ಪಾರ್ವತೀಬಾಯಿ ಅಠವಳೆ

Author : ಲಲಿತಮ್ಮ ಡಾ. ಚಂದ್ರಶೇಖರ್

Pages 120

₹ 15.00




Year of Publication: 1976
Published by: ರಾಷ್ಟ್ರೋತ್ಥಾನ ಸಾಹಿತ್ಯ
Address: ಕೇಶವ ಶಿಲ್ಪ, ಕೆಂಪೇಗೌಡ ನಗರ, ಬೆಂಗಳೂರು-560019
Phone: 9945036300

Synopsys

ಪಾರ್ವತೀಬಾಯಿ ಅಠವಳೆ ಜೀವನಚರಿತ್ರೆ ಕೃತಿಯನ್ನು ಲೇಖಕಿ ಲಲಿತಮ್ಮ ಡಾ. ಚಂದ್ರಶೇಖರ್‌ ಅವರು ರಚಿಸಿದ್ದಾರೆ. ಈ ಕೃತಿಯಲ್ಲಿ ಚಿಕ್ಕ ವಯಸ್ಸಿನಲ್ಲಿ ಗಂಡನನ್ನು ಕಳೆದುಕೊಂಡರು. ವಿಧವೆಯರನ್ನು ತೀರ ತಿರಸ್ಕಾರದಿಂದ ಕಾಣುತ್ತಿದ್ದ ಸಮಾಜದಲ್ಲಿ ಕಷ್ಟ ಅನುಭವಿಸಿದರು. ವಿಧವಾಶ್ರಮಕ್ಕೆ ನೆರವಾಗಲು ತೀರ್ಮಾನಿಸಿ, ಶ್ರಮವನ್ನು ಲಕ್ಷಿಸದೆ ದುಡಿದರು. ಅಮೆರಿಕಕ್ಕೆ ಹೋದರು. ಅಲ್ಲಿ ಇಂಗ್ಲಿಷ್ ಕಲಿತು ಅಂತರರಾಷ್ಟ್ರೀಯ ಮಹಿಳಾ ಕೆಲಸಗಾರರ ಸಮ್ಮೇಳನಕ್ಕೆ ಭಾರತದ ಒಬ್ಬ ಪ್ರತಿನಿಧಿಯಾದರು. ಇವರ ಇಡೀ ಬಾಳು ವಿಧವೆಯರ ಸ್ಥಿತಿಯ ಸುಧಾರಣೆಗೆ ಮುಡಿಪು ಎಂದು ಕೃತಿಯ ಕುರಿತು ಇಲ್ಲಿ ವಿವರಿಸಲಾಗಿದೆ.

About the Author

ಲಲಿತಮ್ಮ ಡಾ. ಚಂದ್ರಶೇಖರ್
(07 October 1932)

ಲಲಿತಮ್ಮ ಡಾ. ಚಂದ್ರಶೇಖರ್ ಅವರು ಓದಿದ್ದು  ಎಸ್.ಎಸ್.ಎಲ್.ಸಿ.ವರೆಗೆ.  ರಾಷ್ಟ್ರಾಭಾಷಾ ವಿಶಾರದ ಪರೀಕ್ಷೆ ಮುಗಿಸಿದ್ದಾರೆ. 1932 ಅಕ್ಟೋಬರ್‌ 07ರಂದು ಜನಿಸಿದರು. ತಂದೆ ನಾರಾಯಣಪ್ಪ , ತಾಯಿ ಲಕ್ಷ್ಮೀನರಸಮ್ಮ. ಪ್ರಕಟಿತ ಕೃತಿಗಳು: ಉಡುಗೊರೆ (ಕವನ ಸಂಕಲನ), ಗೌರಿಪೂಜೆ (ಭಕ್ತಿಗೀತೆಗಳು), ಪರಿವರ್ತನೆ (ಕಥಾ ಸಂಕಲನ), ವೈದ್ಯರ ಮಡದಿ (ಜೀವನ ಚರಿತ್ರೆ), ಉಮಾತಂಗಿ (ವ್ಯಕ್ತಿಚಿತ್ರ), ಎಮ್ಮೆಯ ಖೆಡ್ಡಾ (ಹಾಸ್ಯ ಸಾಹಿತ್ಯ), ಆಂಜನೇಯ (ಆಧ್ಯಾತ್ಮಿಕ), ಬಣ್ಣದ ಗಿಲಕಿ (ಮಕ್ಕಳ ಸಾಹಿತ್ಯ), ಲೆಟರ್‌ಪ್ಯಾಡ್ (ಭಾಷಣ ಸಂಗ್ರಹ). ‘ಮಲ್ಲಿಗೆ ಚಪ್ಪರ, ತಪಸ್ವಿಗಳು, ಕೊಡಗಿನ ಗೌರಮ್ಮ, ಸ್ವಾಮಿ ಶಿವಾ ನಂದತೀರ್ಥರು, ವನಸುಮ, ಲಕ್ಷ್ಮಣ ರಾವ್ ಕಿರ್ಲೋಸ್ಕರ್‌, ರಶ್ಮಿ ಸರ್ಕಸ್ ಕಂಪನಿ, ಜಯಾ, ಮಗು ನೀ ನಗುತಿರು’ ಮುಂತಾದ ಕೃತಿಗಳನ್ನು ರಚಿಸಿದ್ದಾರೆ. ಅವರಿಗೆ ‘ಧಾರವಾಡ ...

READ MORE

Related Books