾಕಾಷ್ಠೆಯನ್ನು ಕಾಣಲು ಹ್ಯುಯೆನ್ ತ್ಸಾಂಗನು ಭಾರತಕ್ಕೆ ಮಹಾಪಯಣವನ್ನು ಕೈಗೊಂಡ ಎಂಬ ಇತಿಹಾಸವು ಇಲ್ಲಿದೆ. ಕುದುರೆ-ಒಂಟೆಗಳ ಜೊತೆಗೆ ಸತತ ಹದಿನೆಂಟು ವರ್ಷಗಳ ಕಾಲ ಅಡ್ಡಾಡಿ ಅವತ್ತಿಗೆ ಲಭ್ಯವಿದ್ದ ದಾಖಲೆಗಳನ್ನೆಲ್ಲ ಸಂಗ್ರಹಿಸಿ, ಆನೆಗಳ ಮೇಲೆ ಹೊತ್ತೊಯ್ದ ಹ್ಯುಯೆನ್ ತ್ಯಾಂಗ್ ನ ಚರಿತ್ರೆ ಓದುಗರಿಗೆ ವಿಶೇಷವೆನಿಸುತ್ತದೆ. ಚೀನಾದ ಯುವ ಪತ್ರಕರ್ತೆ, ಇತಿಹಾಸಕಾರ್ತಿ ಹಾಗೂ ಸಿನೆಮಾ ನಿರ್ದೇಶಕಿ ಸನ್ ಶೂಯನ್, ಹುಯೆನ್ ತ್ಯಾಂಗ್ ನ ಹೆಜ್ಜೆಯನ್ನು ಆಧರಿಸಿ ಸಿಲ್ಕ್ ರಸ್ತೆಗಳ ಮೂಲಕ ಬಸ್ಸಿನಲ್ಲಿ, ಟ್ರಕ್ಕಿನಲ್ಲಿ ಹಾಗೂ ರೈಲಿನಲ್ಲಿ ಅಲೆದಾಡಿದ ಸಾಹಸಮಯ ಪ್ರಯಾಣಗಾಥೆಯನ್ನು ವಿವರಿಸುತ್ತದೆ. ಮಧ್ಯಮ ಮಾರ್ಗದ ಬುದ್ಧನ ಉಪದೇಶಗಳು ಆಧುನಿಕ ಕಾಲದಲ್ಲಿಯೂ ಪ್ರಜಾಪ್ರಭುತ್ವವಾದೀ ನೆಲೆಯಲ್ಲಿ, ಕಮ್ಯುನಿಸಂ ಸೆಲೆಯಲ್ಲಿ ಹೇಗೆ ಮಾರಕಗೊಳ್ಳುತ್ತವೆ ಎಂಬುದು ದೊಡ್ಡ ವಿಸ್ಮಯಕ್ಕೆ ಕಾರಣವಾಗುತ್ತದೆ ಎಂಬುದನ್ನು ‘ಸನ್ ಶೂಯನ್ ಪ್ರಶಾಂತ ನೀಲಾಕಾಶ’ ಕೃತಿ ವಿವರಿಸುತ್ತದೆ.

About the Author

ಉಷಾಶ್ರೀ ಎಸ್

ಲೇಖಕಿ ಉಷಾಶ್ರೀ ಎಸ್  ಅವರು ಪರಿಸರ ವಿಷಯದಲ್ಲಿ ಎಂಜಿನಿಯರಿಂಗ್ ಪದವೀಧರರು. ವೃತ್ತಿಯಲ್ಲಿಮೆಕ್ಯಾನಿಕಲ್ ಎಂಜಿನಿಯರ್. ಓದುವುದು, ಕಥೆ ಹೇಳುವ-ಕೇಳುವ ಹವ್ಯಾಸಿಗರು. ಮನುಷ್ಯರ ನಡವಳಿಕೆ ಹಾಗೂ ಪ್ರಾಣಿ- ವೀಕ್ಷಣೆಯು ಇವರ ಆಸಕ್ತಿ ಕ್ಷೇತ್ರ. ಕೃತಿಗಳು: ಸನ್ ಶೂಯನ್ ಪ್ರಶಾಂತ ನೀಕಾಶಾಶ ...

READ MORE

Related Books