ಚಾಂದ್ ಬೀಬಿ

Author : ಜ್ಯೋತ್ಸ್ನಾ ಕಾಮತ್

Pages 96

₹ 40.00




Year of Publication: 2017
Published by: ವಸಂತ ಪ್ರಕಾಶನ
Address: #360, 10ನೇ ಮುಖ್ಯ ರಸ್ತೆ, 3ನೇ ಬ್ಲಾಕ್, ಜಯನಗರ, ಬೆಂಗಳೂರು -560011

Synopsys

‘ಚಾಂದ್ ಬೀಬಿ’ ಕೃತಿಯು ಜ್ಯೋತ್ಸ್ನಾ ಕಾಮತ್ ಅವರ ವ್ಯಕ್ತಿಚಿತ್ರ ಮಾಲೆಯಾಗಿದೆ. ಕೃತಿಯ ಬೆನ್ನುಡಿಯಲ್ಲಿ ‘ಈ ವಿಖ್ಯಾತರ ವ್ಯಕ್ತಿಚಿತ್ರ ಮಾಲೆಯಲ್ಲಿ ಧರ್ಮ, ತತ್ವಶಾಸ್ತ್ರ, ಚರಿತ್ರೆ, ವಿಜ್ಞಾನ, ಅರ್ಥಶಾಸ್ತ್ರ, ಪರಿಸರ, ಉದ್ಯಮ, ರಾಜಕೀಯ, ಸುಧಾರಣೆ, ಸಾಹಿತ್ಯ ಸಂಗೀತ, ಲಲಿತ ಕಲೆ, ಕ್ರೀಡೆ ಮೊದಲಾದ ಕ್ಷೇತ್ರಗಳಲ್ಲಿ ಹೊಸ ಆವಿಷ್ಕಾರಗಳನ್ನೂ ಅದ್ವಿತೀಯ ಸಾಧನೆಗಳನ್ನೂ ಮಾಡಿದ ಮೇಧಾವಿಗಳ ಜೀವನಚಿತ್ರಗಳಿವೆ. ಇವುಗಳಲ್ಲಿ ಪ್ರತಿಯೊಬ್ಬ ಮೇಧಾವಿಯ ವಿಚಾರಗಳನ್ನು ಅವರ ಕಾಲದ ಸಾಮಾಜಿಕ ಹಾಗೂ ಬೌದ್ಧಿಕ ಪರಿಸರದಲ್ಲಿಟ್ಟು ವಿಶ್ಲೇಷಿಸಲಾಗಿದೆ. ಸಮಾಜದ ಮೇಲೆ ಆ ಮೇಧಾವಿ ಬೀರಿದ ಪ್ರಭಾವ, ಮನುಷ್ಯನನ್ನೂ ಪರಿಸರವನ್ನೂ ಅರ್ಥಮಾಡಿಕೊಳ್ಳುವ ದಿಸೆಯಲ್ಲಿ ಅವರು ನೀಡಿರುವ ನಿರ್ದಿಷ್ಟ ಕೊಡುಗೆ, ಅವರ ವಿಚಾರಗಳ ಸ್ಫೂರ್ತಿಯಿಂದ ರೂಪುಗೊಂಡಿರುವ ಜೀವನಕ್ರಮ, ಇವುಗಳನ್ನೂ ವಿವರಿಸಲಾಗಿದೆ. ಸಾಧ್ಯವಾದ ಕಡೆಗಳಲ್ಲೆಲ್ಲ ಮೇಧಾವಿಗಳ ಮಾತುಗಳಿಂದ, ಬರವಣಿಗೆಗಳಿಂದ ಸೂಕ್ತವೆಂದು ಕಂಡುಬಂದ ಭಾಗಗಳನ್ನು ಉದ್ಧರಿಸಲಾಗಿದೆ. ಹೊಸ ಸಿದ್ಧಾಂತಗಳನ್ನು ಸೃಷ್ಟಿಸಿದವರ ಹೊಸ ಚಳವಳಿಗಳನ್ನು ಸ್ಥಾಪಿಸಿದವರ, ತಮ್ಮ ತಮ್ಮ ಕ್ಷೇತ್ರಗಳಲ್ಲಿ ಮಹತ್ವದ ಪ್ರಭಾವವೂ ಘನತೆಯೂ ಇದ್ದು, ಆವಿಷ್ಕಾರಗಳನ್ನು, ಅದ್ವಿತೀಯ ಸಂಯೋಜನೆಯನ್ನೂ ಮಾಡಿದವರ ಬಗೆಗೆ ವಿಶೇಷ ಗಮನ ನೀಡಲಾಗಿದೆ. ಒಟ್ಟಿನಲ್ಲಿ ಪುಸ್ತಕಗಳು ಸಂತೋಷದಿಂದ ಓದಬಲ್ಲ ಕೃತಿಗಳಾಗಿರುವಂತೆಯೇ ನಮ್ಮ ನಾಗರಿಕತೆಯನ್ನು, ಅದರ ವಿಕಾಸದ ವೈಚಾರಿಕ ಹಾಗೂ ಆಧ್ಯಾತ್ಮಿಕ ಸ್ತೋತ್ರಗಳನ್ನು, ಭವಿಷ್ಯದ ಒಲವು ನಿಲುವುಗಳನ್ನು ತಿಳಿಯಲು  ಸಹಾಯಕವಾಗಿವೆ. ಇವುಗಳನ್ನು ಓದುವ ಮೂಲಕ ತಮ್ಮ ಜೀವನದರ್ಶನ ಏನೆಂದು ಸ್ಪಷ್ಟಪಡಿಸಿಕೊಳ್ಳಬಲ್ಲ ಕೆಲವರಾದರೂ ಭವಿಷ್ಯದಲ್ಲಿ ಸ್ವತಃ ಮೇಧಾವಿಗಳಾದರೆ ಆಶ್ಚರ್ಯವಿಲ್ಲ ಎಂದು ವಿಶ್ಲೇಷಿಸಲಾಗಿದೆ. 

