ರಾಮಕೃಷ್ಣ ಬುವಾ ವಝೆ

Author : ಎನ್‌. ಶ್ರೀನಿವಾಸ ಉಡುಪ

Pages 102

₹ 15.00




Year of Publication: 1979
Published by: ರಾಷ್ಟ್ರೋತ್ಥಾನ ಸಾಹಿತ್ಯ
Address: ಕೇಶವ ಶಿಲ್ಪ, ಕೆಂಪೇಗೌಡ ನಗರ, ಬೆಂಗಳೂರು-560019.
Phone: 9945036300

Synopsys

ರಾಮಕೃಷ್ಣ ಬುವಾ ವಝೆ ಜೀವನಚರಿತ್ರೆ ಪುಸ್ತಕವನ್ನು ಲೇಖಕ ಶ್ರೀನಿವಾಸ ಉಡುಪ ಅವರು ರಚಿಸಿದ್ದಾರೆ. ಈ ಕೃತಿಯಲ್ಲಿ ಕಡುಬಡತನವನ್ನು ಎದುರಿಸಿ, ಗುರುಗಳನ್ನು ಬೇಡಿ ಸಂಗೀತ ಕಲಿತರು. ತಮ್ಮ ಕಾಲದ ಶ್ರೇಷ್ಠ ಸಂಗೀತಗಾರರಲ್ಲಿ ಒಬ್ಬರೆನಿಸಿದರು. ದ್ವೇಷ, ಅಸೂಯೆಗಳು ಅವರ ಬಳಿ ಸುಳಿಯಲಿಲ್ಲ ಎಂದು ರಾಮಕೃಷ್ಣ ಬುವಾ ವಝೆ ಅವರ ಕುರಿತು ಇಲ್ಲಿ ವಿವರಿಸಲಾಗಿದೆ. ರಾಮಕೃಷ್ಣ ಬುವಾ ವಝೆ ಅವರ ಬಾಲ್ಯ ಜೀವನ, ಬಡತನ ಮೆಟ್ಟಿ ನಿಂತ ಬಗೆ, ಸಂಗೀತ ಪಯಣ, ಸಾದನೆಗಳು, ಬದುಕಿನ ಏಳು ಬೀಳುಗಳು, ಗುರುಗಳ ಜೊತೆ ಹೊಂದಿದ ಅವನಾಭಾವ ಸಂಬಂಧ ಹೀಗೆ ರಾಮಕೃಷ್ಣ ಬುವಾ ವಝೆ ಅವರ ಬಾದುಕಿನ ಹಲವು ಆಯಾಮಗಳನ್ನು ಲೇಖಕರು ಇಲ್ಲಿ ಸುಂದರವಾಗಿ ಚಿತ್ರಿಸಿದ್ದಾರೆ.

About the Author

ಎನ್‌. ಶ್ರೀನಿವಾಸ ಉಡುಪ

ತಮ್ಮ ಅನನ್ಯ ಮಕ್ಕಳ ಸಾಹಿತ್ಯ ರಚನೆಯ ಮೂಲಕ ಮಕ್ಕಳ ಮನಸ್ಸನ್ನು ಗೆದ್ದವರು ಎನ್‌. ಶ್ರೀನಿವಾಸ ಉಡುಪ. ಅವರು 1935 ಆಗಸ್ಟ್‌ 15ರಂದು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ಜನಿಸಿದರು. ತಂದೆ ಎನ್‌. ವೆಂಕಟೇಶ ಉಡುಪ, ತಾಯಿ ಮಹಾಲಕ್ಷ್ಮಿ. ತಮ್ಮ ವಿದ್ಯಾಭ್ಯಾಸದ ನಂತರ ತುಂಗಾ ಕಾಲೇಜಿನಲ್ಲಿ ದೀರ್ಘ ಕಾಲ ಇಂಗ್ಲೀಷ್ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದಾರೆ. ತೀರ್ಥಹಳ್ಳಿಯ ಪ್ರಥಮ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ಅಲಂಕರಿಸಿದ್ದರು. ‘ಪಾಪು ಪದ್ಯಗಳು, ಕನ್ನಡ ನಾಡಿನ ಕೂಸುಮರಿ, ಕುಂಭಕರ್ಣನ ನಿದ್ದೆ’ ಅವರ ಮಕ್ಕಳ ಕವನ ಸಂಕಲನಗಳಾಗಿದ್ದು ‘ಹಿಡಿಂಬನ ತೋಟ, ಬೆರಳುಗಳು’ ಹೀಗೆ ಮಕ್ಕಳ ನಾಟಕಗಳನ್ನು ರಚಿಸಿದ್ದಾರೆ. ‘ಗೂಬಜ್ಜಿಯ ...

READ MORE

Related Books