ಕಲಾಂ ಮೇಷ್ಟ್ರು

Author : ಎಚ್.ಆರ್. ರಾಮಕೃಷ್ಣರಾವ್

Pages 145

₹ 125.00




Year of Publication: 2014
Published by: ಇಂಡಿಗೋ ಮಲ್ಟಿಮೀಡಿಯಾ,
Address: ಬೆಂಗಳೂರು

Synopsys

‘ಕಲಾಂ ಮೇಷ್ಟ್ರು’ ಎಂಬುದು ಲೇಖಕ ಎಚ್.ಆರ್. ರಾಮಕೃಷ್ಣರಾವ್ ಅವರು ಬರೆದ ಕೃತಿ. ಭಾರತದ ಮಾಜಿ ರಾಷ್ಟ್ರಪತಿ ಹಾಗೂ ಕ್ಷಿಪಣಿ ತಜ್ಞ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಬದುಕು ಹಾಗೂ ಸಾಧನೆ ಕುರಿತು ಮಹತ್ವದ ಮಾಹಿತಿ ನೀಡುವ ಕೃತಿ ಇದು. ಅವರಿಗೆ ಬೋಧನೆಯೂ ಆಸಕ್ತಿಕರ ವಿಷಯ. ಹೀಗಾಗಿ, ಜಾಗತಿಕವಾಗಿ ವಿಜ್ಞಾನ ತಂತ್ರಜ್ಞಾನ ಕುರಿತು ಆಗುತ್ತಿರುವ ಬದಲಾವಣೆಗಳ ಕುರಿತೂ ಅವರು ಉಪನ್ಯಾಸಗಳನ್ನು ನೀಡಿದ್ದಾರೆ. ಅವರ ಆಸಕ್ತಿಯ ಮತ್ತೊಂದು ಕ್ಷೇತ್ರ-ಮಕ್ಕಳು. ಈ ಮಕ್ಕಳನ್ನು ಕೇಂದ್ರೀಕರಿಸಿ ನೀಡಿರುವ ಅವರ ಅಸಂಖ್ಯ ವಿಚಾರಗಳು, ಸಲಹೆಗಳು, ಮುನ್ನೋಟಗಳು... ಹೀಗೆ ವಿಶೇಷತೆಗಳನ್ನು ಒಳಗೊಂಡಿರುವ ಕೃತಿ ಇದು. ಬರಹದ ಶೈಲಿಯು ತುಂಬಾ ಆಪ್ತವಾಗಿದೆ.

About the Author

ಎಚ್.ಆರ್. ರಾಮಕೃಷ್ಣರಾವ್
(30 May 1935)

ಪ್ರೊ. ಎಚ್.ಆರ್. ರಾಮಕೃಷ್ಣರಾವ್ ಅವರು ಕ್ರೈಸ್ಟ್ ಕಾಲೇಜಿನ ನಿವೃತ್ತ ಭೌತವಿಜ್ಞಾನ ಪ್ರಾಧ್ಯಾಪಕರು. ಉದಯಭಾನು ಉನ್ನತ ಅಧ್ಯಯನ ಕೇಂದ್ರದ ನಿರ್ದೇಶಕರಾಗಿ, ಮತ್ತು ಬೆಂಗಳೂರು ವಿಜ್ಞಾನ ವೇದಿಕೆಯ ಖಜಾಂಚಿಯಾಗಿ ಕೆಲಸ ಮಾಡುತ್ತಿದ್ದಾರೆ. ಖಭೌತ ವಿಜ್ಞಾನ ಇವರ ಆಸಕ್ತ ವಿಷಯವಾಗಿದ್ದು  ತಮ್ಮಲ್ಲಿದ್ದ ದೂರದರ್ಶಕವನ್ನು ಕರ್ನಾಟಕದ ಹಳ್ಳಿ-ಹಳ್ಳಿಗಳಿಗೆ ಹೋಗಿ ಜನರಿಗೆ ಆಕಾಶ ವೀಕ್ಷಣೆ ಮಾಡಿಸಿ, ವೈಜ್ಞಾನಿಕ ಅರಿವನ್ನು ಮೂಡಿಸಿದ್ದಾರೆ.  ಸಂಕ್ಷಿಪ್ತ ಖಗೋಳ ವಿಜ್ಞಾನ ಚರಿತ್ರೆ, ಕಲಾಂ ಮೇಷ್ಟ್ರು, 20ನೇ ಶತಮಾನದ ಭೌತವಿಜ್ಞಾನ, ಒಲವಿನ ಶಿಲೆ ಅಯಸ್ಕಾಂತ, ಅಂತರಿಕ್ಷ, ಶುಕ್ರಸಂಕ್ರಮ, ಬಿಗ್ ಬ್ಯಾಂಗ್, ಪ್ರಳಯ 2012, ಮುಂತಾದವುಗಳು ಇವರ ಪ್ರಮುಖ ಕೃತಿಗಳು.  ...

READ MORE

Related Books