About the Author

ಜ್ಯೋತ್ಸ್ನಾ ಕಾಮತ್
(24 January 1937 - 24 August 2022)

ಸಂಶೋಧಕಿ, ಸ್ತ್ರೀ ಚಿಂತನೆಯ ಕನ್ನಡದ ಬರಹಗಾರ್ತಿ ಜ್ಯೋತ್ಸ್ನಾ ಕಾಮತ್ ಅವರು 1937 ಜನವರಿ 24 ರಂದು ಮಹಾರಾಷ್ಟ್ರದ ಸಾತಾರ ಜಿಲ್ಲೆಯ ವಾಯಿಯಲ್ಲಿ ಜನಿಸಿದರು. ‘ಸಂಸಾರದಲ್ಲಿ ಸ್ವಾರಸ್ಯ, ಹೀಗಿದ್ದೇವೆ ನಾವು, ನಗೆಕೇದಿಗೆ’ ಅವರ ಪ್ರಬಂಧ ಸಂಕಲನಗಳು. ‘ಕರ್ನಾಟಕದಲ್ಲಿ ಶಿಕ್ಷಣ ಪರಂಪರೆ, ಕರುನಾಡಿನ ಜನಜೀವನ, ಕೈಗನ್ನಡಿಯಲ್ಲಿ ಕನ್ನಡತಿ’ ಅವರ ಸಂಶೋಧನಾ ಕೃತಿಗಳು. ‘ಮಹಿಳೆ ಒಂದು ಅಧ್ಯಯನ, ನೆನಪಿನಲ್ಲಿ ನಿಂತವರು, ಮಹಿಳೆ ಅಂದು-ಇಂದು’ ಅವರ ಮಹಿಳಾ ಅಧ್ಯಯನ ಕೃತಿಗಳು. ಇದಲ್ಲದೆ ಶಾಂತಲೆ-ವಿಷ್ಣುವರ್ಧನ, ಕಮಲಾದೇವಿ ಚಟ್ಟೋಪಾಧ್ಯಾಯರ ಜೀವನ ಕೃತಿಗಳನ್ನು ರಚಿಸಿದ್ದು ಅವರ ಈ ಸಾಹಿತ್ಯ ಸೇವೆಗೆ ‘ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ, ಕರ್ನಾಟಕ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ, ಕೆ.ಶಾಮರಾವ್ ದತ್ತಿನಿಧಿ ಪುರಸ್ಕಾರ, ...

READ MORE

Related Books