ಶ್ರೀ ಕೃಷ್ಣದೇವರಾಯನ ದಿನಚರಿ

Author : ಎಂ.ವಿ. ಸೀತಾರಾಮಯ್ಯ

Pages 92

₹ 80.00




Year of Publication: 2013
Published by: ಬಿ.ಎಂ.ಶ್ರೀ. ಸ್ಮಾರಕ ಪ್ರತಿಷ್ಠಾನ
Address: ಎಂ.ವಿ.ಸೀ-ಸಂಶೋಧನ ಕೇಂದ್ರ, 3ನೇ ಮುಖ್ಯರಸ್ತೆ, ನರಸಿಂಹರಾಜ ಕಾಲೋನಿ, ಬೆಂಗಳೂರು- 560 019
Phone: 26676773

Synopsys

‘ಶ್ರೀ ಕೃಷ್ಣದೇವರಾಯನ ದಿನಚರಿ’ ಕೃತಿಯ ಪ್ರಧಾನ ಸಂಪಾದಕರು ಪ್ರೊ. ಎಂ.ವಿ. ಸೀತಾರಾಮಯ್ಯ. ಆಳಾಗಲಿ ಅರಸಾಗಲಿ. ಆತನ ವ್ಯಕ್ತಿತ್ವ ಹೊಮ್ಮಿ ಬೆಳಕಿಗೆ ಬರುವುದು ಆತನ ನಡೆನುಡಿಗಳ ಮೂಲಕ ಈ ಬಖಾರಿನ ಕರ್ತರು ಇದನ್ನು ಕೃಷ್ಣದೇವರಾಯ ದಿನಚರಿಯ ಕೃತ್ಯಗಳ ವಿಸ್ತಾರ ಎಂದು ಕರೆದಿರುವುದರಿಂದ, ಕೃಷ್ಣದೇವರಾಯನ ಗೈಮೆ ಗರಿಮೆ ಹಿರಿಮೆಗಳನ್ನು ಬಿತ್ತರಿಸುವುದು ಇದರ ಮುಖ್ಯ ಉದ್ದೇಶವಾಗಿ ಕಾಣುತ್ತದೆ. ಪ್ರಮಾಣದ ದೃಷ್ಟಿಯಿಂದ ಕೃತಿ ಸಣ್ಣದು. ಆದರೆ ಅದರಲ್ಲಿ ಅಡಗಿರುವ ವಿಷಯದ ವ್ಯಾಪ್ತಿಯನ್ನು ಗಮನಿಸಿದರೆ ದಿನ ದಿನದ ಕೃತ್ಯಗಳ ವಿಸ್ತಾರ ಎಂಬ ಮಾತು ಈ ಕೃತಿಗೆ ಸಲ್ಲುತ್ತದೆ.

ಈ ದಿನಚರಿಯ ಒಕ್ಕಣೆ ಬಲುಮಟ್ಟಿಗೆ ವಸ್ತುನಿಷ್ಠವಾದ ದಾಖಲೆಯಾಗಿ ಪರಿಣಮಿಸಿದೆ, ಕೃಷ್ಣದೇವರಾಯನ ಮೊದಲ ಹತ್ತು ವರ್ಷಗಳ ಆಳ್ವಿಕೆಯ ಮುಖ್ಯ ಘಟನೆಗಳನ್ನು ಪ್ರತ್ಯಕ್ಷದರ್ಶಿಯ ವರದಿಯ ರೀತಿಯಲ್ಲಿ ನಿರೂಪಿಸುತ್ತದೆ. ಈ ದಿನಚರಿ ಕೃಷ್ಣದೇವರಾಯನ ಆಳ್ವಿಕೆಗೆ ಸಂಬಂಧಪಟ್ಟಂತೆ ಚರಿತ್ರೆ ಗ್ರಂಥಗಳಲ್ಲಿ ಕಾಣಸಿಕ್ಕಿದ ಕೆಲವು ವಿಚಾರಗಳನ್ನು ಹೇಳುವುದರಿಂದ ಐತಿಹಾಸಿಕ ಮೌಲ್ಯವುಳ್ಳದ್ದಾಗಿದೆ. ಚರಿತ್ರೆಯ ವಿದ್ಯಾರ್ಥಿಗಳು ಅಧ್ಯಯನ ಮಾಡಲು ಯೋಗ್ಯವಾಗಿದೆ. ಹೀಗಿದ್ದರೂ, ವಿಶಿಷ್ಟವಾದ ಗದ್ಯಶೈಲಿಯ ಈ ಕೃತಿಯಲ್ಲಿ ಸಾಹಿತ್ಯಗುಣಲೇಪವೂ ಸಹೃದರಿಗೆ ಗೋಚರಿಸದೆ ಇರದು. ಇಲ್ಲಿಯ ಶಬ್ದ ಪ್ರಯೋಗಗಳೂ ಗಮನಾರ್ಹ.

About the Author

ಎಂ.ವಿ. ಸೀತಾರಾಮಯ್ಯ
(09 September 1910 - 12 March 1990)

ರಾಘವ ಕಾವ್ಯನಾಮದ ಮೂಲಕ ಪರಿಚಿತರಾಗಿರುವ ಎಂ.ವಿ. ಸೀತಾರಾಮಯ್ಯ ಜನಿಸಿದ್ದು ಮೈಸೂರಿನಲ್ಲಿ.  ಮಕ್ಕಳಿಗಾಗಿ ಬರೆದ 'ಹೂವನು ಮಾರುತ ಹೂವಾಡಗಿತ್ತಿ' ಹಾಡು ಕನ್ನಡ ಭಾಷಾ ಪಠ್ಯಪುಸ್ತಕದಲ್ಲಿತ್ತು. ಕನ್ನಡ ಅಧ್ಯಾಪಕರಾಗಿದ್ದ ಇವರು ಸಾಹಿತ್ಯ ಕ್ಷೇತ್ರದಲ್ಲಿಯೂ ಮನೆಮಾತಾಗಿದ್ದರು.  ಕನ್ನಡ ಸಾಹಿತ್ಯಕ್ಕೆ ಇವರ ಕೊಡುಗೆಗಳೆಂದರೆ  ಹಕ್ಕಿಹಾಡು, ರಾಗ, ಅಶೋಕ ಚಕ್ರ (ಕವನ ಸಂಗ್ರಹಗಳು), ರಾಘವ, ಕವನ ಕೋಶ, ಆ ಚಿತ್ರಗಳು, ಹಕ್ಕಿ ಹಾಡು, ರತಿದೇವಿ ಮತ್ತು ಇತರ ಕಥೆಗಳು, ಬಿಸಿಲು ಬೆಳದಿಂಗಳು, ನಿಲ್ದಾಣಗಳ ನಡುವೆ (ಕಥಾ ಸಂಕಲನಗಳು), ಭಾಗ್ಯಲಕ್ಷ್ಮಿ, ನಂಜಿನ ಸವಿ, ಜೀವನದ ಜೊತೆಗಾರ (ಕಾದಂಬರಿಗಳು), ತೆರೆಮರೆಯ ಚಿತ್ರಗಳು, ತೊಟ್ಟಿಲು ತೂಗದ ಕೈ (ನಾಟಕಗಳು), ...

READ MORE

Related Books